ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಸೇವೆಗೆ ರೂ.5 ಕೋಟಿ ದಂಡ

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅನಪೇಕ್ಷಿತ ವಾಣಿಜ್ಯ ಕರೆ (ಟೆಲಿ ಮಾರುಕಟ್ಟೆ ಕರೆ) ಮತ್ತು ಕಳಪೆ ಸೇವೆಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ದೂರವಾಣಿ ಸೇವಾ ಸಂಸ್ಥೆಗಳಿಗೆ 2013ರಲ್ಲಿ ಒಟ್ಟು ರೂ.5 ಕೋಟಿ ದಂಡ ವಿಧಿಸಿದೆ.

ಟೆಲಿ ಮಾರುಕಟ್ಟೆ ಕರೆಗಳಿಗಾಗಿ ಬಳಕೆಯಾದ 9 ಲಕ್ಷ ಮೊಬೈಲ್‌ ದೂರ­ವಾಣಿ ಸಂಖ್ಯೆಗಳನ್ನು ‘ಟ್ರಾಯ್‌’ ರದ್ದುಪಡಿ­ಸಿದ್ದು, ಸೇವೆ ಸ್ಥಗಿತ­ಗೊಳಿಸಿದೆ. ನೋಂದಾ­ಯಿ­ಸಿಕೊಳ್ಳದೆ ವಾಣಿಜ್ಯ ಕರೆ ಮಾಡಿದ, ಮತ್ತು ‘ಎಸ್‌ಎಂಎಸ್‌’ ಕಳುಹಿಸಿದ 1.74 ಲಕ್ಷ  ಸಂಖ್ಯೆಗಳನ್ನು ‘ಕಪ್ಪು ಪಟ್ಟಿಗೆ’ ಸೇರಿಸಿದೆ.  ಒಟ್ಟು 170 ದೂರವಾಣಿ ವೃತ್ತಗಳಲ್ಲಿ ಸೇವಾ ಗುಣಮಟ್ಟ ಕಾಯ್ದುಕೊಳ್ಳದ ವಿವಿಧ ಕಂಪೆನಿಗಳಿಗೆ  ರೂ.2.8 ಕೋಟಿ  ದಂಡ ವಿಧಿಸಲಾಗಿದೆ ಎಂದು ‘ಟ್ರಾಯ್‌’ ಪ್ರಕಟಣೆ ತಿಳಿಸಿದೆ.
ಅನಪೇಕ್ಷಿತ ಕರೆಗಳಿಗೆ ನಿಷೇಧ ಹೇರಿದ ನಂತರ ವಾಣಿಜ್ಯ ಕರೆಗಳ ಸಂಖ್ಯೆ ತಿಂಗಳಿಗೆ 50 ಸಾವಿರದಿಂದ 11 ಸಾವಿರಕ್ಕೆ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT