ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಲಗಿ ಶಾಲೆಯಲ್ಲಿ ‘ಇತಿಹಾಸ’

Last Updated 4 ಡಿಸೆಂಬರ್ 2013, 7:42 IST
ಅಕ್ಷರ ಗಾತ್ರ

ವಿಜಾಪುರ: ಸಮೀಪದ ಕವಲಗಿಯ ಸಂಗನಬಸವ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಭಾಗದಿಂದ ‘ಇತಿಹಾಸ’ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಮನುಕುಲದ ಪ್ರಗತಿಯ ಚಿತ್ರಣ, ವೈಜ್ಞಾನಿಕ ಸಾಧನೆ, ವಿವಿಧ ರಾಜ ವಂಶಗಳ ಏಳು ಬೀಳಿನ ಚಿತ್ರಣ, ಅಧಿಕಾರಿಶಾಹಿತ್ವ, ಪ್ರಜಾಪ್ರಭುತ್ವ, ಯುದ್ಧದ ಭಯಾನಕತೆ ಹಾಗೂ ಏಕೀಕೃತ ಜಗತ್ತಿನ ಕನಸುಗಳ ಚಿತ್ರಣ ವನ್ನು ಪ್ರಸ್ತುತ ಪಡಿಸಲಾಯಿತು. ಮಹಾಭಾರತದ ಮತ್ತು ಆಧುನಿಕ ಪ್ರಣಾಳ ಶಿಶು ಪರಿಕಲ್ಪನೆ, ಬೃಹತ್ ಆಕಾರದ ಜಗತ್ತಿನ ಭೂಪಟ ಗಮನ ಸೆಳೆದವು.

ಪ್ರದರ್ಶನದ ಅಂಗವಾಗಿ ಸಂಗನಬಸವ ಪದವಿ ಪೂರ್ವ ಕಾಲೇ ಜಿನ ವಿದ್ಯಾರ್ಥಿಗಳು ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ತಿಂಡಿ ತಿನಿಸುಗಳಿಂದ ಕೂಡಿದ ಹಾಗೂ ವಿವಿಧ ವಿನೋದಾವಳಿಗಳ ‘ಚಳಿಗಾಲದ ಜಾತ್ರೆ’ ಹಮ್ಮಿಕೊಂಡಿದ್ದರು.

ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್‌ ಶಾಲೆಯ ಪ್ರಾಚಾರ್ಯ ಕೌಶಿಕ್‌ ಬ್ಯಾನರ್ಜಿ ಮುಖ್ಯ ಅತಿಥಿಯಾಗಿದ್ದರು. ಪ್ರಾಚಾರ್ಯ ಡಾ.ಆಗಸ್ಟಿನ್‌ ಐಸಾಕ್‌, ಮಾರ್ಗರೇಟ್‌ ಆಗಸ್ಟಿನ್‌ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT