ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಆರು ಚಿನ್ನ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅಂಗವಿಕಲ ಬ್ಯಾಡ್ಮಿಂಟನ್ ಸ್ಪರ್ಧಿಗಳು ಒಡಿಶಾದ ಅಂಗುಲ್‌ದಲ್ಲಿ ಇತ್ತೀಚೆಗೆ ನಡೆದ 8ನೇ ಅಖಿಲ ಭಾರತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅರು ಚಿನ್ನ ಸೇರಿದಂತೆ ಒಟ್ಟು ಒಂಬತ್ತು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಿ. ಆನಂದ್ ಕುಮಾರ್ 21-15, 21-19ರಲ್ಲಿ ಆತಿಥೇಯ ರಾಜ್ಯದ ಪ್ರಮೋದ್ ಭಗತ್ ಮೇಲೂ, ಎಸ್. ಸಿದ್ದಣ್ಣ 21-13, 21-16ರಲ್ಲಿ ಆಂಧ್ರಪ್ರದೇಶದ ಹಿಮಗಿರಿ ಯರಗುಲು ವಿರುದ್ಧವೂ, ಕೆ.ಜಿ. ಪ್ರಭು 21-13, 21-18ರಲ್ಲಿ ಕರ್ನಾಟಕದವರೇ ಆದ ಎಚ್.ಸಿ. ಜಗದೀಶ್ ಮೇಲೂ, ಆರ್. ರೇಣು ಕುಮಾರ್ 21-10, 21-9ರಲ್ಲಿ ಕೇರಳದ ಜಾಬಿ ಮ್ಯಾಥೂ ವಿರುದ್ಧವೂ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಬಿ. ಆನಂದ್ ಕುಮಾರ್-ಒಡಿಶಾದ ಅಮರೇಂದ್ರ ಬೆಹೆರಾ ಜೋಡಿ 21-18, 19-21, 22-20ರಲ್ಲಿ ಒಡಿಶಾದ ಪ್ರಮೋದ್ -ಉತ್ತರಾಖಾಂಡದ ಎಸ್. ಮನೋಜ್ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಅಂತಿಮ ಘಟ್ಟದ ಇನ್ನೊಂದು ಪಂದ್ಯದಲ್ಲಿ ಎಸ್. ಸಿದ್ದಣ್ಣ- ಅಂಡಮಾನ್‌ನ ಬಿ. ದಿಲ್ಲೇಶ್ವರ ರಾವ್ ಜೋಡಿ 21-17, 21-19ರಲ್ಲಿ ಹಿಮಗಿರಿ-ಬಿಹಾರದ ದಿವೇಶ್ ಪಾಠಕ್ ಎದುರು ಗೆಲುವು ಪಡೆದು ಚಿನ್ನ ಜಯಿಸಿತು.

ಪ್ರಶಸ್ತಿಗಾಗಿ ನಡೆದ ಮತ್ತೊಂದು ಹಣಾಹಣಿಯಲ್ಲಿ ಕರ್ನಾಟಕದ ಕೆ.ಜಿ. ಪ್ರಭು ಹಾಗೂ ರಾಜಶೇಖರ್ `ಚಿನ್ನ~ದ ಸ್ಪರ್ಧಿಗಳು ಎನಿಸಿಕೊಂಡರು. ಈ ಜೋಡಿ 21-13, 21-19ರಲ್ಲಿ ತಮ್ಮ ರಾಜ್ಯದವರೇ ಆದ ಎಚ್.ಸಿ. ಜಗದೀಶ್-ವೆಂಕಟೇಶ್ ಅವರನ್ನು ಮಣಿಸಿದರು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT