ಅಹಮದಾಬಾದ್, (ಪಿಟಿಐ): ಸಾಕು ಪ್ರಾಣಿಗಳ ಮೈ ಮೇಲಿನ ಕೀಟ ಉಣ್ಣಿಯ ಮೂಲದಿಂದ ಹರಡುವ ಪ್ರಾಣಾಂತಿಕ ವೈರಸ್ ಜ್ವರ (ಕ್ರಿಮಿನ್- ಕಾಂಗೊ ಹೆಮೊರ್ಹೆಜಿಕ್ ಫಿವರ್ - ಸಿಸಿಎಚ್ ಎಫ್) ಗುಜರಾತಿನಲ್ಲಿ ಕಾಣಿಸಿಕೊಂಡಿದ್ದು, ವೈದ್ಯ, ದಾದಿಯೂ ಸೇರಿದಂತೆ ಮೂವರು ಈ ಜ್ವರಕ್ಕೆ ಬಲಿಯಾಗಿದ್ದಾರೆ. ಈ ಜ್ವರವನ್ನು ಸಾಮಾನ್ಯವಾಗಿ ಕಾಂಗೊ ಜ್ವರ ಎಂದು ಗುರುತಿಸಲಾಗುತ್ತಿದೆ.