ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಪೊನ್ನಮ್ಮಗೆ ಸ್ಥಾನ

ಏಷ್ಯಾ ಕಪ್‌ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟ; ರಿತು ಸಾರಥ್ಯ
Last Updated 6 ಸೆಪ್ಟೆಂಬರ್ 2013, 19:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯಾ ಕಪ್‌ ಮಹಿಳಾ ಹಾಕಿ ಟೂರ್ನಿಗೆ 18 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಡಿಫೆಂಡರ್‌ ಕರ್ನಾಟಕದ ಎಂ.ಎನ್‌. ಪೊನ್ನಮ್ಮ ಸ್ಥಾನ ಪಡೆದುಕೊಂಡಿದ್ದಾರೆ. ಮಿಡ್‌ಫೀಲ್ಡರ್‌ ರಿತು ರಾಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಸೆಪ್ಟೆಂಬರ್‌ 21ರಿಂದ 27ರ ವರೆಗೆ ಏಷ್ಯಾಕಪ್‌ ನಡೆಯಲಿದೆ. ಈ ಟೂರ್ನಿಗಾಗಿ ಭಾರತದ ಆಟಗಾರ್ತಿ­ಯರು ಆಗಸ್ಟ್‌ 8ರಿಂದ ಪಟಿಯಾಲಾ­ದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ತಂಡವನ್ನು ಆಯ್ಕೆ ಮಾಡಲು ಆಗಸ್ಟ್‌ 30 ಮತ್ತು 31ರಂದು ಟ್ರಯಲ್ಸ್‌ ನಡೆಸಲಾಗಿತ್ತು. ಮಿಡ್‌ಫೀಲ್ಡರ್‌ ಚಂಚನ್‌ ದೇವಿ ಅವರನ್ನು ಉಪನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಸೆ. 16ರಂದು ಭಾರತ ತಂಡ ಮಲೇಷ್ಯಾಗೆ ತೆರಳಲಿದೆ.

‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡದ ಜೊತೆಗೆ ಚೀನಾ, ಆತಿಥೇಯ ಮಲೇಷ್ಯಾ ಮತ್ತು ಹಾಂಕಾಂಗ್‌ ತಂಡಗಳಿವೆ. ಕೊರಿಯಾ, ಜಪಾನ್‌, ಕಜಕಸ್ತಾನ ಮತ್ತು ಚೈನಿಸ್‌ ತೈಪೆ ರಾಷ್ಟ್ರಗಳು ಸ್ಥಾನ ಗಿಟ್ಟಿಸಿವೆ.

ಸೆ. 21ರಂದು ಭಾರತ ತನ್ನ ಮೊದಲ ಪಂದ್ಯದಲ್ಲಿ ಹಾಂಕಾಂಗ್‌ ಎದುರು ಪೈಪೋಟಿ ನಡೆಸಲಿದೆ. ನಂತರದ ಪಂದ್ಯಗಳಲ್ಲಿ ಚೀನಾ (ಸೆ. 22) ಮತ್ತು ಮಲೇಷ್ಯಾ (ಸೆ. 24) ಎದುರು ಹೋರಾಟ ನಡೆಸಲಿದೆ.

ಹೇಗ್‌ನಲ್ಲಿ ಮುಂದಿನ ವರ್ಷದ ಮೇ 31ರಿಂದ ಜೂನ್‌ 14ರ ವರೆಗೆ ನಡೆಯಲಿರುವ ಎಫ್‌ಐಎಚ್‌ ವಿಶ್ವ ಕಪ್‌ ಹಾಕಿ ಟೂರ್ನಿಗೆ ಅರ್ಹತೆ ಪಡೆಯಬೇಕಾದರೆ, ಏಷ್ಯಾ ಕಪ್‌ನಲ್ಲಿ ಭಾರತ ತನ್ನ ಸಾಮರ್ಥ್ಯ ಸಾಬೀತು ಮಾಡಬೇಕಿದೆ. 

ತಂಡ ಇಂತಿದೆ: ಗೋಲ್‌ಕೀಪರ್‌್ಸ: ರಜನಿ ಇತಿಮರ್ಪು ಹಾಗೂ ಸವಿತಾ.

ಡಿಫೆಂಡರ್ರ್ಸ: ದೀಪ್‌ ಗ್ರೇಸ್‌ ಇಕ್ಕಾ, ಜೋಯ್ದಿಪ್‌ ಕೌರ್‌, ಕಿರಣ್‌ದೀಪ್‌ ಕೌರ್‌, ಸುನಿತಾ ಲಾಕ್ರಾ, ದೀಪಿಕಾ, ನಮಿತಾ ಟೊಪ್ಪೊ, ಪಿ. ಸುಶೀಲಾ ಚಾನು, ಎಂ.ಎನ್‌. ಪೊನ್ನಮ್ಮ.

ಮಿಡ್‌ಫೀಲ್ಡರ್ಸ: ರಿತು ರಾಣಿ (ನಾಯಕಿ), ಚಂಚನ್‌ ದೇವಿ (ಉಪ ನಾಯಕಿ), ಸೌಂದರ್ಯ ಯೆಂದಾಳೆ, ಲಿಲೆ ಚಾನು.
ಫಾರ್ವಡ್ಸ್‌: ಪೂನಮ್‌ ರಾಣಿ, ವಂದನಾ ಕಟಾರಿಯಾ, ಅನುರಾಧಾ ದೇವಿ. ಹೆಚ್ಚುವರಿ ಆಟಗಾರ್ತಿಯರು: ಸನಾರಿಕಾ ಚಾನು, ಅಸುಂತಾ ಲಾಕ್ರಾ, ಮೋನಿಕಾ ಮಲೀಕ್‌, ನವಜ್ಯೋತ್‌ ಕೌರ್, ಲಿಲಿಮಾ ಮಿಂಜ್‌ ಮತ್ತು ಅನೂಪಾ ಬಾರ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT