ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ

Last Updated 27 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಪ್ಯಾರಿಸ್ಸಿನ ಲಿಡೊ ಷೋನಲ್ಲಿ

ಆಗಸದಿಂದ ಬಿಳಿಯರಳೆಯ ಮೋಡಗಳ
ನಡುವೆ ಕುಳಿತ ಷೋಡಶಿ
ರಾಗರತಿಯ ನೆರಳು ಬೆಳಕಿನ ಕಣ್ಣುಮುಚ್ಚಾಲೆಯಲ್ಲಿ
ಅವತರಿಸಿದಳು ಭುವಿಗೆ ವಿಮಾನದಲ್ಲಿ
ಮಂದಹಾಸ ಬೀರುತ್ತ ಹಿಗ್ಗಿನ ಬುಗ್ಗೆಯಾಗಿ
ಒಂದೊಂದೆ ವಸ್ತ್ರ ಕಳಚಿ ನಿಂತ
ಭುವನಸುಂದರಿಯ ಸುತ್ತಲೂ
ಎಪ್ಪತ್ತು ಸುರಕನ್ನಿಕೆಯರು

ಪೀಚುಮೊಲೆಯ ನೆರಿಗೆಗಟ್ಟದ, ಎಲ್ಲೂ ಮೂಳೆ ಕಾಣದ
ಸಪೂರ ಹೆಣ್ಣುಗಳ ಬರಿಮೈಯಲ್ಲಿ
ಮಾನಮುಚ್ಚಲು ಹೊಕ್ಕಳ ಕೆಳಗೊಂದು ತುಂಡುವಸ್ತ್ರ
ಉಕ್ಕಿಬಂದ ನವೋಲ್ಲಾಸದಲ್ಲಿ
ನಾಯಕಿಯೊಂದಿಗೆ ಹಾಡಿನ ಲಯ ಹಿಡಿದ
ಬಾಗು ಬಳುಕು

ಸುಖ ಸ್ಪರ್ಶದ ಆಮೋದ ನೋಡುಗರಲ್ಲಿ
ಬೆಂಗಳೂರಿನ ನೆಪೋಲಿಯ ಮಾದಕ ಕ್ಯಾಬರೆಯ ನೆನಪು.
ಬಟ್ಟೆ ಬಿಚ್ಚುತ್ತ ಹೋಗುವ ಹೆಣ್ಣಿನ ತುಂಬಿದ
ಮಾಂಸಖಂಡಗಳಲ್ಲಿ ನೋಟವಿಟ್ಟ
ಗಂಡಿನ ಧಮನಿ ಧಮನಿಗಳಲ್ಲಿ ಭರ‌್ರನೆಯ ರಕ್ತಸಂಚಾರ
ಸ್ಖಲಿತ ಚಿತ್ತ.

ಇಲ್ಲಿ, ರಂಗಮಂಚದ ಮೇಲಿನ ಬತ್ತಲೆ ಹೆಣ್ಣುಗಳ
ನರ್ತನದಲ್ಲಿ ಹಿಗ್ಗು, ಸುಖೋನ್ಮಾದ
ಶಾಂಪೇನಿನ ಗುಟುಕಿನಲ್ಲಿ
ಬದುಕಿನ ಲೀಲೆ: ಅಡೈಸಲಾಗದ ಮಾಯೆ
`ಬತ್ತಲಾಗದೆ ಬಯಲು ಸಿಗದಣ್ಣ~
ಹೆಣ್ಣುಗಳ ರಾಸಲೀಲೆಯಲ್ಲಿ

ಮಾತಿನಲ್ಲಿ ಹೇಳಲಾಗದ ಅತೀತ ಸುಖ
ಯೋಗಿಯ ಅಸ್ಖಲಿತ ಚಿತ್ತಸ್ಥಿತಿ,
`ಬಯಲು ಆಲಯದೊಳಗೊ
ಆಲಯದೊಳಗೆ ಬಯಲೊ~
ಬಿಡಿಸಲಾಗದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT