ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

Last Updated 9 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಭೋಪಾಲ್: ಅತ್ಯುತ್ತಮ ಪ್ರದರ್ಶನ ತೋರಿದ ಕರ್ನಾಟಕ ತಂಡದವರು ಮಂಗಳವಾರ ಇಲ್ಲಿ ಕೊನೆಗೊಂಡ 38ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಕರ್ನಾಟಕ ತಂಡ ಬಾಲಕರ ವಿಭಾಗದಲ್ಲೂ ಚಾಂಪಿಯನ್ ಆಯಿತು.

ಚಾಂಪಿಯನ್‌ಷಿಪ್‌ನಲ್ಲಿ ಎರಡು ನೂತನ ರಾಷ್ಟ್ರೀಯ ದಾಖಲೆಗಳೊಂದಿಗೆ ಐದು ಚಿನ್ನದ ಪದಕ ಗೆದ್ದ ಕರ್ನಾಟಕದ ಸೌರಭ್ ಸಾಂಗ್ವೇಕರ್ (35 ಪಾಯಿಂಟ್) ಬಾಲಕರ ವಿಭಾಗದಲ್ಲಿ `ಅತ್ಯುತ್ತಮ ಈಜುಪಟು~ ಎನಿಸಿದರು. ಐದನೇ ಬಾರಿಗೆ ಅವರಿಗೆ ಈ ಗೌರವ ಒಲಿದಿದೆ.

ಪ್ರಕಾಶ್ ತರಣ್ ಪುಷ್ಕರ್ ಈಜುಗೊಳದಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಬಾಲಕ ಹಾಗೂ ಬಾಲಕಿಯರು ಒಟ್ಟು 528 ಪಾಯಿಂಟ್ ಕಲೆಹಾಕಿ ಸತತ ಎರಡನೇ ಬಾರಿ ಚಾಂಪಿಯನ್ ಆದರು.
ಅಂತಿಮ ದಿನ ಸೌರಭ್ ಎರಡು ಚಿನ್ನದ ಪದಕ ಜಯಿಸಿದರು. 800 ಮೀ. ಫ್ರೀಸ್ಟೈಲ್ ಹಾಗೂ 100 ಮೀ.ಬಟರ್‌ಫ್ಲೈನಲ್ಲಿ ಈ ಸಾಧನೆ ಮಾಡಿದರು. 800 ಮೀ. ಫ್ರೀಸ್ಟೈಲ್‌ನಲ್ಲಿ ಅವರು ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಬಾಲಕಿಯರ ವಿಭಾಗದ ವಾಟರ್ ಪೋಲೊದಲ್ಲಿ ಕರ್ನಾಟಕ ಕಂಚಿನ ಪದಕ ಜಯಿಸಿತು. ಕೊನೆಯ ಲೀಗ್ ಪಂದ್ಯದಲ್ಲಿ 7-1ರಲ್ಲಿ ಪಶ್ಚಿಮ ಬಂಗಾಳ ಎದುರು ಗೆಲುವು ಸಾಧಿಸಿತು. ಪದಕ ಪಟ್ಟಿಯಲ್ಲಿ ಕರ್ನಾಟಕ (24 ಚಿನ್ನ, 17 ಬೆಳ್ಳಿ, ಕಂಚು 28) ಎರಡನೇ ಸ್ಥಾನ ಗಳಿಸಿತು. ಮಹಾರಾಷ್ಟ್ರ (26 ಚಿನ್ನ, 12 ಬೆಳ್ಳಿ, 13 ಕಂಚು) ಮೊದಲ ಸ್ಥಾನ ಪಡೆಯಿತು.

ಫಲಿತಾಂಶಗಳು ಇಂತಿವೆ: ಬಾಲಕರ ವಿಭಾಗ: 800 ಮೀ. ಫ್ರೀಸ್ಟೈಲ್ (ಗುಂಪು-1): ಸೌರಭ್ ಸಾಂಗ್ವೇಕರ್ (ಕರ್ನಾಟಕ; 8: 24.97, ರಾಷ್ಟ್ರೀಯ ದಾಖಲೆ)-1, ಸನು ದೇಬನಾಥ್ (ಪಶ್ಚಿಮ ಬಂಗಾಳ; 8:46.23)-2, ಎ.ಅಜಯ್ (ಕರ್ನಾಟಕ; 9:01.4)-3; 1500 ಮೀ. ಫ್ರೀಸ್ಟೈಲ್ (ಗುಂಪು-2):  ವೇದಾಂತ್ ರಾವ್ (ಮಹಾರಾಷ್ಟ್ರ; 17:44.04)-1, ಮೊಹಮ್ಮದ್ ಯಾಕೂಬ್ ಸಲೀಮ್ (ಕರ್ನಾಟಕ; 17:51.70)-2, ಎ.ಎಸ್.ಆನಂದ್ (ಕೇರಳ; 17:57.29)-3; 200 ಮೀ.ಬ್ರೆಸ್ಟ್‌ಸ್ಟ್ರೋಕ್ (ಗುಂಪು-1): ಆಕಾಶ್ ರೋಹಿತ್ (ಕರ್ನಾಟಕ; 2:30:46)-1, ನೀಲ್ ಕಂಟ್ರಾಕ್ಟರ್ (ಗುಜರಾತ್; 2:32:56)-2, ಎಸ್.ಅರುಣ್ (ಕೇರಳ; 2:36:71)-3; 200 ಮೀ.ಬ್ರೆಸ್ಟ್‌ಸ್ಟ್ರೋಕ್ (ಗುಂಪು-2): ಎಸ್.ಪಿ.ಲಿಖಿತ್ (ಕರ್ನಾಟಕ; 2:39:11)-1, ವಿಕ್ರಾಂತ್ (ಹರಿಯಾಣ; 2:42:18)-2, ವೀರಜ್ ಪ್ರಭು (ಮಹಾರಾಷ್ಟ್ರ; 2:48:82)-3; 100 ಮೀ.ಬಟರ್‌ಫ್ಲೈ (ಗುಂಪು-1): ಸೌರಭ್ ಸಾಂಗ್ವೇಕರ್ (ಕರ್ನಾಟಕ; 00.57.94)-1, ಜಯವಂತ್ ವಿಜಯ್ ಕುಮಾರ್ (ತಮಿಳುನಾಡು; 00.58:73)-2, ರಾಹುಲ್ (ಗುಜರಾತ್; 00.58:76)-3; 100 ಮೀ.ಬಟರ್‌ಫ್ಲೈ (ಗುಂಪು-2): ಸುಪ್ರಿಯಾ ಮೊಂಡಲ್ (ಪಶ್ಚಿಮ ಬಂಗಾಳ; 01:01:43)-1, ಎಸ್.ಕೆ.ಆದರ್ಶ ನಾರಾಯಣ (ತಮಿಳುನಾಡು; 01:03:02)-2, ನಿಖಿಲ್ ರಾಜರಾಮ್ (ಕರ್ನಾಟಕ; 01:03:85)-3. 4್ಡ100 ಮೀ. ವೆುಡ್ಲೆ ರಿಲೇ (ಗುಂಪು-1): ಕರ್ನಾಟಕ (ಬಿ.ಪ್ರಣಾಮ್, ಆಕಾಶ್ ರೋಹಿತ್, ಎ.ಅಜಯ್, ಸೌರಭ್ ಸಾಂಗ್ವೇಕರ್; 04:07:71-ರಾಷ್ಟ್ರೀಯ ದಾಖಲೆ)-1.  4್ಡ100 ಮೀ. ವೆುಡ್ಲೆ ರಿಲೇ (ಗುಂಪು-2): ಕರ್ನಾಟಕ (ಎಚ್.ಪುಷ್ಪಾನಂದ, ಎಸ್.ಪಿ.ಲಿಖಿತ್, ಯಾಕೂಬ್ ಸಲೀಮ್, ನಿಖಿಲ್; 4:30:13)-1.
ಬಾಲಕಿಯರ ವಿಭಾಗ: 400 ಮೀ.ವೈಯಕ್ತಿಕ ಮೆಡ್ಲೆ (ಗುಂಪು-1): ಕಾಂಚಿ ದೇಸಾಯಿ (ಮಹಾರಾಷ್ಟ್ರ; 05:14:46)-1, ಅನನ್ಯಾ (ಮಹಾರಾಷ್ಟ್ರ; 05:24:93)-2, ಭೂಮಿ ಆರ್.ಮೋತ್ವಾನಿ (ಕರ್ನಾಟಕ; 05:51:44)-3; 400 ಮೀ.ವೈಯಕ್ತಿಕ ಮೆಡ್ಲೆ (ಗುಂಪು-2): ಆಕಾಂಕ್ಷಾ ವೋರಾ (ಮಹಾರಾಷ್ಟ್ರ; 05:26:17)-1, ಕೃತ್ತಿಕಾ (ಚತ್ತೀಸ್‌ಗಡ; 05:38:47)-2, ಡಿ.ಎ.ಚಾರು ಹಂಸಿನಿ (ಕರ್ನಾಟಕ; 05:51:44)-3; 200 ಮೀ.ಬ್ರೆಸ್ಟ್‌ಸ್ಟ್ರೋಕ್ (ಗುಂಪು-2): ಎ.ವಿ.ಜಯವೀಣಾ (ತಮಿಳುನಾಡು; 02:54:90)-1, ಮೋನಿಕಾ ಗಾಂಧಿ (ಮಹಾರಾಷ್ಟ್ರ; 02:58:61)-2, ಡಿ.ಎ.ಚಾರು ಹಂಸಿನಿ (ಕರ್ನಾಟಕ; 03:03:19)-3; 100 ಮೀ.ಫ್ರೀಸ್ಟೈಲ್ (ಗುಂಪು-1): ಜ್ಯೋಸ್ನಾ ಪನ್ಸಾರೆ (ಮಹಾರಾಷ್ಟ್ರ; 01:00:33)-1, ಆರ್.ಸುಶ್ಮಿತಾ (ತಮಿಳುನಾಡು; 01:01:42)-2, ಪ್ರತಿಮಾ ಕೊಳಲಿ (ಕರ್ನಾಟಕ; 01:01:69)-3.
ಸಮಗ್ರ ಚಾಂಪಿಯನ್: ಕರ್ನಾಟಕ (528 ಪಾಯಿಂಟ್). ತಂಡ ಚಾಂಪಿಯನ್ (ಬಾಲಕರ ವಿಭಾಗ-ಗುಂಪು 1): ಕರ್ನಾಟಕ (187 ಪಾಯಿಂಟ್). ಬಾಲಕಿಯರ ವಿಭಾಗ: ಮಹಾರಾಷ್ಟ್ರ (152 ಪಾಯಿಂಟ್).
ಅತ್ಯುತ್ತಮ ಈಜುಪಟು (ಬಾಲಕರ ವಿಭಾಗ): ಸೌರಭ್ ಸಾಂಗ್ವೇಕರ್ (35 ಪಾಯಿಂಟ್; ಕರ್ನಾಟಕ), ಬಾಲಕಿಯರ ವಿಭಾಗ: ಆಕಾಂಕ್ಷಾ ವೋರಾ (35 ಪಾಯಿಂಟ್; ಮಹಾರಾಷ್ಟ್ರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT