ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿಗೆ ಕಾರ್ಮಿಕರ ಕೊರತೆ

Last Updated 4 ಡಿಸೆಂಬರ್ 2012, 19:56 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ದಿನಗಳಿಂದ ನಗರದ ಕಸ ವಿಲೇವಾರಿ ಮಾಡಲು ಸೋತಿರುವ ಭಾರತ್ ವಿಕಾಸ್ ಗ್ರೂಪ್ ಇಂಡಿಯಾ ಲಿಮಿಟೆಡ್ ಕಂಪೆನಿಯು ಸಲಕರಣೆಗಳ ಕಳವು ಮತ್ತು ಪೌರಕಾರ್ಮಿಕರ ಕೊರತೆಯು ಕಸ ವಿಲೇವಾರಿ ಸ್ಥಗಿತಗೊಳ್ಳಲು ಕಾರಣ ಎಂದು ಹೇಳಿದೆ.

`ಒಟ್ಟು 888 ಜನ ಪೌರಕಾರ್ಮಿಕರು ಕೆಲಸಕ್ಕೆ ಅಗತ್ಯವಾಗಿದ್ದಾರೆ. ಆದರೆ, 140 ಜನ  ಮಾತ್ರ ಸೋಮವಾರ ಕೆಲಸಕ್ಕೆ ಹಾಜರಾಗಿದ್ದಾರೆ. ಅಲ್ಲದೇ ಕಸ ವಿಲೇವಾರಿಗೆ ಅಗತ್ಯವಿರುವ ವಾಹನಗಳ ಕೊರತೆಯಿದೆ. ಹೀಗಾಗಿ ಕಸ ವಿಲೇವಾರಿಗೆ ತೊಡಕಾಗುತ್ತಿದೆ' ಎಂದು ಕಂಪೆನಿಯ ಉಪಾಧ್ಯಕ್ಷ ಪ್ರಸನ್ನ ಶಾಸ್ತ್ರಿ ತಿಳಿಸಿದರು.

ಅಶೋಕ ನೇತೃತ್ವದಲ್ಲಿ ಸಭೆ: ಕಸದ ಸಮಸ್ಯೆ ನಿವಾರಣೆಯ ಬಗ್ಗೆ ಉಪಮುಖ್ಯಮಂತ್ರಿ ಆರ್.ಅಶೋಕ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಿತು. ವಿಲೇವಾರಿಗೆ ಹೊಸ ಟೆಂಡರ್‌ಗಳ ಬಗ್ಗೆ ಮತ್ತು ಕಸವನ್ನು ಸಮರ್ಪಕವಾಗಿ ಸಂಸ್ಕರಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಉಪ ಮೇಯರ್ ಎಲ್.ಶ್ರೀನಿವಾಸ್ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT