ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರವೇಯಿಂದ ಠಾಕ್ರೆ ಪ್ರತಿಕೃತಿ ದಹನ

Last Updated 26 ನವೆಂಬರ್ 2011, 7:05 IST
ಅಕ್ಷರ ಗಾತ್ರ

ಹಾವೇರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಅವಮಾನಿಸಿದ ಮಹಾರಾಷ್ಟ್ರ ಶಿವಸೈನ್ಯ ಮುಖ್ಯಸ್ಥ ಬಾಳಾ ಠಾಕ್ರೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರಲ್ಲದೇ, ಹೊಸ ಮನಿ ಸಿದ್ಧಪ್ಪ ವೃತ್ತದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ, ಠಾಕ್ರೆ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಗೂಂಡಾಗಳಂತೆ ವರ್ತಿಸುತ್ತಿರುವ ಎಂಇಎಸ್ ಕಾರ್ಯಕರ್ತರ ಹಾಗೂ ಬಾಳ ಠಾಕ್ರೆ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕನ್ನಡ ರಾಜ್ಯೋತ್ಸವ ವಿರೋಧಿಸಿ ಬೆಳಗಾವಿ ಎಂ.ಇ.ಎಸ್ ಕಾರ್ಯಕರ್ತರು ಕರಾಳ ದಿನ ಆಚರಿಸಿರುವುದನ್ನು ಖಂಡಿಸಿದರು.

ಕರಾಳ ದಿನಾಚರಣೆಯಲ್ಲಿ ಬೆಳ ಗಾವಿಯ ಮಹಾನಗರ ಪಾಲಿಕೆಯ ಮೇಯರ್ ಅವರು ಪಾಲ್ಗೊಳ್ಳುವ ಮೂಲಕ ರಾಜ್ಯಕ್ಕೆ ಹಾಗೂ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ತಕ್ಷಣವೇ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಾಡು, ನುಡಿಗೆ ದ್ರೋಹ ಎಸಗಿರುವ ಮೇಯರ್ ಹಾಗೂ ಉಪ ಮೇಯರ್‌ಗಳನ್ನು ತಕ್ಷಣವೇ ವಜಾಗೊಳಿಸಬೇಕಿತ್ತು. ಆದರೆ ಸರ್ಕಾರ ಇಲ್ಲಿವರೆಗೆ ಯವುದೇ ಕಠಿಣ ಕ್ರಮ ಕೈಗೊಳ್ಳದೇ ನಾಡದ್ರೋಹಿಗಳ ಬಗ್ಗೆ ಮೃದು ಧೋರಣೆ ತಾಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ತಕ್ಷಣವೇ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು ಮತ್ತು  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಸೊಂಟ ಮುರಿಯಬೇಕೆಂದು ಹೇಳುವ ಮೂಲಕ ರೌಡಿಯಂತೆ ವರ್ತಿಸಿರುವ ಮಹಾ  ರಾಷ್ಟ್ರದ ಬಾಳಾ ಠಾಕ್ರೆ ಅವರಿಗೆ ಬುದ್ದಿ ಕಲಿಸಬೇಕಲ್ಲದೇ, ರಾಜ್ಯದಲ್ಲಿ ತಕ್ಷಣವೇ ಎಂ.ಇ.ಎಸ್ ಸಂಘಟನೆಯನ್ನು ವಜಾ ಗೊಳಿಸಬೇಕು. ಎಂ.ಇ.ಎಸ್ ಗೂಂಡಾ ಗಳನ್ನು ಬಂಧಿಸಬೇಕು ಎಂದು ಒತ್ತಾ ಯಿಸಿರುವ ಪ್ರತಿಭಟನಾಕಾರರು, ಎಂ.ಇ.ಎಸ್ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಒತ್ತಾಯಿ ಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕರಬಸಯ್ಯ ಬಸರಿ ಹಳ್ಳಿಮಠ,  ಈರಣ್ಣ ನೀರಲಗಿ, ಗಿರೀಶ ಬಾರ್ಕಿ,  ನಿತ್ಯಾನಂದ ಕುಂದಾ ಪುರ, ಜಯರುದ್ದಿನ ಬೆಂಕಿಪುರ, ಎ.ಬಿ. ಪರಮೇಶ್ವರಪ್ಪ, ರವಿ ಮೂಲಿಮನಿ, ನಾಗರಾಜ ಸುಣಗಾರ, ವಿಜಯ ಕುಮಾರ ಕಳಸದ, ಮಂಜುನಾಥ ಬರಡಿ, ಮಾಲತೇಶ ದೇವಗಿರಿ, ಮಲ್ಲಿಕಾರ್ಜುನ ದೇವರ ಗುಡ್ಡ, ಬಸಣ್ಣ ಎಲಿಗಾರ ಮತ್ತಿತರರು ಭಾಗವಹಿ ಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT