ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಕ್ರೋಶ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಸ ವಿಲೇವಾರಿ ಘಟಕ ಸ್ಥಾಪಿಸುವುದನ್ನು ವಿರೋಧಿಸಿ ನೂರಾರು ಜನರು ರಸ್ತೆ ಅಗೆದು, ಘಟಕ ಸ್ಥಾಪನೆಗೆ ನಿಗದಿ ಪಡಿಸಿರುವ ಪ್ರದೇಶದಲ್ಲಿನ ತಂತಿ ಬೇಲಿಯ ಕಲ್ಲು ಕಂಬಗಳನ್ನು ಕೆಡವಿ, ಸಿಮೆಂಟ್ ಇಟ್ಟಿಗೆಗಳನ್ನು ನಾಶಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಸ ಘಟಕ ನಿರ್ಮಾಣಕ್ಕೆಂದು ರಾತ್ರೋರಾತ್ರಿ ನಿರ್ಮಿಸಿದ್ದ ಡಾಂಬರು ರಸ್ತೆಯನ್ನು ಪಿಕಾಸಿಯಿಂದ ಅಗೆಯುವ ಮೂಲಕ ಶಾಸಕರು ಉಗ್ರ ರೀತಿಯ ಹೋರಾಟಕ್ಕೆ ಚಾಲನೆ ನೀಡಿದರು.

ಅವರೊಂದಿಗೆ ರಮೇಶ್‌ಗೌಡ, ಕಾಂಗ್ರೆಸ್ ಮುಖಂಡ ನಟರಾಜ್, ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲ್, ತಾ.ಪಂ ಮಾಜಿ ಅಧ್ಯಕ್ಷ ಜಯಚಂದ್ರ, ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು, ಗ್ರಾಮಗಳ ಮಹಿಳೆಯರು ಪಾಲ್ಗೊಂಡು ಪಿಕಾಸಿ ಹಿಡಿದು ರಸ್ತೆಯ ಅಗೆದು ಧ್ವಂಸಗೊಳಿಸಿದರು. ಮುಂದಿನ ದಿನಗಳಲ್ಲಿ ಜೆಸಿಬಿ ಯಂತ್ರದಿಂದ ರಸ್ತೆಯನ್ನು ಸಂಪೂರ್ಣವಾಗಿ ಕಿತ್ತು ಹಾಕುವುದಾಗಿ ಶಾಸಕರು ತಿಳಿಸಿದರು.

ಜಿಲ್ಲಾಡಳಿತದ ಪರವಾಗಿ ಸ್ಥಳಕ್ಕೆ ಬಂದ ತಹಸೀಲ್ದಾರ್ ಡಾ. ರವಿ ತಿರ್ಲಾಪುರ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರ ಪರಿಸ್ಥಿತಿಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ರವಾನಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು. 

ಮೂಖ ಪ್ರೇಕ್ಷಕರಾದ ಪೊಲೀಸರು:
ರಸ್ತೆ ಅಗೆಯುವುದಾಗಿ ಮೊದಲೇ ಘೋಷಿಸಿದ್ದರಿಂದ ಕೊಡಿಯಾಲ ಕರೇನಹಳ್ಳಿ ಬಳಿ ಭಾನುವಾರ ಬೆಳಿಗ್ಗೆಯೇ ಒಂದು ಮೀಸಲು ತುಕಡಿ ಜಮಾಯಿಸಿತ್ತು. 45-50 ಸಂಖ್ಯೆಯಲ್ಲಿ ಇದ್ದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸಜ್ಜಾಗಿದ್ದರು.

ಆದರೆ ಹತ್ತಾರು ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ತಂಡೋಪತಂಡವಾಗಿ ಜನತೆ ಪ್ರತಿಭಟನೆಗೆ ಆಗಮಿಸಿದ್ದರಿಂದ ಪೊಲೀಸರು ಮೂಖ ಪ್ರೇಕ್ಷಕರಾದರು. ಸ್ವತಃ ಶಾಸಕರೇ ಪ್ರತಿಭಟನೆಯ ನೇತೃತ್ವ ವಹಿಸಿದ್ದರಿಂದ ಪೊಲೀಸರು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದರು.

ಎಲ್ಲವನ್ನೂ ಧ್ವಂಸಗೊಳಿಸಿದ ಗ್ರಾಮಸ್ಥರು
ಗ್ರಾಮಸ್ಥರ ಆಕ್ರೋಶ ರಸ್ತೆ ಅಗೆಯುವುದಕ್ಕಷ್ಟೇ ಸೀಮಿತವಾಗಲಿಲ್ಲ. ಕಸ ಘಟಕ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ನಿರ್ಮಿಸಿರುವ ತಂತಿ ಬೇಲಿಯನ್ನು ಕಿತ್ತು ಹಾಕಿದರು. ಕಲ್ಲಿನ ಕಂಬಗಳನ್ನು ನೆಲಕ್ಕುರುಳಿಸಿದರು. ಅಲ್ಲಿದ್ದ ಸಿಮೆಂಟ್ ಇಟ್ಟಿಗೆಗಳನ್ನು ಧ್ವಂಸ ಮಾಡಿದರು.

ಈ ವೇಳೆ ಮಾತನಾಡಿದ ಶಾಸಕ ಬಾಲಕೃಷ್ಣ ಅವರು, `ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ನೂರಾರು ಎಕರೆ ಜಾಗ ಇರುವಾಗ ಕಸ ಹಾಕಲು ರಾಮನಗರ ಜಿಲ್ಲೆಯನ್ನು ಏಕೆ ಆಯ್ಕೆ ಮಾಡಿಕೊಂಡಿರಿ. ಇಲ್ಲಿನ ಜನ ಪ್ರತಿನಿಧಿಗಳನ್ನು, ಪಂಚಾಯಿತಿ, ಜನತೆ ಮತ್ತು ಸಂಘ ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ ಕಸ ಸುರಿಯಲು ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೂ ಹೇಗೆ' ಎಂದು ಪ್ರಶ್ನಿಸಿದರು.

`ಈ ಜನವಿರೋಧಿ ನೀತಿ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದಾಗಿ' ಅವರು ತಿಳಿಸಿದರು.

`ಬೆಂಗಳೂರಿಗರ ಕೊಳಚೆ ನೀರಿನಿಂದಾಗಿ ಇಲ್ಲಿ ಕೃಷಿ ಮಾಡಲಾಗದ ವಾತಾವರಣ ಇದೆ. ಜನತೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ವಿಪರೀತ ಸೊಳ್ಳೆಕಾಟ ಇದೆ. ಕುಡಿಯಲು ಶುದ್ಧ ನೀರು ಇಲ್ಲವಾಗಿದೆ. ಹೀಗಿರುವಾಗ ಇಲ್ಲಿನ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನೂ ಸರ್ಕಾರ ಕೈಗೊಂಡಿಲ್ಲ. ನಿರಂತರ ಜ್ಯೋತಿ ಯೋಜನೆಯನ್ನು ಇಲ್ಲಿ ಅನುಷ್ಠಾನಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಿಲ್ಲೆಯನ್ನು ಸರ್ಕಾರ ಕಡೆಗಣಿಸಿದೆ. ಉಪಯುಕ್ತ ಕೆಲಸಗಳನ್ನು ಮಾಡದೇ, ಇಲ್ಲಿ ಕಸ ತಂದು ಸುರಿಯಲು ಅನುಮತಿ ನೀಡಿರುವುದು ಎಷ್ಟು ಸರಿ. ಇದನ್ನು ಸಹಿಸಿಕೊಳ್ಳುವುದಾದರೂ ಹೇಗೆ' ಎಂದು ಕಿಡಿಕಾರಿದರು. 

`ಕಸ ತರುವ ಲಾರಿಗೆ ಬೆಂಕಿ ಹಚ್ಚುತ್ತೇವೆ'
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, `ಕಸ ಸುರಿಯಲು ಗುರುತಿಸಿರುವ ಜಾಗದಲ್ಲಿ ಕೆರೆ, ರಾಜಕಾಲುವೆ, ಗೋಮಾಳ ಜಮೀನು ಇದ್ದು, ಅದನ್ನು ಒತ್ತುವರಿ ಮಾಡಲಾಗಿದೆ. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

`ನಕಾಶೆ ಇಲ್ಲದಿದ್ದರೆ ರಸ್ತೆ ಹೇಗೆ ಬಂತು ?'
ಜೆಡಿಎಸ್ ಮುಖಂಡ ಬ್ಯಾಟಪ್ಪ, ಬಡಾವಣೆ ನಿರ್ಮಿಸಲು 100 ಎಕರೆ ಜಾಗ ಹುಡುಕುತ್ತಿದ್ದೇವೆ ಎಂದು ಬಂದ ದಲ್ಲಾಳಿಗಳು ಕಸ ಘಟಕ ನಿರ್ಮಿಸಲು 40.9 ಎಕರೆ ಜಾಗ ಖರೀದಿಸಿದ್ದಾರೆ. ಆರಂಭದಲ್ಲಿ ವಿಷಯ ಗೊತ್ತಿಲ್ಲದೆ ಅವರಿಗೆ ನೆರವು ನೀಡಿದೆವು. ಆದರೆ ಅವರ ಕುತಂತ್ರ ಈಗ ಅರ್ಥವಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಕಸ ಘಟಕ ನಿರ್ಮಾಣ ಬಿಡುವುದಿಲ್ಲ. ಇದಕ್ಕಾಗಿ ಪ್ರಾಣ ಕೊಡಲು ಸಿದ್ಧವಿರುವುದಾಗಿ ಹೇಳಿದರು.

ತಾ.ಪಂ. ಮಾಜಿ ಅಧ್ಯಕ್ಷ ಜಯಚಂದ್ರ, `ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕೊಡಿಯಾಲ ಕರೇನಹಳ್ಳಿ ಸೇರಿ ಸುತ್ತಲಿನ ಗ್ರಾಮಸ್ಥರು ಅಲ್ಲಿಗೆ ತೆರಳಿ ಪ್ರತಿಭಟಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ನಿವೃತ್ತ ಡಿವೈಎಸ್‌ಪಿ ಗೋವಿಂದಪ್ಪ, ಮುಖಂಡ ಜಿ.ರಾಮಣ್ಣ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜೆ. ಮುದ್ದುರಾಜ್ ಯಾದವ್, ಸದಸ್ಯ ಎಚ್.ಎಲ್.ಚಂದ್ರು, ಟಿಎಪಿಸಿ ಅಧ್ಯಕ್ಷ ಪುಟ್ಟಮಾರೇಗೌಡ, ಜಿ.ಪಂ ಮಾಜಿ ಸದಸ್ಯ ಪುಟ್ಟಯ್ಯ, ಬೈರಮಂಗಲ ಗ್ರಾ.ಪಂ ಅಧ್ಯಕ್ಷ ವೆಂಕಟಪ್ಪ ಇತರರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT