ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಸಿದ್ಧೇಶ್ವರ ಶಿವಾಚಾರ್ಯ ನಿಧನ

Last Updated 18 ಜನವರಿ 2013, 19:59 IST
ಅಕ್ಷರ ಗಾತ್ರ

ಕಂಪ್ಲಿ (ಬಳ್ಳಾರಿ ಜಿಲ್ಲೆ):  ಇಲ್ಲಿಗೆ ಸಮೀಪದ ಬುಕ್ಕಸಾಗರ ಗ್ರಾಮದ ಕರಿಸಿದ್ಧೇಶ್ವರ ಸಂಸ್ಥಾನ ಮಠದ 32ನೇ ಪೀಠಾಧಿಪತಿ ಕರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ (80) ಶುಕ್ರವಾರ ಬೆಳಿಗ್ಗೆ ಲಿಂಗೈಕ್ಯರಾದರು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಬೆಳಲಗೆರೆ ದೊಡ್ಡ ಮಠದ ಬಸಪ್ಪಯ್ಯ ಮತ್ತು ಗಂಗಮ್ಮ ದಂಪತಿಯ ಪುತ್ರರಾದ ಅವರು 1969ರ  ನವೆಂಬರ್ 10ರಂದು ಕರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೆಸರಿನೊಂದಿಗೆ ಪೀಠಾರೋಹಣ ಮಾಡಿದ್ದರು. `ಬಾಲ ತಪಸ್ವಿ' ಎಂದೇ ಖ್ಯಾತರಾಗಿದ್ದ ಇವರು ಶಿಕ್ಷಣಪ್ರೇಮಿಯೂ ಆಗಿದ್ದರು. ಸ್ಥಳೀಯ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಭೂಮಿ ದಾನ ಮಾಡ್ದ್ದಿದರು. ಇದಲ್ಲದೆ ಗೋಶಾಲೆ ಆರಂಭಿಸಿ ಹಲವಾರು ಗೋವುಗಳನ್ನೂ ಸಾಕಿದ್ದರು.

ಇಂದು ಅಂತ್ಯಕ್ರಿಯೆ:  ಶ್ರೀಮಠದ ಆವರಣದಲ್ಲಿ ನಿರ್ಮಿಸಿರುವ `ಕೈಲಾಸ ಮಂಟಪ'ದಲ್ಲಿ  ಶನಿವಾರ ಮುಂಜಾನೆ 10 ಗಂಟೆಗೆ ಅಂತ್ಯಕ್ರಿಯೆ  ನಡೆಯಲಿದೆ ಎಂದು ಮಠದ ಪೀಠಾಧಿಕಾರಿ ವಿಶ್ವಾರಾಧ್ಯ ಶಿವಾಚಾರ್ಯ (ಮೊ: 9739024274)  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT