ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪಾಕಂಗೆ ಆಧುನಿಕ ನಿಯಂತ್ರಣ ಸಾಧನಗಳ ರವಾನೆ

Last Updated 2 ಜುಲೈ 2012, 18:55 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಿಎಚ್‌ಇಎಲ್ (ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್) ಸಂಸ್ಥೆಯಿಂದ ಕಲ್ಪಾಕಂ ಭಾವಿನಿ ಅಣು ವಿದ್ಯುತ್ ಯೋಜನೆಗೆ ಆಧುನಿಕ ನಿಯಂತ್ರಣ ಸಾಧನಗಳ ಪ್ರಥಮ ಕಂತನ್ನು ಶನಿವಾರ ಕಳುಹಿಸಲಾಯಿತು.

ಭಾವಿನಿಯ 500 ಮೆಗಾವಾಟ್ ಪ್ರೊಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರಿನ ಸ್ಟೀಮ್ ಜನರೇಟರಿಗೆ ಆಧುನಿಕ ಮೈಕ್ರೋಪ್ರೊಸೆಸರ್ ಆಧಾರಿತ ನಿಯಂತ್ರಣ ಸಾಧನಗಳನ್ನು ಸರಬರಾಜು ಮಾಡಲಾಯಿತು. ಭಾವಿನಿ ಅಣು ವಿದ್ಯುತ್ ಯೋಜನೆಯ ಮುಖ್ಯ ನಿರ್ಮಾಣ ಎಂಜಿನಿಯರ್ ಬಿ.ಓಬುಳಿ ಹಸಿರು ನಿಶಾನೆ ತೋರಿದರು.

ಬಿಎಚ್‌ಇಎಲ್ ವಿದ್ಯುನ್ಮಾನ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಸಿ.ರಾಮಮೂರ್ತಿ, ಭಾವಿನಿ ಮತ್ತು ಬಿಎಚ್‌ಇಎಲ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT