ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಕುಶಲ ಸರಕು ರಫ್ತು ಕುಸಿತ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೇ ತಿಂಗಳಲ್ಲಿ ಶೇ 12ರಷ್ಟು ಪ್ರಗತಿ ಕಂಡಿದ್ದ ಕರಕುಶಲ ವಸ್ತುಗಳ ರಫ್ತು ಜೂನ್‌ನಲ್ಲಿ ಮತ್ತೆ ಶೇ 3ರಷ್ಟು ಕುಸಿದಿದೆ. ಅಮೆರಿಕ, ಯೂರೋಪ್ ಸೇರಿದಂತೆ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬೇಡಿಕೆ ಕುಸಿದಿರುವುದರಿಂದ ಜೂನ್‌ನಲ್ಲಿ 161 ದಶಲಕ್ಷ ಡಾಲರ್‌ಗಳಷ್ಟು ವಹಿವಾಟು ನಡೆದಿದೆ. ಕಳೆದ ವರ್ಷದ (2011) ಜೂನ್‌ನಲ್ಲಿ 166 ದಶಲಕ್ಷ ಡಾಲರ್‌ಗಳಷ್ಟು ವಹಿವಾಟು ನಡೆದಿತ್ತು ಎಂದು ಕರಕುಶಲ ವಸ್ತು ರಫ್ತು ಉತ್ತೇಜನ ಮಂಡಳಿ (ಇಪಿಸಿಎಚ್) ಹೇಳಿದೆ. 

ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗೆ ದೇಶದಿಂದ ಶೇ 60ರಷ್ಟು ಕರಕುಶಲ ಸರಕುಗಳು ರಫ್ತಾಗುತ್ತವೆ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಈ ಮಾರುಕಟ್ಟೆಗಳಲ್ಲಿ ಬೇಡಿಕೆ ಕುಸಿದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT