ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ವಿರುದ್ಧ ಯಾತ್ರೆ ಕೈಬಿಟ್ಟ ಹಜಾರೆ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ವಿರುದ್ಧ ನಡೆಸಲು ಉದ್ದೇಶಿಸಿದ್ದ ಯಾತ್ರೆಯನ್ನು ಸದ್ಯಕ್ಕೆ ಕೈ ಬಿಡಲು ನಿರ್ಧರಿಸಿರುವ ಅಣ್ಣಾ ಹಜಾರೆ, ಸಂಸತ್‌ನ ಚಳಿಗಾಲದ ಅಧಿವೇಶನದವರೆಗೂ ಕಾಯ್ದು ನೋಡಲು ತೀರ್ಮಾನಿಸಿದ್ದಾರೆ.

`ಸದ್ಯ ಅಣ್ಣಾ ಈ ಕುರಿತು ಏನನ್ನೂ ಹೇಳುವುದಿಲ್ಲ. ಚಳಿಗಾಲದ ಅಧಿವೇಶನಕ್ಕಾಗಿ ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್ ಈ ಬಾರಿಯಾದರೂ ಲೋಕಪಾಲ್ ಮಸೂದೆಯನ್ನು ಜಾರಿ ಮಾಡುತ್ತದೋ ಇಲ್ಲವೋ ಕಾಯ್ದು ನೋಡೋಣ~ ಎಂದು ಅಣ್ಣಾ ತಂಡದ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.

`ತಂಡದ ಇತರ ಸದಸ್ಯರು ಇದೇ 17ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಸೂದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಈ ಅಧಿವೇಶನದಲ್ಲಿ ಮಸೂದೆ ಜಾರಿ ಮಾಡದಿದ್ದಲ್ಲಿ ಕಾಂಗ್ರೆಸ್‌ಗೆ ಮತ ಹಾಕದಂತೆ ಜನರಲ್ಲಿ ಮನವಿ ಮಾಡಲಾಗುವುದು~ ಎಂದು ಅವರು ಹೇಳಿದರು.

ಬಿಎಸ್‌ಪಿಯನ್ನು ಏಕೆ ವಿರೋಧಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಅದರ ಅಗತ್ಯವಿಲ್ಲ. ಮಾಯಾವತಿ ಅವರು ಮನಸ್ಸು ಮಾಡಿದರೂ ಮಸೂದೆ ಜಾರಿಯಾಗುವುದಿಲ್ಲ. ಅದೇ ಸೋನಿಯಾ ಗಾಂಧಿ ಅವರು ಮನಸ್ಸು ಮಾಡಿದರೆ ಎರಡು ನಿಮಿಷದಲ್ಲಿ ಅದು ಜಾರಿಯಾಗುತ್ತದೆ. ಹೀಗಾಗಿ ನಾವು ಸೋನಿಯಾ ಅವರನ್ನು ಹೆದರಿಸ ಬೇಕಾಗುತ್ತದೆ, ಮಾಯಾವತಿ ಅವರನ್ನಲ್ಲ~ ಎಂದು ತಮ್ಮ ವಾದ ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT