ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಟೆ: ಚಿನ್ನ ಗೆದ್ದ ಗದ್ದೆಪ್ಪ ಕೊರವರ

Last Updated 1 ಜನವರಿ 2014, 6:06 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಮಾಸ್ಕೋಡಿ-ಡೊ ಫೆಡರೇಶನ್ ಆಫ್ ಇಂಡಿಯಾ (ಕರಾಟೆ) ಆಶ್ರಯದಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ 70–-75 ಕೆಜಿ ವಿಭಾಗದಲ್ಲಿ  ಮುದ್ದೇಬಿಹಾಳದ ಗದ್ದೆಪ್ಪ ಕೊರವರ ಚಿನ್ನದ ಪದಕ ಪಡೆದಿದ್ದಾರೆ. 45-–50 ಕೆಜಿ ವಿಭಾಗದಿಂದ ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಮುತ್ತವ್ವ ಕಾಂಬಳೆ ಎಂಬ ವಿದ್ಯಾರ್ಥಿ­ಗಳು ಪ್ರಥಮ ಸ್ಥಾನ ಪಡೆಯುವ ಮೂಲಕ  ರಾಜ್ಯಕ್ಕೆ ಚಿನ್ನದ ಪದಕ ತಂದಿದ್ದಾರೆ.

ರಾಷ್ಟ್ರಮಟ್ಟದ ಟೂರ್ನಿಯಲ್ಲಿ ದೇಶದ 20 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ಕರ್ನಾಟಕದಿಂದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುದ್ದೇಬಿಹಾಳದ ಶಿವುಕುಮಾರ ಶಾರದಳ್ಳಿ ಚೇತನ ಕೆಂದೂಳಿ ಅವರ ನೇತೃತ್ವ­ದಲ್ಲಿ ಒಟ್ಟು 17 ಜನ ಸದಸ್ಯರು ದೆಹಲಿಗೆ ತೆರಳಿದ್ದರು.

ಅಂತಿಮವಾಗಿ ತಂಡದ ಪರವಾಗಿ ವಿವಿಧ ವಿಭಾಗಗಳಲ್ಲಿ  14 ವಿದ್ಯಾರ್ಥಿಗಳು ರಾಜ್ಯವನ್ನು ಪ್ರತಿನಿಧಿಸಿ ಪಂದ್ಯಾವಳಿಯಲ್ಲಿ ಒಟ್ಟು 5 ವಿಭಾಗಗಳಲ್ಲಿ ಗೆಲುವು ಸಾಧಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಗದ್ದೆಪ್ಪ ಅವರನ್ನು ಅವರ ತರಬೇತುದಾರರು ಅಭಿನಂದಿಸಿದ್ದಾರೆ.

ಜಯ ಗಳಿಸಿದ ರಾಜ್ಯದ ಇತರ ವಿದ್ಯಾರ್ಥಿಗಳು: ಗದ್ದೆಪ್ಪ ಕೊರವರ ಮುದ್ದೇಬಿಹಾಳ (ಚಿನ್ನ), ಮುತ್ತವ್ವ ಕಾಂಬಳೆ ಮುಧೋಳ (ಚಿನ್ನ), ಚಿದಾನಂದ ರಾಠೋಡ (ಬೆಳ್ಳಿ)ಮುದ್ದೇಬಿಹಾಳ, ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮೂಳೆ ಗ್ರಾಮದ ಸುನೀಲ ಮುದ್ದೇಬಿಹಾಳ(ಕಂಚು) ಹಾಗೂ ಅಮೀತ ಮಲ್ಲುಕಾನ(ಕಂಚು). ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT