ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ-1000 ರ‌್ಯಾಲಿ; ಮಿಂಚಿದ ಕಡೂರ್- ಘೋಷ್

Last Updated 20 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಟೀಮ್ ಎಂಆರ್‌ಎಫ್ ತಂಡದ ಗೌರವ್ ಗಿಲ್ ಮತ್ತು ಮೂಸಾ ಶರೀಫ್ ಜೋಡಿ ಇಲ್ಲಿ ನಡೆಯುತ್ತಿರುವ `ಕರ್ನಾಟಕ-1000~ ರ‌್ಯಾಲಿಯಲ್ಲಿ ಮೊದಲ ದಿನದ ಸ್ಪರ್ಧೆಯ ಬಳಿಕ ಮುನ್ನಡೆ ಪಡೆದಿದೆ.

ಶಿಡ್ಲಘಟ್ಟದ ರ‌್ಯಾಲಿಯ ಟ್ರ್ಯಾಕ್ ಚಾಲಕರಿಗೆ ಸಾಕಷ್ಟು ಸವಾಲೊಡ್ಡಿತು. 2000 ಸಿಸಿ ವಿಭಾಗದಲ್ಲಿ ಅದ್ಭುತಾ ಚಾಲನಾ ಕೌಶಲ ಮೆರೆದ ಗಿಲ್ 54 ನಿಮಿಷ 54 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಮಾತ್ರವಲ್ಲ ಇತರ ಸ್ಪರ್ಧಿಗಳಿಗಿಂತ 38 ಸೆಕೆಂಡ್‌ಗಳ ಮುನ್ನಡೆ ಪಡೆದರು.

ಇದೇ ತಂಡದ ಅಮಿತ್‌ರಜಿತ್ ಘೋಷ್ ಮತ್ತು ಅಶ್ವಿನ್ ನಾಯಕ್ (55.32) ಎರಡನೇ ಸ್ಥಾನದಲ್ಲಿದ್ದರೆ, ಲೋಹಿತ್ ವಿ ಅರಸ್- ಶ್ರೀನಿವಾಸ ಮೂರ್ತಿ ಮೂರನೇ ಸ್ಥಾನದಲ್ಲಿದ್ದಾರೆ. ಇದರಿಂದ `ಟೀಮ್ ಎಂಆರ್‌ಎಫ್~ ಮೊದಲ ಮೂರು ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.

ಪ್ರಮುಖ ಸ್ಪರ್ಧಿಗಳಾದ ಅರ್ಜುನ್ ಬಾಲು (ಸಹಚಾಲಕ ಸುಜತ್ ಕುಮಾರ್) ಮತ್ತು ಅರ್ಜುನ್ ರಾವ್ ಅರೂರ್ (ಸಹಚಾಲಕ ಸತೀಶ್ ರಾಜ್‌ಗೋಪಾಲ್) ಅವರ ಕಾರಿನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ಅರ್ಧದಲ್ಲೇ ಹಿಂದೆ ಸರಿದರು. ಕಣದಲ್ಲಿದ್ದ 41 ಕಾರುಗಳಲ್ಲಿ 20 ಕಾರುಗಳು ವಿವಿಧ ಕಾರಣಗಳಿಂದ ಸ್ಪರ್ಧೆ ಕೊನೆಗೊಳಿಸಲು ವಿಫಲವಾದವು.

2000 ಸಿಸಿ `ಎನ್~ ವಿಭಾಗದಲ್ಲಿ ಕರ್ಣ ಕಡೂರ್ (ಸಹಚಾಲಕ ಸೊಮೊನಿತೊ ಘೋಷ್) ಅವರು ಇತರ ಸ್ಪರ್ಧಿಗಳಿಗಿಂತ 58 ಸೆಕೆಂಡ್‌ಗಳಿಂದ ಮುನ್ನಡೆ ಪಡೆದು ಚಾಂಪಿಯನ್ ಆಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ರಾಹುಲ್ ಕಾಂತರಾಜ್- ವಿವೇಕ್ ವೈ ಭಟ್ ಎರಡನೇ ಸ್ಥಾನದಲ್ಲಿದ್ದರೆ, ಎಸ್.ಡಿ. ಶ್ರೀಹರ್ಷ್- ಡಿ. ಉದಯ್ ಕುಮಾರ್ ಬಳಿಕದ ಸ್ಥಾನದಲ್ಲಿದ್ದಾರೆ.

1600 ಸಿಸಿ ವಿಭಾಗದಲ್ಲಿ ಸಿ.ಜಿ. ಬಲರಾಮ್ (ಸಹಚಾಲಕ ಸಿ.ಜಿ. ರಘುರಾಮ್) ಮೊದಲ ದಿನ ಇತರ ಸ್ಪರ್ಧಿಗಳಿಗಿಂತ ಎರಡು ನಿಮಿಷಗಳಷ್ಟು ಮುನ್ನಡೆ ಗಳಿಸಿದ್ದಾರೆ. ಇವರು ಒಂದು ಗಂಟೆ 05.47 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು. ಸಿದ್ಧಾರ್ಥ್ ರಂಗ್ನೇಕರ್- ನಿತಿನ್ ಜೇಕಬ್ (1:08.09) ಮತ್ತು ಹನೂಷ್ ಸುರನೇನಿ- ರವೀಂದ್ರ ಕುಮಾರ್ (1:08.46) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

1400 ಸಿಸಿ ವಿಭಾಗದಲ್ಲಿ ಡೀನ್ ಮಸ್ಕರೇನಸ್ ಮತ್ತು ಶ್ರುಪ್ತ ಪಡಿವಾಳ್ ಮೊದಲ ದಿನ ಮುನ್ನಡೆ ಗಳಿಸಿದ್ದಾರೆ.

ಎ.ಎಂ. ಕರಣ್ ಮತ್ತು ಎಸ್.ಎನ್. ಷಣ್ಮುಗ ಅವರು ಎರಡನೇ ಸ್ಥಾನದಲ್ದ್ದ್‌ದರೆ, ಆದಿತ್ಯ ಶಿವರಾಮ್- ಕೆ.ಬಿ. ಕಾರ್ಯಪ್ಪ ಬಳಿಕದ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ಜಿಪ್ಸಿ ಕಪ್ ವಿಭಾಗದಲ್ಲಿ  ಶಫೀಕ್ ಉಲ್ ರಹಮಾನ್- ಕೆ.ಪಿ. ಅಜಿತ್ (1:06.14) ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಂಜಯ್ ಅಗರ್‌ವಾಲ್- ಶಿವಪ್ರಕಾಶ್ (1:07.27) ಹಾಗೂ ಅಲೋಕ್ ಮಿಶ್ರಾ- ರೋಹಿತ್ ಆರ್ಯ (1:15.37) ಬಳಿಕದ ಸ್ಥಾನದಲ್ಲಿದ್ದಾರೆ.

`ಟಿ 1~ ವಿಭಾಗದಲ್ಲಿ ಉತ್ತಮ ವೇಗದೊಂದಿಗೆ ಸಂದೀಪ್ ಶರ್ಮ- ವೇಣು ರಮೇಶ್ ಕುಮಾರ್ (1:05.32) ಮೇಲುಗೈ ಪಡೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT