ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಸೇವೆಯಲ್ಲಿ ಅಶೋಕ್

Last Updated 4 ಸೆಪ್ಟೆಂಬರ್ 2013, 5:59 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಣ್ಣಿನಿಂದ ಗೌರಿ, ಗಣೇಶ ಮುಂತಾದ ಮೂರ್ತಿಗಳನ್ನು ಮಾಡಿ ಅವುಗಳಿಗೆ ಜೀವ ತುಂಬುವಲ್ಲಿ ನಗರದ ಬಸವೇಶ್ವರ ರಸ್ತೆ ನಿವಾಸಿ ಅಶೋಕ್ ಸಿದ್ಧಹಸ್ತರು. ಇವರ ಕಲಾನೈಪುಣ್ಯವನ್ನು ಎಲ್ಲರೂ ಹಾಡಿ ಹೊಗಳುತ್ತಾರೆ. ಎಲ್ಲದಕ್ಕೂ ಅಶೋಕ್ ಅವರದು ಮಾತ್ರ ನಸುನಗೆಯೇ ಉತ್ತರವಾಗಿದೆ.

ಏಕೆಂದರೆ ಅಶೋಕ್ ಅವರಿಗೆ ಮಾತು ಬರುವುದಿಲ್ಲ. ಆದರೆ, ಕಳೆದ ಮೂವತ್ತು ವರ್ಷಗಳಿಂದ ಮಣ್ಣಿನಲ್ಲಿ ಗೌರಿ-ಗಣಪತಿ ವಿಗ್ರಹ, ವಿದ್ಯುತ್ ಮಂಟಪಗಳನ್ನು ನಿರ್ಮಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾ ಹೆಸರು ಗಳಿಸಿದ್ದಾರೆ.

ಸನ್ನೆಗಳ ಮೂಲಕ ಗ್ರಾಹಕರೊಂದಿಗೆ ವ್ಯವಹರಿಸುವ ಅಶೋಕ್ ಅವರಿಗೆ, ಮಾತು ಬಾರದೇ ಇರುವುದು ಕಲೆ ಮತ್ತು ವ್ಯಾಪಾರಕ್ಕೆ ಎಂದಿಗೂ ತೊಡಕಾಗಿಲ್ಲವಂತೆ.

ವಿಗ್ರಹಗಳ ನಿರ್ಮಾಣವನ್ನು ಕೇವಲ ವ್ಯಾಪಾರ ಭಾವನೆಯಿಂದ ಮಾಡದೆ, ಕಲಾಸೇವೆ ಎಂದು ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT