ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ ಕ್ಲಬ್ ವಿದ್ಯಾರ್ಥಿಗಳ ಸಾಧನೆ

Last Updated 6 ಫೆಬ್ರುವರಿ 2012, 7:20 IST
ಅಕ್ಷರ ಗಾತ್ರ

ಗದಗ: ನಗರದ ಚೇತನ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು ಈಚೆಗೆ ಹುಬ್ಬಳ್ಳಿ ಯಲ್ಲಿ ನಡೆದ 6ನೇ ಬೂಡೋ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕ್ಲಬ್‌ನ 14 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ 18 ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಮಂಜುನಾಥ ಅಂಗಡಿ (ಕುಮಿಟೆ ದ್ವಿತೀಯ), ಅಶ್ವಿನಿ ಚವಡಿ (ಕುಮಿಟೆ ಹಾಗೂ ಗ್ರುಪ್ ಕಟಾಜ್ ಪ್ರಥಮ), ಗಂಗಪ್ಪ ಇಳಕಲ್ಲ (ಕಮಿಟೆ ದ್ವಿತೀಯ), ಪ್ರವೀಣ ಕಾಂಬಳೆ (ಕುಮಿಟೆ ಪ್ರಥಮ, ಗ್ರುಪ್ ಕಟಾಜ್ ದ್ವಿತೀಯ), ವಿದ್ಯಾ ಕಲ್ಮನಿ (ಕಮಿಟೆ ಪ್ರಥಮ, ಕಟಾಜ್ ದ್ವಿತೀಯ, ಗ್ರುಪ್ ಕಟಾಜ್ ಪ್ರಥಮ), ಆನಂದ ವಾಲ್ಮೀಕಿ (ಕುಮಿಟೆ ತೃತೀಯ), ಚೇತನ ಹಬೀಬ (ಕುಮಿಟೆ ಪ್ರಥಮ, ಕಟಾ ದ್ವಿತೀಯ), ಕಾರ್ತಿಕ ಕಲ್ಮನಿ (ಕುಮಿಟೆ, ಕಟಾಜ್ ಪ್ರಥಮ), ಶ್ರೀದೇವಿ ಓದ್ಸುಮಠ (ಗ್ರುಪ್ ಕಟಾಜ್ ಪ್ರಥಮ) ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವಿದ್ಯಾರ್ಥಿಗಳನ್ನು ಚೇತನ ಕರಾಟೆ ಕ್ಲಬ್‌ನ ಶಿಕ್ಷಕ ಪರಶುರಾಮ ಹಬೀಬ,  ಜೆ.ಪಿ. ಅಡಿಗ, ಅಡಿವೆಪ್ಪ ಮೆಣಸಗಿ ಅಭಿನಂದಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT