ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ: ಕರ್ನಾಟಕಕ್ಕೆ ಎಂಟು ಪದಕ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಕರಾಟೆ ಸ್ಪರ್ಧಿಗಳು ಚೆನ್ನೈಯಲ್ಲಿ ಇತ್ತೀಚಿಗೆ ನಡೆದ 5ನೇ ಏಷ್ಯನ್ ಗುಜು ರೇ ಡೂ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಎಂಟು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಜೆ.ಜೆ. ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 55-60 ಕೆ.ಜಿ. ಕುಮಿತೆ ವಿಭಾಗದಲ್ಲಿ ಮಂಡ್ಯ ಜಿಲ್ಲೆಯ  ಡಿ. ಅರುಣ್ ಚಿನ್ನದ ಪದಕ ಜಯಿಸಿದರು. 10 ವರ್ಷದೊಳಗಿನವರಲ್ಲಿ ಕೃಪಾಲಿ ಪೂಣಚ್ಚ ಕಂಚಿನ ಪದಕ ಗೆದ್ದುಕೊಂಡರು.

ಇದೇ ವಯೋಮಾನದ ಬಾಲಕರಲ್ಲಿ ರಿತ್ವಿಕ್ ರೆಡ್ಡಿ (ಕಂಚು), ಮೋಹಿತ್ ರೆಡ್ಡಿ (ಬೆಳ್ಳಿ), 50 ಕೆ.ಜಿ. ಒಳಗಿನ ವಿಭಾಗದಲ್ಲಿ ದರ್ಶನ್ ಗೌಡ (ಕಂಚು), 70 ಕೆ.ಜಿ. ಮೇಲ್ಪಟ್ಟವರಲ್ಲಿ ಕೆ.ಬಿ. ಮನು (ಕಂಚು), 9-10 ವರ್ಷದೊಳಗಿನವರಲ್ಲಿ ಸುಮಂತ್ (ಬೆಳ್ಳಿ) ಗೆದ್ದರು.

ಕುಮಿತೆ ವಿಭಾಗದ 11-12 ವರ್ಷದೊಳಗಿನವರಲ್ಲಿ ಜಿ.ಎಸ್. ಪ್ರೀತಮ್ ಬೆಳ್ಳಿ ಜಯಿಸಿದರು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ. ಕರಾಟೆ ಮಾಸ್ಟರ್ ಹಾಗೂ ಕೋಚ್ ಸಹ ಆಗಿರುವ ರಾಜ್ಯದ ವಸಂತ್ ಪೂವಯ್ಯ ಅತ್ಯುತ್ತಮ ರೆಫರಿ ಗೌರವ ಪಡೆದರು. ಕರ್ನಾಟಕದ 16 ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT