ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಗುಂಡಿಯಾದ ಉದ್ಯಾನದ ಜಾಗ

Last Updated 25 ಫೆಬ್ರುವರಿ 2012, 20:00 IST
ಅಕ್ಷರ ಗಾತ್ರ

ಮಹದೇವಪುರ: ಬೆಳ್ಳಂದೂರು   ವಾರ್ಡ್ ವ್ಯಾಪ್ತಿಯ ದೇವರಬಿಸನಹಳ್ಳಿ ಗ್ರಾಮದಲ್ಲಿ ಕಳೆದ ವರ್ಷ ಉದ್ಯಾನವನಕ್ಕೆಂದು ಮೀಸಲಿಟ್ಟದ್ದ ಸರ್ಕಾರಿ ಜಮೀನಿನಲ್ಲಿ ಸಾಕಷ್ಟು ತ್ಯಾಜ್ಯ ತುಂಬಿಕೊಂಡಿದ್ದು, ಕಸದ ಗುಂಡಿಯಾಗಿ ಮಾರ್ಪಟ್ಟಿದೆ.

ಕಳೆದ ವರ್ಷವಷ್ಟೇ ಈ ಉದ್ಯಾನವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿತ್ತು. ಮೊದಲ ಹಂತವಾಗಿ ಆ ಜಾಗದ ಸುತ್ತಮುತ್ತ ಆವರಣ ಗೋಡೆಯ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ಹಣ ಬಿಡುಗಡೆ ಆಗಿತ್ತು. ಆದರೆ ಆವರಣ ಗೋಡೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಅಲ್ಲದೆ ಉದ್ಯಾನವನ ಕಾಮಗಾರಿ ತೀವ್ರ ಕಳಪೆ ಮಟ್ಟದ್ದಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ನಿರ್ಮಿಸಿರುವ ತಡೆಗೋಡೆ ಕುಸಿದು ಬಿದ್ದಿದೆ. ಈ ಕಾಮಗಾರಿಗಾಗಿ ಬಿಡುಗಡೆಯಾದ ಹಣ ಏನಾಯಿತು ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ವರ್ಷ ಕಳೆಯುತ್ತ ಬಂದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಉದ್ಯಾನವನದ ತಡೆಗೋಡೆ ನಿರ್ಮಾಣಗೊಂಡಿಲ್ಲ. ಉದ್ಯಾನವನ ನಿರ್ಮಾಣಕ್ಕೆ ಮೀಸಲಿಟ್ಟ ಸ್ಥಳ ಸರ್ಕಾರಿ ಗೋಮಾಳವಾಗಿದ್ದು, ಒಟ್ಟು 30 ಗುಂಟೆಗೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಈ ಜಮೀನು ದೇವರಬಿಸನಹಳ್ಳಿ ಗ್ರಾಮದ ಸರ್ವೆ ನಂಬರ್ 15 ಮತ್ತು 16ರಲ್ಲಿದೆ.

`ಈ ಸ್ಥಳವನ್ನು ಕೆಲ ಬಿಜೆಪಿ ಮುಖಂಡರು ಕಬಳಿಸಲು ಮುಂದಾಗಿದ್ದು, ಸ್ಥಳಕ್ಕೆ ರಾತ್ರೋರಾತ್ರಿ ಕಲ್ಲು, ಮಣ್ಣು ತುಂಬುವ ಕಾರ್ಯ ನಡೆಯುತ್ತಿದೆ.  ಮಹಾನಗರ ಪಾಲಿಕೆಗೆ ಈ ಬಗ್ಗೆ ಮಾಹಿತಿ ಇದ್ದರೂ ಅದು ಕಣ್ಣುಮುಚ್ಚಿ ಕುಳಿತಿದೆ~ ಎಂದು ಸ್ಥಳೀಯ ನಿವಾಸಿ ಹಾಗೂ ಡಿಸಿಸಿ ಸದಸ್ಯ ಎಚ್.ಪಿಳ್ಳಾರೆಡ್ಡಿ ಆರೋಪಿಸಿದ್ದಾರೆ.

ಆದಷ್ಟು ಬೇಗನೆ ಮಹಾನಗರ ಪಾಲಿಕೆ ಈ ಸ್ಥಳದಲ್ಲಿ ಕಸ ತೆರವುಗೊಳಿಸಿ, ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಆರಂಭಿಸಬೇಕು ಎಂದು ಪಿಳ್ಳಾರೆಡ್ಡಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT