ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಪ್ರದರ್ಶನ: ಸಭಾಂಗಣ ಭಣ ಭಣ

Last Updated 17 ಫೆಬ್ರುವರಿ 2011, 9:45 IST
ಅಕ್ಷರ ಗಾತ್ರ

ರಾಯಚೂರು: ವೇದಿಕೆಯಲ್ಲಿ ಕಲಾತಂಡಗಳ ಅದ್ಭುತ ಪ್ರದರ್ಶನ... ಕಲಾವಿದರ ಬಡಿತಕ್ಕೆ ಅಬ್ಬರಿಸಿದ ವಾದ್ಯಗಳು ಹೊರಡಿಸುತ್ತಿದ್ದ ನಿನಾದ... ಎದುರಿಗೆ ಕುಳಿತ ಕೆಲವೇ ಕೆಲ ಕಲಾಪ್ರಿಯರನ್ನು ಮಂತ್ರ ಮುಗ್ಧ ರನ್ನಾಗಿಸಿತು... ಜೊತೆಗೆ ಸಭಾಭವ ನದಲ್ಲಿ ಇದ್ದ ಖಾಲಿ ಕುರ್ಚಿಗಳೂ ಸಹ ಈ ಕಲಾ ತಂಡಗಳ ಪ್ರದರ್ಶನ ತಲೆದೂಗಿದಂತೆ ನಿನಾದ ಸಭಾಭವನವನ್ನು ಆವರಿಸಿತ್ತು.. ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬುಧವಾರ ಆರಂಭಗೊಂಡ ರಾಯ ಚೂರು ಜಿಲ್ಲಾ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ರಾತ್ರಿ ನಡೆದ ಕಲಾ ತಂಡಗಳ ಪ್ರದರ್ಶನದಲ್ಲಿ ಕಂಡ ನೋಟವಿದು.

ಸಭಾಭವನದ ಶೇ 70ರಷ್ಟು ಕುರ್ಚಿಗಳು ಖಾಲಿ ಖಾಲಿ! ಟಿಕೆಟ್ ಕಾರ್ಯಕ್ರಮಗಳಿಗೆ ದುಂಬಾಲು ಬಿದ್ದು ಹೋಗಿ ನೋಡುವ ನಗರದ ಜನತೆ ಈ ಜಾನಪದ ಕಲಾ ಸಂಭ್ರ ಮದ ನಮ್ಮದೇ ಜಿಲ್ಲೆಯ ಅದ್ಭುತ ಕಲಾವಿದರ ಪ್ರದರ್ಶನ ವೀಕ್ಷಣೆ ಯಿಂದ ವಂಚಿತರಾದ್ರು! ಪ್ರದರ್ಶನ ವೀಕ್ಷಣೆ ಜನ ಬರದೇ ಇದ್ದರೇನಂತೆ ‘ನಮ್ಮ ಕಲೆ ನಮ್ಮದು ಕಲೆಯೇ ನಮ್ಮ ಜೀವನ’ ಎಂದು ಭಾವಿಸಿದ ಕಲಾ ತಂಡಗಳ ಕಲಾವಿದರು ಹುಮ್ಮಸ್ಸಿನಿಂದಲೇ ಕಲಾ ಪ್ರದರ್ಶನ ನೀಡಿದರು. ಎದುರಿಗೆ ಕುಳಿತಿದ್ದ ಕೆಲವೇ ಕೆಲ ಕಲಾಪ್ರಿಯರ ಚಪ್ಪಾಳೆಯೇ ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದಂತಿತ್ತು!

ಗೀಗೀ ಪದ, ಭಜನೆ, ವೀರಗಾಸೆ, ಲಂಬಾಣಿ, ಹಗಲುವೇಷ, ಹಲಗೆ ಮೇಳ, ಜಾನಪದ ಹಾಡುಗಾರಿಕೆ, ಡೊಳ್ಳು ಕುಣಿತ, ಶಹನಾಯಿ ವಾದನ, ಲಾವಣಿ, ಹಲಗೆ ಮಜಲು, ತೊಗಲು ಗೊಂಬೆಯಾಟ, ಕರಡಿ ಮಜಲು ಹೀಗೆ ಅನೇಕ ಕಲಾ ತಂಡಗಳು  ಪ್ರದರ್ಶನ ನೀಡಿದವು. ಬಹಳ ಆಸೆ ಇಟ್ಟುಕೊಂಡು ರಾಯಚೂರಿಗೆ ಬಂದಿದ್ದೆ. ಅನೇಕರು ಪರಿಚಿತರಿದ್ದಾರೆ. ಆದರೆ ಈ ಜಾನಪದ ಸಂಭ್ರಮದಂಥ ಕಾರ್ಯಕ್ರಮಕ್ಕೆ ಇಲ್ಲಿನ ಜನತೆ ಸ್ಪಂದಿಸಿದ ರೀತಿ ನೋವು ತಂದಿದೆ. ದೂರದ ಊರಿಂದ ಕಷ್ಟಪಟ್ಟು ಬಂದು ತಮ್ಮ ನೋವನ್ನೆಲ್ಲ ಮರೆತು ಇಲ್ಲಿ ಬಂದು ಕಲಾವಿದರು ಕಲೆ ಪ್ರದರ್ಶಿಸುತ್ತಾರೆ.

ಕಾರ್ಯಕ್ರಮ ವೀಕ್ಷಿಸಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವ ಗುಣ ಮರೆಯಾದರೆ ಹೇಗೆ ಎಂದು ಜಾನಪದ ಆಕಡೆಮಿಯ ಅಧ್ಯಕ್ಷ ಗೊ.ರು ಚನ್ನಬಸಪ್ಪ ನೊಂದು ನುಡಿದರು. ಈ ಪ್ರದರ್ಶನ 17ರಂದೂ ಸಂಜೆ ನಡೆಯಲಿದೆ. 13 ಕಲಾ ತಂಡಗಳು ಪ್ರದರ್ಶನ ನೀಡಲಿವೆ.  ಜಾನಪದ ಕಲೆಯ ಬಗ್ಗೆ, ಕಲಾವಿದರು, ನಮ್ಮ ಕಲೆ ಸಂಸ್ಕೃತಿಯ ಬಗ್ಗೆ ಕಳಕಳಿಯುಳ್ಳ ಜನ ತೆರಳಿ ಆಸ್ವಾದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT