ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ದರ್ಜೆ ಪ್ಲಾಸ್ಟಿಕ್ ಬಳಕೆ ಬೇಡ

Last Updated 11 ಅಕ್ಟೋಬರ್ 2011, 8:15 IST
ಅಕ್ಷರ ಗಾತ್ರ

ಶಿರಸಿ: ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳಲ್ಲಿ ಕೆಳ ದರ್ಜೆಯ ಪ್ಲಾಸ್ಟಿಕ್ ಬಳಕೆ ನಿರ್ಬಂಧವಾಗಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ ಹೇಳಿದರು.

ಅವರು ನಗರದ ಮಿನಿವಿಧಾನ ಸೌಧದಲ್ಲಿ ಸೋಮವಾರ ಜರುಗಿದ ಶಿರಸಿ ಉಪವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾ ನಾಡಿದರು. ಅನೇಕ ಜಿಲ್ಲೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಅಧಿಕಾರಿಗಳ ಜೊತೆ ಮಾತನಾ ಲಾಗಿದೆ.
 
ಪ್ರತಿ ಸರ್ಕಾರಿ ಕಚೇರಿಗಳಲ್ಲೂ ಪ್ಲಾಸ್ಟಿಕ್ ಬಳಕೆ ಪ್ರತಿಬಂಧಿಸಬೇಕು. ಪ್ಲಾಸ್ಟಿಕ್ ಮನುಷ್ಯನ ಬದುಕಿಗೆ ಮಾರಕವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಗಳನ್ನು ಬೆಂಕಿಯಿಂದ ಸುಡುವದು ಇನ್ನೂ ಅಪಾಯಕಾರಿಯಾಗಿದೆ.

ಪ್ರತಿಯೊಬ್ಬ ಪ್ರಜೆಯೂ ಪ್ಲಾಸ್ಟಿಕ್ ಬಳಕೆ ಮಾಡುವದಿಲ್ಲ ಎಂಬ ಸ್ವಯಂ ನಿರ್ಧಾರ ಮಾಡಬೇಕು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ಹೆಚ್ಚಿದ್ದರಿಂದ ಸೆಣಬಿನ ಚೀಲಗಳ ಬಳಕೆ, ಸೆಣಬು ಉತ್ಪಾದನೆ ಕುಂಠಿತಗೊಂಡಿದೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತು 64 ವರ್ಷ ಕಳೆದರೂ ವಸತಿರಹಿತರು, ಸೂರು ಇಲ್ಲದವರ ಸಂಖ್ಯೆ ಪ್ರತಿ ತಾಲ್ಲೂಕಿನಲ್ಲಿ ಸಾಕಷ್ಟು ಇವೆ. ಆಡಳಿತ ನಡೆಸುವವರು ಮನೆ ಇಲ್ಲದವರಿಗೆ ಮನೆ ನೀಡುವ ಮನಸ್ಸು ಮಾಡಬೇಕು. ಉಳ್ಳವರು ಕಬಳಿಸಲು ಬಿಡಬಾರದು.

ಸೂರಿಲ್ಲದವರಿಗೆ ಮನೆ ಕೊಡಬೇಕು ಎಂದು ಎಷ್ಟು ಕಟು ಭಾಷೆ ಬಳಸಿ ಸರ್ಕಾರಕ್ಕೆ ಹೇಳಿದರೂ ಪ್ರಯೋಜನವಾಗಿಲ್ಲ. ಸರ್ಕಾರ ಬರೀ ಭರವಸೆ ನೀಡುತ್ತದೆಯೇ ಅನುಷ್ಠಾನಗೊಳಿಸುತ್ತಿಲ್ಲ. ಹಿಂದಿನ ವರ್ಷ ಅತಿವೃಷ್ಠಿಯಿಂದ ನಿರಾಶ್ರಿತರಾದ ಎಲ್ಲರಿಗೂ ಇನ್ನೂ ತನಕ ಮನೆ ದೊರೆತಿಲ್ಲ ಎಂದು ಅವರು ಆರೋಪಿಸಿದರು.

ಮನುಷ್ಯರಾಗಿ ಕೆಲಸ ಮಾಡಿ: ಪೋಲಿಸರು ಮನುಷ್ಯರಾಗಿ ಕೆಲಸ ಮಾಡಬೇಕು. ಬಂಧಿತರಿಗೆ ಹೊಡೆ ಯುವ, ಮೆಣಸಿನಪುಡಿ ಹಾಕುವ, ಎರೋಪ್ಲೇನ್ ಹತ್ತಿಸುವ ಅಧಿಕಾರಿ ಪೋಲಿಸರಿಗೆ ಇಲ್ಲ. ಪೋಲಿಸರು ಹಿಂಸೆಯಲ್ಲಿ ತೊಡಗುವದು ಅಸಿಂಧು ವಾಗುತ್ತದೆ. ಸಮಾಜ ರಕ್ಷಣೆಗಾಗಿ ಪೋಲಿಸರಿಗೆ ಅಧಿಕಾರ ನೀಡಲಾಗಿದೆ. ಇದರ ದುರ್ಬಳಕೆ ಮಾಡಿಕೊಂಡರೆ ಸಮಾಜ ಹಾಳಗುತ್ತದೆ ಎಂದು ಎಸ್.ಆರ್.ನಾಯಕ ಹೇಳಿದರು. ಸಹಾಯಕ ಆಯುಕ್ತ ಬಗಾದಿ ಗೌತಮ, ಪೋಲಿಸ್ ಉಪಾಧೀಕ್ಷಕ ಎನ್.ಡಿ.ಬಿರ್ಜೆ, ತಹ ಸೀಲ್ದಾರರಾದ ಎಚ್. ಕೆ.ಕೃಷ ್ಣಮೂರ್ತಿ, ಗಣಪತಿ ಕಟ್ಟಿನಕೆರೆ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ವಚ್ಛತಾ ವಿಭಾಗದ ಕಾರ್ಮಿಕರು ೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT