ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಮೋಹಿತ್‌ಗೆ ಚಿನ್ನ

ಕರಾಟೆ
Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಮೋಹಿತ್ ಜಿ. ರೆಡ್ಡಿ ವಿಜಯವಾಡದಲ್ಲಿ ಇತ್ತೀಚಿಗೆ ನಡೆದ ಅಂತರರಾಷ್ಟ್ರೀಯ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾನೆ.

ಕಸ್ತೂರಿನಗರದಲ್ಲಿರುವ ಪ್ರೆಸಿಡೆನ್ಸಿ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ ಮೋಹಿತ್ ವೈಯಕ್ತಿಕ ಕುಮಿತೆ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾನೆ. ತಂಡ ವಿಭಾಗದ ಸ್ಪರ್ಧೆಯಲ್ಲಿಯೂ ಬೆಳ್ಳಿ ಪಡೆದನು. 
 
`ಕರಾಟೆ ಕಲಿಕೆ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ' ಎಂದು ಮೋಹಿತ್ `ಪ್ರಜಾವಾಣಿ'ಗೆ ತಿಳಿಸಿದ್ದಾನೆ. ರಾಮಮೂರ್ತಿ ನಗರದ ಕೆಂಬು ಕೈ ಶಿಟೊ ರ‌್ಯು ಕರಾಟೆ ಸ್ಕೂಲ್‌ನಲ್ಲಿ ಮೋಹಿತ್ ಕಳೆದ ಒಂದೂವರೆ ವರ್ಷದಿಂದ ತರಬೇತಿ ಪಡೆಯುತ್ತಿದ್ದಾನೆ.
 
ಏಳು ವರ್ಷದ ಮೋಹಿತ್ ಸಾಧನೆಗೆ ಕೋಚ್ ಮತ್ತು ಆರನೇ ಡ್ಯಾನ್ ಬ್ಲ್ಯಾಕ್‌ಬೆಲ್ಟ್ ಸಾಧಕ ವಿಜಯನ್ ಸಂತಸ ವ್ಯಕ್ತಪಡಿಸಿದ್ದು, `ಮೋಹಿತ್ ಅಭ್ಯಾಸದ ವೇಳೆ ತೋರುವ ಉತ್ಸಾಹ ಅಪಾರವಾದದ್ದು. ಆದ್ದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿದೆ' ಎಂದು ಹೇಳಿದ್ದಾರೆ.
 
`ಚಿಕ್ಕ ವಯಸ್ಸಿನಲ್ಲಿಯೇ ಮಗ ಉತ್ತಮ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವುದು ಖುಷಿಯ ವಿಚಾರ. ಈ ಪದಕ ಬಂದಿದ್ದಕ್ಕೆ ಸಂತಸವಾಗಿದೆ' ಎಂದು ಮೋಹಿತ್ ತಂದೆ ಗುರುನಾಥ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT