ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ವೀಣೋತ್ಸವ

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಂಜನಿ ಕಲಾಕೇಂದ್ರ: ಶನಿವಾರ ಸಂಜೆ 6ಕ್ಕೆ ಕರ್ನಾಟಕ ವೀಣೋತ್ಸವ. ಡಾ.ಸುಪರ್ಣ ರವಿಶಂಕರ್ ತಂಡದಿಂದ ‘ವೀಣಾರಾಧನೆ’. ವಿದ್ವಾನ್ ಪ್ರೊ. ಆರ್. ವಿಶ್ವೇಶ್ವರನ್ ಅವರಿಗೆ ಕರ್ನಾಟಕ ವೈಣಿಕ ಪ್ರಶಸ್ತಿ ಪ್ರದಾನ. ರಾಜ್ಯ ಮಟ್ಟದ ವೀಣಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ. ಅಧ್ಯಕ್ಷತೆ: ಪಂ.ನರಸಿಂಹಲು ವಡವಾಟಿ. ಸಂಜೆ 7.30ಕ್ಕೆ ಪ್ರೊ.ಆರ್.ವಿಶ್ವೇಶ್ವರನ್ ತಂಡದಿಂದ ವೀಣಾ ವಾದನ.

ಭಾನುವಾರ ಬೆಳಿಗ್ಗೆ  10ಕ್ಕೆ ಪಂಚ ವೀಣಾ ವಾದನ, 10.30ಕ್ಕೆ ಪ್ರೊ.ಆರ್.ವಿಶ್ವೇಶ್ವರನ್ (ವೀಣೆಯಲ್ಲಿ ಗಮಕ) ಮತ್ತು ವಿದ್ವಾನ್ ರಾಮು ನಟರಾಜನ್ (ಸಂಗೀತದಲ್ಲಿ ವೀಣಿಯ ಪ್ರಾಮುಖ್ಯತೆ) ಅವರಿಂದ ಉಪನ್ಯಾಸ.

ಸಂಜೆ 5.30ಕ್ಕೆ ಮಂಗಳೂರಿನ ವಿದುಷಿ ಎಸ್.ವಿ.ವಾಣಿ ತಂಡದಿಂದ ವೀಣಾ ವಾದನ, 6.30ಕ್ಕೆ ಡಾ.ಸುಮಾ ಸುಧೀಂದ್ರ ಮತ್ತು ತಂಡದಿಂದ ವೀಣಾ ಲಹರಿ, 7.30ಕ್ಕೆ  ಡಿ.ಬಾಲಕೃಷ್ಣ ಮತ್ತು ವಾಣಿ ಯದುನಂದನ್ ಅವರಿಂದ ವೀಣಾ ವೈವಿಧ್ಯತೆ
ಸ್ಥಳ: ಕನ್ನಡ ಭವನ, ನಯನ ಸಭಾಂಗಣ, ಜೆ.ಸಿ.ರಸ್ತೆ.
 
ರಂಜಿನಿ ಕಲಾಕೇಂದ್ರದ ಕರ್ನಾಟಕ ವೈಣಿಕ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ. ಆರ್. ವಿಶ್ವೇಶ್ವರ್ ರಾಜ್ಯದ ಅಗ್ರಶ್ರೇಣಿಯ ವೈಣಿಕರು. 65 ವರ್ಷಗಳ ಸತತ ಸಂಗೀತ ಪ್ರಯೋಗ, ಸಂಶೋಧನೆಗಳ ಪರಿಣಾಮವಾಗಿ ಗಾಯನ ಶೈಲಿಯ ವೈಣಿಕ ಶ್ರೇಷ್ಠರೆಂದು ಮಾನ್ಯರಾಗಿದ್ದಾರೆ. ವೀಣೆಯ ಮೇಲೆ ಬಲಗೈ ಬೆರಳುಗಳಿಂದ ತಂತಿಯನ್ನು ಮೀಟದೇ ಹಲವು ನಿಮಿಷಗಳ ಕಾಲ ರಾಗಾಲಾಪನೆ ನುಡಿಸುವ ವಿಶೇಷ ವಾದನತಂತ್ರ ಅಳವಡಿಸಿಕೊಂಡಿದ್ದಾರೆ. 150ಕ್ಕೂ ಹೆಚ್ಚು ಮೌಲ್ಯಪೂರ್ಣವಾದ ಸಂಗೀತ ರಚನೆಗಳನ್ನು ‘ವಾಗ್ಗೇಯ ವಿಶ್ವೇಶ್ವರಿ’ ಗ್ರಂಥದಲ್ಲಿ ಪ್ರಕಟಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT