ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿಗೆ ಚೆಕ್‌ಡ್ಯಾಂ ಬಲಿ

Last Updated 18 ಸೆಪ್ಟೆಂಬರ್ 2013, 6:06 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಸೊಂಡೇನ­ಹಳ್ಳಿ ಗೊಲ್ಲರಹಟ್ಟಿ ಗ್ರಾಮ­ದಲ್ಲಿ ಈಚೆಗೆ ನಿರ್ಮಿಸಿದ್ದ ತಡೆಅಣೆಯ ಏರಿ ಕುಸಿದಿದ್ದು, ಗುತ್ತಿಗೆದಾರರೇ ಏರಿ ಬದಿಯಲ್ಲಿ ಕಂದಕ ತೋಡಿ ನೀರು ಹೊರಗೆ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಮಂಗಳವಾರ ದೂರಿದರು.

ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿರುವ ಕುರಿತು ಶಂಕೆ ವ್ಯಕ್ತ­ಪಡಿಸಿರುವ ಗ್ರಾಮಸ್ಥರು, ಕಾಮ­ಗಾರಿಯ ಗುಣಮಟ್ಟ ಕಾಪಾಡು­ವಲ್ಲಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾ­ಯಿತಿಯ ಜನಪ್ರತಿನಿಧಿಗಳು ವಿಫಲ­ರಾಗಿದ್ದಾರೆ ಎಂದು ಆಕ್ರೋಶ­ವ್ಯಕ್ತಪಡಿಸಿದರು.

ಗುಡ್ಡದ ಸರಣಿಯಲ್ಲಿ ಬಿದ್ದ ಮಳೆ ನೀರು ಗುಡ್ಡಗಳ ಮೇಲಿಂದ ಹರಿದು ಬಂದು ಸ್ವಾಭಾವಿಕವಾಗಿ ಸಂಗ್ರಹ­ವಾಗು­ತ್ತಿತ್ತು. ಕಾಡುಪ್ರಾಣಿಗಳು, ಜಾನುವಾರುಗಳು ತಮ್ಮ ದಾಹ ಇಂಗಿಸಿಕೊಳ್ಳುತ್ತಿದ್ದವು. ತಡೆಅಣೆ ನಿರ್ಮಿ­ಸುವ ನೆಪದಲ್ಲಿ ಸ್ವಾಭಾವಿಕ ವ್ಯವಸ್ಥೆಯನ್ನೂ ಹಾಳುಗೆಡವಿದ್ದಾರೆ ಎಂದು ರೈತ ಸುಧಾಕರ್ ಆರೋಪಿಸಿದರು.

ಸೊಂಡೇನಹಳ್ಳಿ ಹಳ್ಳದಲ್ಲಿ ಒಟ್ಟು 12 ತಡೆಅಣೆಗಳು ಕಳಪೆ ಕಾಮಗಾರಿ­ಯಿಂದ ಕೊಚ್ಚಿ ಹೋಗಿವೆ ಎಂದು ದೂರಿದ ಸೋಮನಹಳ್ಳಿ, ಸೋಮನ­ಹಳ್ಳಿ ಪಾಳ್ಯ, ಬಾಣದೇವರಹಟ್ಟಿ, ಜುಂಜಪ್ಪನಹಟ್ಟಿ, ರಂಗನಾಥಪುರ, ನಾರ್ಸಿಹಳ್ಳಿ ಗ್ರಾಮಸ್ಥರು ಚೆಕ್‌ ಡ್ಯಾಂ ನಿರ್ಮಿಸುವ ನೆಪದಲ್ಲಿ ಸ್ವಾಭಾವಿಕ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂದು ರೈತರಾದ ಬಸವರಾಜು, ರಾಜು, ಚಿಕ್ಕಣ್ಣಸ್ವಾಮಿ, ಕೆಂಪಯ್ಯ ದೂರಿದರು. ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎ.­ತಿಮ್ಮೇಗೌಡ, ಗೋ.ನಿ.­ವಸಂತ­ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT