ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಕಲೆ ಸಂಸ್ಕೃತಿಯ ತವರು: ಆಚಾರ್ಯ

Last Updated 1 ಜೂನ್ 2011, 7:30 IST
ಅಕ್ಷರ ಗಾತ್ರ

ಬ್ರಹ್ಮಾವರ: ಧಾರ್ಮಿಕ ಕೇಂದ್ರಗಳು ಇಂದು ಅನೇಕ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿರುವುದರಿಂದ ಯುವ ಪೀಳಿಗೆಯಲ್ಲಿ ಧರ್ಮದ ಜಾಗೃತಿ ಮೂಡಿದೆ. ದೇವಸ್ಥಾನಗಳಿಂದ ನಮ್ಮ ಕರಾವಳಿಯ ಅನೇಕ ವಿಧದ ಕಲೆ, ಸಂಸ್ಕೃತಿ ಇಂದಿಗೂ ಉಳಿದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಅಭಿಪ್ರಾಯಪಟ್ಟರು.

ಉಪ್ಪೂರು ಜಾತಬೆಟ್ಟು ಶ್ರೀ ಚಿತ್ತಾರಿ ಮಹಾಬಲೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಅವರು ನೂತನ ಭೋಜನ ಶಾಲೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಸಮುದಾಯ ಭವನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಉಡುಪಿ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಧಾರ್ಮಿಕ ಮತ್ತು ಜ್ಞಾನಾರ್ಜನೆಗೆ ಪೂರಕವಾದ ಕಾರ್ಯಗಳು ಜೊತೆ ಜೊತೆಯಾಗಿ ನಡೆದಲ್ಲಿ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ. ಧರ್ಮಕ್ಕೆ ವಿರೋಧವಾದ ಸಂಪತ್ತನ್ನು ಪಡೆಯುವುದು ಎಂದಿಗೂ ಸಲ್ಲದು. ಮನಃಶಾಂತಿ, ನೆಮ್ಮದಿಗಾಗಿ ಭಗವಂತನ ಧ್ಯಾನ ಮುಖ್ಯ ಎಂದು ಹೇಳಿದರು.

ಉಪ್ಪೂರು ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ.ರಘುಪತಿ ಭಟ್, ಹೊಟೇಲ್ ಉದ್ಯಮಿ ರಾಧಾಕೃಷ್ಣ ಟಿ.ಶೆಟ್ಟಿ, ಉದ್ಯಮಿಗಳಾದ ಸಂತೋಷ್ ಕೋಟ್ಯಾನ್, ಶ್ಯಾಮ ಪೂಜಾರಿ, ದೇವಳ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಯು.ಪರಮೇಶ್ವರ ಮಧ್ಯಸ್ಥ, ಹೂವಯ್ಯ ಶೇರ್ವೆಗಾರ್, ಯು.ಕರುಣಾಕರ ರಾವ್, ಯು.ಎಲ್.ಭಟ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT