ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದನ ನೈಜ ಗುಣಗಳನ್ನು ಕೃತಿಯಲ್ಲಿ ತುಂಬಬೇಕು. ಮಾರಾಟದ ಉದ್ದೇಶಕ್ಕಾಗಿ ಕೃತಿ ರಚಿಸಬಾರದು.

Last Updated 15 ಫೆಬ್ರುವರಿ 2011, 6:35 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್‌ನಲ್ಲಿ ದಲಿತಪರ ಹಕ್ಕೊತ್ತಾಯಗಳನ್ನು ಅಳವಡಿಸಿ ಶೇ. 23ರಷ್ಟು ಹಣ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಕೃಷ್ಣಪ್ಪ ಬಣ)ದ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ಸಮಿತಿಯು ಕಳೆದ ಬಜೆಟ್‌ನಲ್ಲಿಯೇ ದಲಿತಪರ ಅಂಶಗಳನ್ನು ಅಳವಡಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗಿತ್ತು. ಆದರೆ, ಅಂದಿನ ಬಜೆಟ್‌ನಲ್ಲಿ ಅವೆಲ್ಲವನ್ನು ಅಳವಡಿಸಿಲ್ಲ. ಆದ್ದರಿಂದ ಪ್ರಸಕ್ತ ಬಜೆಟ್‌ನಲ್ಲಿ ದಲಿತರ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಪರಿಶಿಷ್ಟ ಜಾತಿ/ ವರ್ಗದ ಜನಸಂಖ್ಯೆ ಆಧಾರಿತವಾಗಿ ಶೇ. 23 ಹಣವನ್ನು ಕಾಯ್ದಿರಿಸಿ ರಾಷ್ಟ್ರೀಯ ಯೋಜನಾ ಆಯೋಗದ ನಿರ್ದೇಶನದಂತೆ ಏಕಗವಾಕ್ಷಿ ಮೂಲಕ ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಬೇಕು. ಸಂವಿಧಾನ ತಿದ್ದುಪಡಿ ಮಾಡಲು ಶಿಫಾರಸು ಮಾಡಬೇಕು. ದಲಿತ ನೌಕರರ ಆದಾಯ ಮಿತಿಯನ್ನು  ` 5ಲಕ್ಷಕ್ಕೆ ಏರಿಸಬೇಕು. ಸರ್ಕಾರಿ ಭೂಮಿಯ ಶೇ. 50ರಷ್ಟನ್ನು ಪರಿಶಿಷ್ಟ ಜಾತಿ/ ವರ್ಗಗಳ ಭೂರಹಿತರಿಗೆ ಹಂಚಬೇಕು. ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಮೀಸಲಾತಿ ತರಬೇಕು. ಗ್ರಾ.ಪಂ. ಪಟ್ಟಣ ಪಂಚಾಯ್ತಿ, ಹಾಗೂ ಇತರ ಸ್ಥಳೀಯಾಡಳಿತ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.ಅಪರ ಜಿಲ್ಲಾಧಿಕಾರಿ ಎಚ್.ಎಸ್. ವಿಜಯ್‌ಕುಮಾರ್ ಮನವಿ ಸ್ವೀಕರಿಸಿದರು.ಡಿಎಸ್‌ಎಸ್ ಮುಖಂಡರಾದ ಆಲೂರು ನಿಂಗರಾಜ್, ಕುಂದುವಾಡ ಮಂಜುನಾಥ್, ಹೆಗ್ಗೆರೆ ರಂಗಪ್ಪ, ಲೋಕಿಕೆರೆ ತಿಪ್ಪೆಸ್ವಾಮಿ, ಹೂವಿನಮಡು ಚಂದ್ರಪ್ಪ ಇತರರು ಇದ್ದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT