ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಗಣಿಗಾರಿಕೆ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ/ ಹೈದರಾಬಾದ್ (ಪಿಟಿಐ): ಸರ್ಕಾರದ ಗಣಿ ನೀತಿಯು ರಾಷ್ಟ್ರದ ಜೀವವೈವಿಧ್ಯವನ್ನು ನಾಶ ಮಾಡುತ್ತಿದೆ ಎಂದು ಆಪಾದಿಸಿರುವ ಗ್ರೀನ್‌ಪೀಸ್ ಸಂಘಟನೆಯು, ಅರಣ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾವವನ್ನು ಪುನರ್ ಪರಿಶೀಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

193 ರಾಷ್ಟ್ರಗಳ ಪ್ರತಿನಿಧಿಗಳ ಪಾಲ್ಗೊಳ್ಳಲಿರುವ ವಿಶ್ವಸಂಸ್ಥೆಯ 11ನೇ ಜೀವವೈವಿಧ್ಯ ಸಮಾವೇಶ ಹೈದರಾಬಾದ್‌ನಲ್ಲಿ ಸೋಮವಾರ ಆರಂಭವಾಗಲಿದ್ದು, ಅದಕ್ಕೆ ಮುನ್ನಾದಿನ ಸಂಘಟನೆಯು ಈ ಧ್ವನಿ ಎತ್ತಿದೆ. ಈ ಮಹತ್ವದ ಸಮಾವೇಶವು ಅ.19ರವರೆಗೆ ನಡೆಯಲಿದೆ.

ಸಮಾವೇಶದ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ತಪ್ಪು ನೀತಿಗಳನ್ನು ಬಯಲು ಮಾಡುವುದಾಗಿ ಗ್ರೀನ್‌ಪೀಸ್ ವಕ್ತಾರರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಮಧ್ಯ ಭಾರತವೊಂದರಲ್ಲೇ 13 ಕಲ್ಲಿದ್ದಲು ಗಣಿಗಳಿಂದಾಗಿ 11 ಲಕ್ಷ ಹೆಕ್ಟೇರ್‌ಗಳಷ್ಟು ಅರಣ್ಯಕ್ಕೆ ಧಕ್ಕೆಯಾಗಲಿದೆ. ಇದರಿಂದ 14,000 ಆದಿವಾಸಿಗಳು ಮನೆ- ಮಠ ಕಳೆದುಕೊಂಡು ಸಂತ್ರಸ್ತರಾಗಲಿದ್ದಾರೆ  ಎಂದು ಸಂಘಟನೆ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT