ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆದಲ್ಲಿ ಬರದಿದ್ದರೆ ಕರೆಮಾಡಿ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಿಲಿಕಾನ್ ಸಿಟಿಯಲ್ಲಿ ತೊಂಬತ್ತು ಸಾವಿರ ಆಟೊ ರಿಕ್ಷಾಗಳಿವೆ. ಆದರೆ ನಮ್ಮ ಸಮಯಕ್ಕೆ ಆಟೊ ಸಿಗೋದಿಲ್ಲ. ಸಿಕ್ಕರೂ ಅವರು ನಾವು ಹೇಳಿದ ಕಡೆ ಬರೋದಿಲ್ಲ. ಹಾಗಂತ ಅವರು ಕರೆದುಕೊಂಡು ಹೋಗೋ ಕಡೆ ನಾವು ಹೋಗಕ್ಕಾಗಲ್ಲ. ಕರೆದ ಕಡೆ ಬರ್ತಾರೆ ಆದ್ರೆ ಮನಸ್ಸಿಗೆ ಬಂದಷ್ಟು ಚಾರ್ಜ್ ಕೇಳ್ತಾರೆ. ಅವರು ಕೇಳಿದಷ್ಟು ದುಡ್ಡು ಕೊಡಕ್ಕಾಗಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು. ಇನ್ನೊಂದು ಆಟೊ ಹಿಡಿಬೇಕು ಅಂತೀರ... ಅದಂತೂ ಎಲ್ಲರಿಗೂ ಗೊತ್ತಿರೋ ವಿಷಯವೇ.

ಕರೆದ ಕಡೆ ಬಂದು ಮೀಟರ್ ಪ್ರಕಾರ ದುಡ್ಡು ಪಡೆದು ಸೇವೆ ಒದಗಿಸಬೇಕಾದದ್ದು ಆಟೊ ಚಾಲಕರ ಕರ್ತವ್ಯ. ಹಾಗೆ ಮಾಡದ ಆಟೊ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸಾಧ್ಯವಿಲ್ಲವೇ? ಖಂಡಿತ ಸಾಧ್ಯ. ಟ್ರಾಫಿಕ್ ಪೋಲೀಸರಿಗೆ ದೂರು ನೀಡಿದರೆ, ತಪ್ಪು ಮಾಡಿದ ಆಟೊ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುತ್ತಾರೆ. ಆಡುಮಾತಿನಲ್ಲೇ ಈ ಸಮಸ್ಯೆಯ ಬಗ್ಗೆ ಮಾತಾಡೋಣ...

ಅಯ್ಯೋ ಏನ್ ಹೇಳ್ತಾ ಇದ್ದೀರ, ಅರ್ಜೆಂಟ್ ಕೆಲಸ ಇದ್ದಾಗ ನಾವು ಆಟೊದಲ್ಲಿ ಹೋಗೋದು. ಆಟೊ ಡ್ರೈವರ್ ಬರಲ್ಲ ಅಂದ್ರೆ ಅಥವಾ ಜಾಸ್ತಿ ದುಡ್ಡು ಕೇಳಿದ್ರೆ ಟ್ರಾಫಿಕ್ ಪೊಲೀಸ್ ಸ್ಟೇಷನ್ ಹುಡುಕ್ಕೊಂಡು ಹೋಗಿ ದೂರು ಕೊಡ್ಬೇಕ. ಇಷ್ಟೆಲ್ಲ ರಿಸ್ಕ್ ತಗೋಳಲ್ಲ. ಒಬ್ಬ ಆಟೊ ಡ್ರೈವರ್ ಬರ‌್ದಿದ್ರೆ ಏನು ಇನ್ನೊಬ್ಬನನ್ನು ಕೇಳ್ತೀವಿ. ಸ್ವಲ್ಪ ಜಾಸ್ತಿ ದುಡ್ಡು ಕೇಳಿದ್ರೆ ಕೊಟ್ತೀವಿ ಬಿಡಿ ಇನ್ನೇನ್ ಮಾಡೋಕ್ಕಾಗುತ್ತದೆ ಅಂತೀರ. ನೀವು ಹೇಳೋದ್ರಲ್ಲೂ ಅರ್ಥ ಇದೆ.

ಒಬ್ಬ ಆಟೊ ಡ್ರೈವರ್ ಮೇಲೆ ದೂರು ಕೊಡಕ್ಕೆ ಪೊಲೀಸ್ ಸ್ಟೇಷನ್‌ಗೆ ಹೋಗ್ಬೇಕಂದ್ರೆ ಇನ್ನೊಂದು ಆಟೊ ಹಿಡಿಬೇಕಲ್ಲ. ಇದು ನೀವ್ ಹೇಳ್ದಂಗೆ ರಿಸ್ಕೇ. ಆದ್ರೆ ತಪ್ಪು ಮಾಡಿದ ಡ್ರೈವರ್ ವಿರುದ್ಧ ನಿಂತ ಜಾಗದಲ್ಲೇ ಕಂಪ್ಲೆಂಟ್ ಕೊಡೋ ಹಾಗಿದ್ರೆ, ಕೊಡ್ತೀರ? ನಿಂತ ಜಾಗದಿಂದಲೇ ಕಂಪ್ಲೆಂಟ್ ಅದ್ಹೇಗೆ ಅಂತೀರ. ಎಲ್ಲರ ಹತ್ರನೂ ಮೊಬೈಲ್ ಇದ್ದೇ ಇರುತ್ತೆ. ಅದರಲ್ಲಿ ಆಟೊ ಸಂಖ್ಯೆ, ಸಮಯ, ಎಲ್ಲಿಗೆ ಬರೋದಿಲ್ಲ ಅಂತ ಆಟೊ ಡ್ರೈವರ್ ಹೇಳಿದ ಅಂತ ಟೈಪ್ ಮಾಡಿ 52225 ಸಂಖ್ಯೆಗೆ ಮೆಸೇಜ್ ಮಾಡಿ. ಮಿಕ್ಕಿದ್ದನ್ನ ಪೊಲೀಸರು ನೋಡಿಕೊಳ್ತಾರೆ. ನೀವು ಕರೆದ ಕಡೆ ಬರಲ್ಲ ಅಂತ ಹೇಳಿದ ಮತ್ತು ಜಾಸ್ತಿ ದುಡ್ಡು ಕೇಳಿದ ಆಟೊ ಚಾಲಕನಿಗೆ ದಂಡ ಹಾಕ್ತಾರೆ.

ರಾಜಧಾನಿ ಟ್ರಾಫಿಕ್ ಪೊಲೀಸರು ಸಕ್ಕತ್ ಹೈಟೆಕ್ ಆಗ್ಬಿಟ್ಟಿದ್ದಾರೆ. ನೀವು ಸಕ್ಕತ್ತು ಬ್ಯುಸಿ. ಸ್ಟೇಷನ್‌ಗೆ ಹೋಗಿ ಕಂಪ್ಲೆಂಟ್ ಕೊಡೋದು ಕಷ್ಟ ಅಂತ ಅವರಿಗೂ ಗೊತ್ತಿದೆ. ಅದಕ್ಕೆ ಎಸ್‌ಎಂಎಸ್ ದೂರು ಜಾರಿಗೆ ತಂದಿದ್ದಾರೆ.

ನೀವು ಕರೆದ ಕಡೆ ಆಟೊ ಡ್ರೈವರ್ ಬರಲ್ಲ ಅಂತ ಹೇಳಿದ್ರೆ ಆಟೊ ಅಂತ ಟೈಪ್ ಮಾಡಿ ಸ್ಪೇಸ್ ಬಿಟ್ಟು ಆರ್‌ಇಎಫ್ ಅಂತ ಟೈಪ್ ಮಾಡಿ ಮತ್ತೊಂದು ಸ್ಟೇಸ್ ಬಿಟ್ಟು ಆಟೊ ಸಂಖ್ಯೆ ಟೈಪ್ ಮಾಡಿ ಇನ್ನೊಂದು ಸ್ಪೇಸ್ ಬಿಟ್ಟು ಎಲ್ಲಿಂದ ಎಲ್ಲಿಗೆ ಬರಲ್ಲ ಅಂತ ಹೇಳಿದ ಎಂದು ಟೈಪ್ ಮಾಡಿ ಮಗದೊಂದು ಸ್ಟೇಸ್ ಬಿಟ್ಟು ಸಮಯವನ್ನು ನಮೂದಿಸಿ 52225 ನಂಬರ್‌ಗೆ ಕಳ್ಸಿ.

ವೆರಿ ಕಾಂಪ್ಲಿಕೇಟೆಡಾ... ಇನ್ನೂ ಡೀಟೇಲಾಗಿ ಹೇಳ್ತೀವಿ ಬಿಡಿ. ನೀವು ಎಂ.ಜಿ. ರೋಡ್‌ನಿಂದ ಕೋರಮಂಗಲಕ್ಕೆ ಬಾ ಅಂತ ಸಂಜೆ ಐದು ಗಂಟೆಗೆ ಕೆ.ಎ 00 ಎಫ್ 420 ರಿಜಿಸ್ಟ್ರೇಷನ್ ಸಂಖ್ಯೆಯ ಆಟೊ ಚಾಲಕನನ್ನು ಕರೀತಿರ. ಆದ್ರೆ ಆತ ಬರಲ್ಲ ಅಂತಾನೆ ಅಂದ್ಕೊಳ್ಳಿ. ಆಗ ಎಯುಟಿಓ ಸ್ಪೇಸ್ ಕೆಎ00ಎಫ್420 ಸ್ಪೇಸ್ ಎಂಜಿ ರೋಡ್ ಟೂ ಕೋರಮಂಗಲ ಸ್ಟೇಸ್ 5ಪಿಎಂ ಅಂತ ಟೈಪ್ ಮಾಡಿ 52225ಗೆ ಸೆಂಡ್ ಮಾಡಿದ್ರೆ ಸಾಕು.

ಅದೇ ರೀತಿ ಜಾಸ್ತಿ ದುಡ್ಡು ಕೇಳಿದ್ರೂ ಎಸ್‌ಎಂಎಸ್ ಕಳ್ಸಿ ಕಂಪ್ಲೆಂಟ್ ಮಾಡಿ. ಎಯುಟಿಓ ಸ್ಪೇಸ್ ಓವಿಆರ್ ಸ್ಪೇಸ್ ಆಟೊ ಸಂಖ್ಯೆ ಸ್ಪೇಸ್ ಸ್ಥಳ ಸ್ಪೇಸ್ ಸಮಯವನ್ನು ಟೈಪ್ ಮಾಡಿ 52225ಗೆ ಸೆಂಡ್ ಮಾಡಿದ್ರೆ ಸಾಕು. ಈ ತರಹ ಎಸ್‌ಎಂಎಸ್ ಮೂಲಕ ಬಂದ ಕಂಪ್ಲೇಂಟ್ ಆಧಾರದ ಮೇಲೆ ಸುಮಾರು ಏಳುನೂರು ಆಟೊ ಡ್ರೈವರ್‌ಗಳ ಮೇಲೆ ಈಗಾಗಲೇ ಕೇಸ್ ಹಾಕಿ ಫೈನ್ ವಸೂಲಿ ಮಾಡಿದ್ದಾರೆ. ಕರೆದ ಕಡೆ ಬರಲ್ಲ ಅಂದಿದ್ದಕ್ಕೆ 29,482 ಮಂದಿ, ಜಾಸ್ತಿ ದುಡ್ಡು ಕೇಳಿದ್ದಕ್ಕೆ 17,134 ಮಂದಿ ಆಟೊ ಚಾಲಕರ ಮೇಲೆ ಪೊಲೀಸರು 2011ರಲ್ಲಿ ಕೇಸ್ ಹಾಕಿ ದಂಡ ವಸೂಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT