ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಮಂಟಪಗಳಿಗೆ ಬೀಳಲಿದೆ ಬೀಗಮುದ್ರೆ

Last Updated 6 ಜನವರಿ 2014, 6:48 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಜನವರಿ 11ರ ನಂತರ ಮದುವೆ ಹಾಗೂ ಸಮಾರಂ ಭಗಳನ್ನು ನಡೆಸಲು ಕಲ್ಯಾಣ ಮಂಟಪ ಕಾಯ್ದಿರಿಸಿದ್ದರೆ, ಈಗಲೇ ಎಚ್ಚೆತ್ತು ಕೊಳ್ಳಿ! ಕಾರ್ಯಕ್ರಮ ನಡೆಸಲೆಂದು ನೀವು ನಿಗದಿತ ದಿನದಂದು ಕಲ್ಯಾಣ ಮಂಟಪ ಅಥವಾ ಸಭಾಭವನಗಳಿಗೆ ಬಂದರೆ, ಕಾನೂನು ಬಾಹಿರವಾಗಿ ನಡೆಸುತ್ತಿರುವ ಅವುಗಳಿಗೆ ಬೀಗ ಮುದ್ರೆ ಹಾಕಿರುವುದನ್ನು ಕಂಡು ನಿಮಗೆ ಆಘಾತ ಆಗಬಹುದು.

ಹೌದು, ನಗರದಲ್ಲಿರುವ 101 ಕಲ್ಯಾಣ ಮಂಟಪ/ ಸಭಾಭವನಗಳು ಪರವಾನಗಿ ಪಡೆ­ಯದೇ, ತೆರಿಗೆ ಪಾವತಿಸದೇ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸು­ತ್ತಿರುವುದರಿಂದ ಅವುಗಳಿಗೆ ಬೀಗಮುದ್ರೆ ಹಾಕಲು ಬೆಳಗಾವಿ ಮಹಾನಗರ ಪಾಲಿಕೆಯು ನಿರ್ಧರಿಸಿದೆ.

ಅಗತ್ಯ ಪರವಾನಗಿ ಪಡೆದು, ತೆರಿಗೆ ಪಾವತಿಸುವಂತೆ ಕಲ್ಯಾಣ ಮಂಟಪಗಳ ಆಡಳಿತ ಮಂಡಳಿಗಳಿಗೆ ಪಾಲಿಕೆಯ ಅಧಿಕಾರಿಗಳು ಕಳೆದ ಮೂರು ವರ್ಷ ಗಳಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸಿಲ್ಲ. ಕುಡಿಯುವ ನೀರು, ನೈರ್ಮಲ್ಯ, ವಾಹನ ನಿಲುಗಡೆಗೆ ಸ್ಥಳಾ ವಕಾಶವನ್ನು ಸಮರ್ಪಕವಾಗಿ ನೀಡದಿ ದ್ದರೂ ಮದುವೆ ಹಾಗೂ ಇನ್ನಿತರ ಸಮಾರಂಭ­ಗಳಿಗಾಗಿ ಜನರಿಂದ ಭಾರಿ ಪ್ರಮಾಣದ ಶುಲ್ಕವನ್ನು ಇವು ಪಡೆಯುತ್ತಿದ್ದವು.

ಆಡಳಿತ ಮಂಡಳಿಯವರ ಬೇಡಿಕೆ ಯಂತೆ ಪಾಲಿಕೆಯು ನಗರದ ಕಲ್ಯಾಣ ಮಂಟಪಗಳನ್ನು ಎ, ಬಿ ಹಾಗೂ ಸಿ ವಿಭಾ­ಗಗಳಲ್ಲಿ ವಿಂಗಡಿಸಿದ್ದು, ಪರ ವಾನಗಿ ಪಡೆದುಕೊಳ್ಳುವಂತೆ ಸೂಚಿ­ಸಿತ್ತು. ಆದರೆ, ಆಡಳಿತ ಮಂಡಳಿ ಯವರು ಇದಕ್ಕೆ ಕ್ಯಾರೇ ಎನ್ನಲಿಲ್ಲ. ಪರವಾನಗಿ ಹಾಗೂ ತೆರಿಗೆ ಪಾವತಿ ಸಲು ಕಳೆದ ನವೆಂಬರ್‌ ತಿಂಗಳಿನಲ್ಲಿ ಪಾಲಿಕೆಯಲ್ಲಿ ಏಕಗವಾಕ್ಷಿ ಸೇವಾ ಕೇಂದ್ರ ಆರಂಭಿಸಿದ್ದರೂ ಯಾರೂ ಮುಂದೆ ಬಾರದೇ ಇರುವುದರಿಂದ ಪಾಲಿಕೆಯು ಇದೀಗ ಕಠಿಣ ಕ್ರಮಕ್ಕೆ ಮುಂದಾಗಲು ನಿರ್ಧರಿಸಿದೆ.

‘ಪರವಾನಗಿ ಪಡೆದುಕೊಳ್ಳುವಂತೆ ಕಲ್ಯಾಣ ಮಂಟಪಗಳಿಗೆ ಈಗಾಗಲೇ ನಾವು ಬಹಳ ಕಾಲಾವಕಾಶ ನೀಡಿ ದ್ದೇವೆ. ಹೀಗಿದ್ದರೂ ಯಾರೂ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಜನವರಿ 11ರ ನಂತರ ಕಲ್ಯಾಣ ಮಂಟಪ ಹಾಗೂ ಸಭಾಗೃಹಗಳಿಗೆ ಬೀಗ­ಮುದ್ರೆ ಹಾಕಲಾ ಗುವುದು. ಯಾರು ಪರವಾನಿಗೆ ಪಡೆದು ತೆರಿಗೆ ಪಾವತಿಸುತ್ತಾರೋ, ಅಂಥವರಿಗೆ ಕಾರ್ಯ­ನಿರ್ವ­­ಹಿಸಲು ಅವಕಾಶ ಕಲ್ಪಿಸಲಾ ಗುವುದು’ ಎಂದು ಮಹಾನಗರ ಪಾಲಿಕೆಯ ಆರೋಗ್ಯಾ ಧಿಕಾರಿ ಡಾ. ಸತೀಶ ಪೋತದಾರ ತಿಳಿಸಿದರು.

‘ಕಲ್ಯಾಣ ಮಂಟಪದವರಿಗೆ ಮೊದ ಲಿಗೆ ಕಳೆದ ಮೂರು ವರ್ಷಗಳ ಕರವನ್ನು ಪಾವತಿಸಿ, ಬಾಕಿ ಯನ್ನು ಆ ನಂತರ ಪಾವ­ತಿ­ಸುವಂತೆ ಸೂಚಿ ಸಲಾ ಗಿತ್ತು. ಆದರೆ, ಪಾಲಿಕೆಯ ಮಾಜಿ ಸದಸ್ಯ ರೊಬ್ಬರು ಆಡಳಿತ ಮಂಡಳಿ ಯವರನ್ನು ದಾರಿ ತಪ್ಪಿ­ಸುತ್ತಿದ್ದಾರೆ. ಏನೇ ಇರಲಿ, ತೆರಿಗೆ ಪಾವತಿಸುವು­ದರಿಂದ ತಪ್ಪಿಸಿ­ಕೊಳ್ಳಲು ಸಾಧ್ಯವಿಲ್ಲ. ನಗರ­ದಲ್ಲಿರುವ 101 ಕಲ್ಯಾಣ ಮಂಟಪ/ ಸಭಾ­ಗೃಹಗಳ ಪೈಕಿ ಯಾವುದೂ ಪರವಾನಿಗೆ ಪಡೆದು­ಕೊಂಡಿಲ್ಲ. ಹೀಗಾಗಿ ಅವುಗಳಿಗೆ ಕಾರ್ಯ ನಿರ್ವ­ಹಿಸಲು ಅವ­ಕಾಶ ನೀಡುವುದಿಲ್ಲ. ಹೀಗಾಗಿ ಪರ­ವಾನಿಗೆ ಪಡೆದು­ಕೊಳ್ಳದ ಕಲ್ಯಾಣ ಮಂಟಪ­ಗಳಲ್ಲಿ ಸಭೆ–ಸಮಾರಂಭಗಳನ್ನು ಸಾರ್ವ­ಜನಿ­ಕರೂ ಇಟ್ಟುಕೊಳ್ಳ ಬಾರದು’ ಎಂದು ಪೋತದಾರ ತಿಳಿಸಿದರು.

ನಗರದಲ್ಲಿರುವ 101 ಕಲ್ಯಾಣ ಮಂಟಪ/ ಸಭಾ­ಗೃಹಗಳು ಅಧಿಕೃತವಾಗಿ ಪರವಾನಿಗೆ ಪಡೆದು ಕೊಂಡರೆ ಅದರಿಂದ ಮಹಾ­­­ನಗರ ಪಾಲಿಕೆಗೆ ಕನಿಷ್ಠ ರೂ.20 ಲಕ್ಷ ಆದಾಯ ಲಭಿ­ಸಲಿದೆ. ಜೊತೆಗೆ ಇವು ಕಳೆದ ಮೂರು ವರ್ಷಗಳ ಬಾಕಿ ಕರ­ವನ್ನು ಪಾವತಿ­ಸಿದರೆ  ರೂ.1 ಕೋಟಿಯಷ್ಟು ಆದಾ­ಯ ಪಾಲಿ­ಕೆಗೆ ಲಭಿಸಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT