ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ...ಕಸಿವಿಸಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೊನ್ನೆ ಹಾದಿಬದಿಯಲ್ಲಿ ಹೋಗುತ್ತಾ ಒಬ್ಬರು ಜೇಬಿನಲ್ಲಿದ್ದ ಸಿನಿಮಾ ಟಿಕೇಟುಗಳನ್ನು ಉಂಡೆಕಟ್ಟಿ ಪಕ್ಕದ ಚರಂಡಿಗೆ ಎಸೆದರು. ಹತ್ತಿರದ ಅಂಗಡಿಯ ಹುಡುಗ ಓಡೋಡಿ ಬಂದು, `ರೀ ಯಜಮಾನರೆ ಅದನ್ನು ಎತ್ತಿಕೊಳ್ಳಿ. ನಮ್ಮ ಕಸವನ್ನೇ ಯಾರೂ ತಗೊಂಡ್ ಹೋಗಿಲ್ಲ. ಇನ್ನು ನಿಮ್ಮ ಕಸವನ್ನೂ ನಾವೇ ಹೊರಬೇಕೆ?~ ಎಂದು ತರಾಟೆಗೆ ತೆಗೆದುಕೊಂಡ. ನಗರದ ಮನೆಮನೆಯಲ್ಲೆಗ ಕಸದ ಬುಟ್ಟಿಗಳ ಸಂಖ್ಯೆ ಏರಿದೆ. ರಸ್ತೆ ಬದಿಗಳಲ್ಲಿ ಕರಗದ ಕಸದ ರಾಶಿ. `ಕಸದಿಂದ ರಸ~ ಎನ್ನುವ ನಾಣ್ಣುಡಿಯನ್ನು ಒಪ್ಪಿಕೊಳ್ಳುವ ಪರಿಸ್ಥಿತಿ ಇಲ್ಲಿಲ್ಲ. ಮನೆಯಲ್ಲಿ ಭರ್ತಿಯಾದ ಕಸದ ಪ್ಲಾಸ್ಟಿಕ್ ಚೀಲವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಕಸದ ಗುಡ್ಡೆ ಇರುವವರೆಗೆ ಹೋಗಿ, ಅಲ್ಲಿ ಸುರಿದು ಬರುವ ನಾಗರಿಕರೂ ಇಲ್ಲಿದ್ದಾರೆ. ಕಸ ವಿಲೇವಾರಿಯ ಕಷ್ಟಗಳ ಈ ಕೆಲವು ಚಿತ್ರಗಳಲ್ಲಿ ದೊಡ್ಡ ಕಥಾನಕವೇ ಅಡಗಿದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT