ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿರುಕು : ಬಹಿರಂಗವಾದ ಶೀತಲ ಸಮರ

Last Updated 7 ಜನವರಿ 2012, 10:20 IST
ಅಕ್ಷರ ಗಾತ್ರ

ಗುರುಮಠಕಲ್: ರಾಜ್ಯ ರಾಜಕೀಯದಲ್ಲೇ ಗುರುಮಠಕಲ್ ಮತಕ್ಷೇತ್ರದ ಕಾಂಗ್ರೆಸ್ ಪಕ್ಷ ಪ್ರಸಿದ್ಧಿ ಪಡೆದಿದ್ದು. ಸುಮಾರು 45 ವರ್ಷಗಳ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಲ್ಲಿ ಬಿರುಕು ಕಾಣಿಸಿದೆ. ಪಕ್ಷದ ನಾಯಕರಲ್ಲಿನ ಶೀತಲ ಸಮರ ಗುರುವಾರ ನಡೆದ ಸ್ವಾಭಿಮಾನ ಸಭೆಯಲ್ಲಿ ಬಯಲಿಗೆ ಬಂದಿದೆ.

ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾದ ಸ್ವಾಭಿಮಾನ ಸಮಾವೇಶದಲ್ಲಿ ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ ಮಾತನಾಡುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಕೂತಿದ್ದ ಗುಂಪೊಂದು ಅವರ ಭಾಷಣವನ್ನು ವಿರೋಧಿಸಿತು. ಸ್ಥಳಿಯ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕು ಎಂದು ಕೂಗಿದರು. ಇದರಿಂದಾಗಿ ಕೆಲಕಾಲ ಕಾರ್ಯಕ್ರಮದಲ್ಲಿ ಗೊಂದಲದ ವಾತವರಣ ನಿರ್ಮಾಣವಾಯಿತು.

ಎಐಸಿಸಿ ಕಾರ್ಯದರ್ಶಿ ವಿ.ಹಣಮಂತರಾವ್ ಮಾತನಾಡುವುದರ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಾಧ್ಯವಾಯಿತು. ಗದ್ದಲಕ್ಕೆ ಕಾರಣವಾದ ಗುಂಪಿನಿಂದ ಹೊರಬಂದ ಕೂಗಿಗೆ ಉತ್ತರವಾಗಿ ಇದು ಕಾಂಗ್ರೆಸ್ ಪಕ್ಷದ ಸಮಾವೇಶ ಹೊರತು ಇಲ್ಲಿ ನಾನು ಟಿಕೆಟ್ ನೀಡಲು ಬಂದಿಲ್ಲಾ ಅದನ್ನು ಕೇಳುವ ಸೂಕ್ತ ಸಮಯ ಇದ್ಲ್ಲಲ, ಕಾರ್ಯಕ್ರಮ ಕೇಳಲು ಇಷ್ಟವಿಲ್ಲದವರು ಹೋಗಬಹುದು ಎಂದು ಕಿಡಿಕಾರಿದರು. 

ನಂತರ ಮಾತನಾಡಿದ ಅವರು ರಾಜ್ಯದಲ್ಲಿನ ಬಿಜೆಪಿ ಭ್ರಷ್ಟ ಸರ್ಕಾರ ದೇಶದಲ್ಲಿಯೇ ಉದಾಹರಣೆಯಾಗಿ ತೋರಿಸುವಂತಹದ್ದಾಗಿದೆ. ಅಂದು ಜೈಲಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ಇಂದು ಬೇಲಿನಲ್ಲಿದ್ದರೆ, ಬೇಲಿನಲ್ಲಿ ಬಂದವರಿಗೆ ವಿಶ್ವಕಪ್ ಗೆದ್ದು ತಂದಷ್ಟು ಸ್ವಾಗತ. ಕಾಂಗ್ರೆಸ್ ನಾಯಕರು ರೈತರಿಗೆ ಭೂಮಿ ನೀಡಿದರೆ, ಬಿಜೆಪಿ ನಾಯಕರು ಭೂ ಹಗರಣ ಮಾಡಿ ಜೈಲು ಸೇರಿದ್ದಾರೆ. ರಾಜ್ಯದ ಭ್ರಷ್ಟ ಸರಕಾರ ಯಾವ ಕ್ಷಣದಲ್ಲಾದರೂ ಕುಸಿಯವಬಹುದು ಕಾಂಗ್ರೆಸ್ ಪಕ್ಷ ಅದಕ್ಕೆ ಸಿದ್ದರಾಗಬೇಕು ಪಕ್ಷದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೈಕಮಾಂಡ್ ಮೂಲಕ ಬಗೆ ಹರಿಸಿಕೊಂಡು ಚುನಾವಣೆಗೆ ಒಗ್ಗಟ್ಟಿನಿಂದ ಮುಂದಾಗಲು ಅವರು ಕರೆ ನೀಡಿದರು.

ಕೇಂದ್ರ ಸರಕಾದತ್ತ ಅನುದಾನಕ್ಕಾಗಿ ಕೈಯೊಡ್ಡುವ ರಾಜ್ಯ ಸರ್ಕಾರ ನೀಡಿದ ಅನುದಾನವನ್ನು ಉಪಯೋಗಿಸದೆ ಭ್ರಷ್ಟಚಾರ ನಡೆಸುತ್ತಲೇ ಇದೇ. ಕುಡಿಯುವ ನೀರಿಗಾಗಿ ನೀಡಲಾದ 84 ಕೋಟಿ ಕೇಂದ್ರ ಅನುದಾನದಲ್ಲಿ 3ಕೋಟಿ ರೂಪಾಯಿ ಬಳಸಿದೆ. 4600ಕೋಟಿ ರೂ. ಸಾಲಮನ್ನ ಮಾಡಿದೆ. ಕಾಂಗ್ರೆಸ್‌ಗೆ ಬೆಂಬಲಿಸಿ ಅಭಿವೃದ್ಧಿಗೆ ನಾಂದಿಹಾಡಿ ಎಂದು ಕೆಪಿಸಿಸಿ ಕಾರ್ಯದರ್ಶಿ ಶಫಿಉಲ್ಲಾ ಹೇಳಿದರು.

ನಂತರ ಮಾತನಾಡಿದ ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ್ ಮತಕ್ಷೇತ್ರದಲ್ಲಿ ಕರ್ನಾಟಕದ ಅಂಬೇಡ್ಕರ್ ಎಂದು ಗುರುತಿಸಿಕೊಂಡಿರುವ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡ್ದ್ದಿದೇನೆ, ರಾಜ್ಯದ ಬಿಜೆಪಿ ಸರಕಾರ ಭ್ರಷ್ಟತೆಗೆ ನಿದರ್ಶನವಾಗಿದೆ ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಮರಿಗೌಡ, ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೇಣಿಕುಮಾರ ದೋಖಾ, ಭೀಮರಾಯ ಕಂದಕೂರ, ಎಪಿಎಂಸಿ ಮಾಜಿ ಅಧ್ಯಕ್ಷ ಬಸ್ಸಣ್ಣ ದೇವರಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಕೆಪಿಸಿಸಿ ಸದಸ್ಯ ಬುಚ್ಚಣ್ಣ ಜೈಗ್ರಾಂ, ಯುವ ಕಾಂಗ್ರೆಸ್ ಅಧ್ಯಕ್ಷ ಚಾಂದಪಾಶಾ, ಪದವಿಧರ ಕ್ಷೇತ್ರದ ಅಭ್ಯರ್ಥಿ ಡಾ.ಶಿವಾನಂದ, ಮುಖಂಡರಾದ ಟಿ.ಗೋಪಾಲ, ಪ್ರಕಾಶ ನಿರೇಟಿ, ಮೈನೊದ್ದೀನ್  ಮುಂತಾದವರು ಉಪಸ್ಥಿತರಿದ್ದರು ಪಟ್ಟಣ ಪಂಚಾಯಿತಿ ಸದಸ್ಯ ಜಿ.ಕೆ.ಕೃಷ್ಣಾ ಸ್ವಾಗತಿಸಿದರು, ವೀರಪ್ಪ ಪ್ಯಾಟಿ ವಂದಿಸಿದರು, ಕನ್ನಯ್ಯ ಪಡಿಗೆ ಪ್ರಾರ್ಥನೆ ಗೀತೆ ಹಾಡಿದರು, ವಿಜಯಕುಮಾರ ನಿರೇಟಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT