ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೀನಾ ಹೆಜ್ಜೆಗೆ 1.40 ಕೋಟಿ

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಎಂಟು ನಿಮಿಷಗಳ ಒಂದು ನೃತ್ಯಕ್ಕೆ ಕರೀನಾ ಕಪೂರ್ ಪಡೆದಿರುವ ಸಂಭಾವನೆ ಬರೋಬ್ಬರಿ ಒಂದು ಕೋಟಿ ನಲ್ವತ್ತು ಲಕ್ಷ ರೂಪಾಯಿ.ಕಳೆದ ನವೆಂಬರ್ 1ರಂದು ಛತ್ತೀಸ್‌ಗಢ ರಾಜ್ಯೋತ್ಸವ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕರೀನಾ ಕಪೂರ್ ಅವರನ್ನು ಆಹ್ವಾನಿಸಲಾಗಿತ್ತು. ಆಗ ಅವರಿಗೆ ನೀಡಿರುವ ಸಂಭಾವನೆಯ ಮೊತ್ತ ಇದು. ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್‌ಗೆ 90 ಸಾವಿರ ರೂಪಾಯಿ ಸಂಭಾವನೆ ನೀಡಲಾಗಿದೆ.

ಅದೇ ಸಂಜೆ, ಸೋನು ನಿಗಮ್‌ಗೆ 36 ಲಕ್ಷ 50 ಸಾವಿರ ರೂಪಾಯಿ ನೀಡಿದ್ದರೆ, ಸುನಿಧಿ ಚೌಹಾಣ್‌ಗೆ 32, ದಿಯಾ ಮಿರ್ಜಾಗೆ 25 ಹಾಗೂ ಹಿಮೇಶ್ ರೇಶಮಿಯ್ಯಾಗೆ 24 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಛತ್ತೀಸಗಢದ ಸಂಸ್ಕೃತಿ ಸಚಿವರು ಪ್ರಕಟಣೆಯಲ್ಲಿ ವಿವರಣೆ ನೀಡಿದ್ದಾರೆ.
ಸೈಫ್ ಅಲಿ ಖಾನ್ ಕೈ ಹಿಡಿದ ನಂತರ ಮೊದಲ ಸ್ಟೇಜ್ ಶೋ ಇದಾಗಿತ್ತು. ಕೇವಲ 8 ನಿಮಿಷಗಳ ಹಾಡಿಗೆ ಹೆಜ್ಜೆ ಹಾಕಿದ ಕರೀನಾ 5 ಕೋಟಿ ರೂಪಾಯಿ ವೆಚ್ಚದ ಸಾಂಸ್ಕೃತಿಕ ಸಂಜೆಯಿಂದ ಸಿಂಹಪಾಲನ್ನು ಪಡೆದಿದ್ದಾರೆ.

ಒಟ್ಟು 245 ಕಲಾವಿದರು ರಾಜ್ಯೋತ್ಸವ ಸಾಂಸ್ಕೃತಿಕ ಸಂಜೆಯಲ್ಲಿ ಪಾಲ್ಗೊಂಡಿದ್ದರು. 56 ಲಕ್ಷ ರೂಪಾಯಿ ವಿಶೇಷ ಆಹ್ವಾನಿತರಿಗೆ ಕರೆತರಲು ಖರ್ಚಾಗಿದ್ದರೆ, ಅವರ ಆಹಾರ ಹಾಗೂ ವಸತಿಗಾಗಿ 12 ಲಕ್ಷದ ಆಸುಪಾಸು ಖರ್ಚಾಗಿದೆ ಎಂದು ಮಾಹಿತಿಯನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT