ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲುಗಳ ನಡುವೆ ಕಾನನದ `ಸುಂದರಿ'

Last Updated 31 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಧ್ಯಾಹ್ನದ ಉರಿ ಬಿಸಿಲಲ್ಲಿ ಗದ್ದೆಯ ಕಡೆಗೆ ಹೊರಟಿದ್ದ ನನಗೆ ದಾರಿಯ ಪಕ್ಕದಲ್ಲಿ ಕಲ್ಲುಗಳ ಮಧ್ಯೆ ಹೂ ಗೊಂಚಲುಗಳನ್ನು ನೋಡಿ ಆಶ್ಚರ್ಯವಾಗಿ, ಹೂ ತೋಟಗಳಲ್ಲಿ ನಗಬೇಕಾದ ಈ ಚೆಲುವೆ ಕಲ್ಲುಗಳ ಮಧ್ಯೆ ಸಿಕ್ಕಿಕೊಂಡಿದ್ದಾಳಲ್ಲ ಅನಿಸಿತು.  ಹೊಲಗಳಿಂದ ದಣಿದು ಬರುವವರ ಮನಸ್ಸಿಗೆ ಅಹ್ಲಾದ ನೀಡಲು ನಸು ನಗುವ ಬೀರಿ ನಿಂತಿರಬಹುದು ಎನ್ನಿಸಿತು.

ನೋಡುಗರನ್ನು ಕ್ಷಣಮಾತ್ರದಲ್ಲಿ ಸೆಳೆಯುವ ಅಂದ. ಬಣ್ಣದ ಗೆರೆಗಳ ಚಿತ್ತಾರದ ಜೊತೆಗೆ ಮುದ್ದಾದ ಮೂಗುತಿಯನ್ನು ಧರಿಸಿರುವ  ಈ ಚೆಲುವೆ ಕ್ಯಾಕ್ಟಸ್ ಜಾತಿಗೆ ಸೇರಿದ ಎಂಪೋರ್ಬಿಸ್. ಇದರ ಹೂಗಳು ಎರಡು ಕೈಗಳಿಂದ ಹಿಡಿಯುವಷ್ಟು ಗೊಂಚಲನ್ನು ಹೊಂದಿರುತ್ತವೆ. ಹಳದಿ ಹಾಗೂ ಕಪ್ಪು ಮಿಶ್ರಿತ ಕೆಂಪು  ಬಣ್ಣದ ಗೆರೆಗಳು ಮೂಡಿ ಹೊಸದೊಂದು ರೂಪ ನೀಡಿವೆ. ಅರಳಿದ ಹೂ ಮಧ್ಯದಲ್ಲಿ ಬಿಳಿಯ ಮೂಗುತಿಯಾಕಾರವು ಇದರ ಅಂದವನ್ನು ಇಮ್ಮಡಿಗೊಳಿಸುವಂತಿದೆ. ಒಂದೇ ಗೊಂಚಲಿನಲ್ಲಿ ಅರಳಿದ ಹಾಗೂ ಮೊಗ್ಗಿನ ನೋಟವು ವಾವ್! ಎನ್ನುವಷ್ಟು ಚೆಲುವು. ಮೂರು ನಾಲ್ಕು ದಿನಗಳ ವರೆಗೆ ಬಾಡದೆ ತನ್ನ ಅಂದವನ್ನು ಉಳಿಸಿಕೊಂಡಿರುತ್ತದೆ.

ಇವುಗಳು ಸಾಮಾನ್ಯವಾಗಿ ಬರಡು ನೆಲದ ಕಲ್ಲುಗಳ ನಡುವೆ ಹಾಗೂ ಕಲ್ಲು ಮಿಶ್ರಿತ ಮಣ್ಣಿನಲ್ಲಿ ಬೆಳೆಯುತ್ತವೆ. ವರ್ಷದ ಎಲ್ಲ ಕಾಲದ್ಲ್ಲಲ್ಲೂ ಹಸಿರಾಗಿರಲು ದಪ್ಪವಾದ ಕಾಂಡ, ಸೂಕ್ಷ್ಮ ಎಲೆಗಳನ್ನು ಹೊಂದಿವೆ. ಇವುಗಳು ಕೇವಲ ಎರಡು ಅಡಿ ಎತ್ತರ ಬೆಳೆಯುತ್ತವೆ. ಸುವಾಸನೆಭರಿತವಾಗಿ ಇರದಿದ್ದರೂ ಚೆಲುವಿನಲ್ಲಿ ಬೇರೆ ಹೂವುಗಳಿಗಿಂತ ಕಮ್ಮಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT