ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಮಳೆ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಒಳನಾಡಿನ ಕೆಲವೆಡೆ ಹಾಗೂ ಕರಾವಳಿಯ ಅಲ್ಲಲ್ಲಿ ಮಳೆಯಾಗಿದೆ. ನವಲಗುಂದದಲ್ಲಿ 13 ಸೆಂ.ಮೀ.ಮಳೆಯಾಗಿದೆ.

ಸವಣೂರು 9, ಬಂಗಾರಪೇಟೆ, ಬೆಂಗಳೂರು ನಗರ, ಹರಪನಹಳ್ಳಿ 8, ಸುಬ್ರಹ್ಮಣ್ಯ, ಹುಬ್ಬಳ್ಳಿ, ನಾಗಮಂಗಲ 7, ಧರ್ಮಸ್ಥಳ, ಹಿರೇಕೆರೂರು, ಕಾರಟಗಿ, ಸೇಡಂ, ಬಳ್ಳಾರಿ 6, ಕಳಸ, ದಾವಣಗೆರೆ, ಮಾಗಡಿ 5ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ. ಕರಾವಳಿಯ ಜಿಲ್ಲೆಗಳು, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸವದತ್ತಿ, ಕುಂದಗೋಳ, ಶಿಗ್ಗಾವಿ, ಗುತ್ತಲ, ರಾಣೆಬೆನ್ನೂರು, ತಾಳಿಕೋಟೆ, ಸಿಂಧಗಿ, ಗದಗ, ಗುಲ್ಬರ್ಗ, ಸಕಲೇಶಪುರ, ಹಳ್ಳಿಮೈಸೂರು, ಕೆ.ಆರ್.ಪೇಟೆ, ಮಂಡ್ಯ, ಮಾಲೂರು, ಗೋಪಾಲನಗರ, ಯಲಹಂಕ, ಬೆಂಗಳೂರು ವಿಮಾನ ನಿಲ್ದಾಣ, ಹೊಸದುರ್ಗ, ತಿಪಟೂರು, ಕನಕಪುರ 2, ಹಾನಗಲ್, ಕಾಗಿನೆಲೆ, ರಟ್ಟೀಹಳ್ಳಿ, ಶಿರಹಟ್ಟಿ, ರೋಣ, ಗಂಗಾವತಿ, ಬಸವನ ಬಾಗೇವಾಡಿ, ದೇವರಹಿಪ್ಪರಗಿ, ಶಿಕಾರಿಪುರ, ಶೃಂಗೇರಿ, ಬಾಳೆಹೊನ್ನೂರು, ಲಿಂಗದಹಳ್ಳಿ, ಅರಕಲಗೋಡು, ಕೋಣನೂರು, ಹಾಸನ, ತಿಪ್ಪಗೊಂಡನಹಳ್ಳಿ, ಹೊನಕೆರೆ, ಮಳವಳ್ಳಿ, ಮದ್ದೂರು, ಹೊಸಕೋಟೆ, ಉಚ್ಚಂಗಿದುರ್ಗ, ಹೊಳಲ್ಕೆರೆ, ಚನ್ನಪಟ್ಟಣದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT