ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳ ಬೆಕ್ಕು

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಅದೊಂದು ಕಳ್ಳ ಬೆಕ್ಕು. ತಾನು ವಾಸವಿದ್ದ ಮನೆಯಲ್ಲಿನ ಇಲಿಗಳನ್ನೆಲ್ಲಾ ತಿಂದಿತು. ಮನೆಯವರಿಗೆ ಖುಷಿಯೋ ಖುಷಿ. ಅವರ ಮನೆಯಲ್ಲೊಂದು ಪುಟ್ಟ ಮಗು ಇತ್ತು. ಆ ಮಗುವಿಗೆ ಇಲಿಗಳಿಂದ ತೊಂದರೆಯಾಗಬಾರದೆಂದು ಬೆಕ್ಕನ್ನು ಸಾಕಿದ್ದರು. ಬೆಕ್ಕು ಇಲಿಗಳನ್ನೇನೋ ತಿಂದಿತು.

ಅದರ ಜೊತೆಗೆ ಮಗುವಿಗಾಗಿ ಇಡುತ್ತಿದ್ದ ಹಾಲನ್ನೂ ಕದ್ದು ಕುಡಿಯುತ್ತಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ಬೆಕ್ಕನ್ನು ಮನೆಯಿಂದ ಓಡಿಸಲು ನಿರ್ಧರಿಸಿದ.

ಆಗ ಬೆಕ್ಕು, ‘ನಾನು ನಿಮ್ಮ ಮನೆಯ ಇಲಿಗಳನ್ನು ಓಡಿಸಿ ನಿಮಗೆ ಎಷ್ಟು ಸಹಾಯ ಮಾಡಿದ್ದೇನೆ. ನನ್ನನ್ನು ಓಡಿಸುವಿರಾ?’ ಎಂದು ಕೇಳಿತು.

ಆಗ ಮಾಲೀಕ- ‘ನೀನು ಸಹಾಯ ಮಾಡಿರುವುದು ನಿಜ. ಆದರೆ ನಿನಗೆ ಅಗತ್ಯ ಇರುವ ಹಾಲನ್ನು ನಾವು ನೀಡುತ್ತಿದ್ದರೂ ನೀನು ಮಗುವಿನ ಹಾಲನ್ನು ಕದ್ದು ಕುಡಿಯುತ್ತಿರುವೆ. ಇದರಿಂದ ಪ್ರತೀ ರಾತ್ರಿ ಮಗುವಿಗೆ ಹಾಲು ಇಲ್ಲದಂತಾಗಿ ಅದು ಅಳುತ್ತಿದೆ. ನಿನ್ನಿಂದ ಆಗಿರುವ ಉಪಕಾರಕ್ಕಿಂತ ಅಪಕಾರವೇ ಹೆಚ್ಚಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT