ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಗೊಬ್ಬರ: ಅಧಿಕಾರಿಗಳ ಪರಿಶೀಲನೆ

Last Updated 16 ಸೆಪ್ಟೆಂಬರ್ 2013, 5:46 IST
ಅಕ್ಷರ ಗಾತ್ರ

ಸಕಲೇಶಪುರ: ಟಾಟಾ ತೋಟದ ಸಾಮಾಗ್ರಿಗಳ ಮಾರಾಟದ ಅಂಗಡಿಯಲ್ಲಿ ಕಳಪೆ ಗುಣಮಟ್ಟಣದ ಪೊಟ್ಯಾಸ್ ರಸಗೊಬ್ಬರ ಮಾರಾಟ ಮಾಡಲಾ ಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೇಶ್ ಶನಿವಾರ ರಸಗೊಬ್ಬರ ಗುಣಮಟ್ಟ ಪರೀಶೀಲನೆ ನಡೆಸಿದರು.

ತಾಲ್ಲೂಕಿನ ಹೆಗ್ಗದ್ದೆ ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ನಂಜಪ್ಪ ಅವರು ಸದರಿ ಅಂಗಡಿಯಲ್ಲಿ  ಖರೀದಿ ಮಾಡಿದ್ದ 4 ಚೀಲ ಪೊಟ್ಯಾಷ್ ರಸಗೊ ಬ್ಬರದ ಒಂದು ಚೀಲದಲ್ಲಿ ಒಂದು ಕೆ.ಜಿ.ಯಷ್ಟು ಜೇಡಿ ಮಣ್ಣು ಇರುವುದು ಕಂಡು ಬಂದಿದೆ. ಅನುಮಾನ ಗೊಂಡು ಮತ್ತೊಂದು ಚೀಲ ಪರಿಶೀಲಿಸಿದಾಗ ಅದರಲ್ಲೂ ಮಣ್ಣು ಮಿಶ್ರಣಗೊಂಡಿರುವುದು ಕಂಡು, ಸಹಾಯಕ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದರು.

ಸಹಾಯಕ ಕೃಷಿ ನಿರ್ದೇಶಕ ಜಿ.ಎಚ್.ಯೋಗೇಶ್ ಸ್ಥಳಕ್ಕೆ ತೆರಳಿ ಪೊಟ್ಯಾಸ್ ಗೊಬ್ಬರದ ಚೀಲಗಳನ್ನು ಪರಿಶೀಲನೆ ನಡೆಸಿದಾಗ ಜುವಾರಿ ಕಂಪನಿಯ ಪೊಟ್ಯಾಸ್ ರಸಗೊಬ್ಬರ ಚೀಲದಲ್ಲಿ ಒಂದು ಕೆ.ಜಿ.ಯಷ್ಟು ಜೇಡಿ ಮಣ್ಣು ಮಿಶ್ರಣ ಆಗಿರುವುದು ಕಂಡು ಬಂದಿದೆ. ಮಣ್ಣು ಹೊರತುಪಡಿಸಿದರೆ, ರಸಗೊಬ್ಬರ ಗುಣಮಟ್ಟದಲ್ಲಿ ಯಾವುದೇ ದೋಷವಿಲ್ಲ. ಅದು ಅಸಲಿ ಪೊಟ್ಯಾಸ್ ಆಗಿದೆ ಎಂದು ಯೋಗೇಶ್ ಅವರು ಸುದ್ದಿಗಾರರಿಗೆ ಹೇಳಿದರು.

‘ಮಣ್ಣು ಮಿಶ್ರಣವಾಗಿರುವ ಬಗ್ಗೆ ನೇರವಾಗಿ ಜುವಾರಿ ಕಂಪನಿ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಲಾಗಿದೆ. ಪ್ಯಾಕಿಂಗ್ ಸಂದರ್ಭದಲ್ಲಿ ವ್ಯತ್ಯಾಸವಾಗಿರಬಹುದು, ಕಂಪನಿಯ ತಜ್ಞರನ್ನು ಸೋಮವಾರ ಕೃಷಿ ಇಲಾಖೆಗೆ ಕಳುಹಿಸ ಲಾಗುವುದು. ಕನಿಷ್ಟ 20 ಚೀಲಗಳನ್ನು ಒಡೆದು ಗುಣಮಟ್ಟವನ್ನು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿ, ಎಲ್ಲಾ ಚೀಲಗಳಲ್ಲಿಯೂ ಅಂತಹ ದೋಷ ಗಳೇನಾ ದರೂ ಕಂಡು ಬಂದರೆ ಅದರ ಹೊಣೆ ಹೊರುವುದಕ್ಕೆ ಸಿದ್ದ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿಯವರೆಗೂ ಟಾಟಾ ತೋಟಗಳ ಸಾಮಾಗ್ರಿ ಮಾರಾಟದ ಅಂಗಡಿಯವರು ಸದರಿ ಪೊಟ್ಯಾಸ್ ರಸಗೊಬ್ಬರವನ್ನು ಯಾವುದೇ ರೈತರಿಗೆ ಮಾರಾಟ ಮಾಡದಂತೆ ಆದೇಶ ನೀಡಲಾಗಿದೆ ಎಂದರು.
ಜನಪ್ರತಿನಿಧಿಗಳಿಗೆ ಅಗೌರವ: ಆರೋಪ

ಅರಕಲಗೂಡು: ತೋಟಗಾರಿಕೆ ಇಲಾಖೆ ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ನಡೆಸಿದ ಇಲಾಖೆ ಕಾರ್ಯಕ್ರ ಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ಆಗೌರವ ತೋರಿದೆ ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಯ್ಯ ಆರೋಪಿಸಿದ್ದಾರೆ.

ಇತ್ತೀಚೆಗೆ ಇಲಾಖೆ ವತಿಯಿಂದ ಅಂಗಾಂಶ ಕೃಷಿ ಬಾಳೆ ಬೆಳೆ ಕುರಿತ ಮಾಹಿತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರನ್ನು ಆಹ್ವಾನಿಸದೇ ಜನಪ್ರತಿನಿಧಿಗಳ ಬಗ್ಗೆ ಇಲಾಖೆ ಅಗೌರವ ತೋರಿದೆ, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮತ್ತು ಪಂಚಾಯತ್‌ರಾಜ್‌ ಸಚಿವರಿಗೆ ದೂರವಾಣಿ ಮೂಲಕ ದೂರು ನೀಡಿರುವುದಲ್ಲದೇ ಪತ್ರ ಸಹ ಬರೆದಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT