ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ–ವೆಂಕಯ್ಯ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ):  ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ­ಯಾಗಿ ಘೋಷಿಸಿರುವುದಕ್ಕೆ ದೇಶದಾ­ದ್ಯಂತ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಅಭಿವೃದ್ಧಿ ವಿಷಯವನ್ನೇ ಪ್ರಧಾನ­ವಾಗಿ ಇಟ್ಟುಕೊಂಡು ಮುಂಬ­ರುವ ಲೋಕಸಭಾ ಚುನಾವಣೆಯನ್ನು ಪಕ್ಷ ಎದುರಿಸಲಿದೆ ಎಂದು ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ತಿಳಿಸಿದರು.

ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ­­ಯಾಗಿ ಘೋಷಿಸಿ­ರುವು­ದರಿಂದ ಕಾಂಗ್ರೆಸ್‌ಗೆ ನಡುಕ ಹುಟ್ಟಿದೆ. ಆದ­ಕಾರಣ ಮುಖಂಡರು ಬೇಜವಾ­ಬ್ದಾರಿ ಮತ್ತು ಮೂಖರ್ತನದ ಹೇಳಿಕೆ­ಗಳನ್ನು ನೀಡುತ್ತಿದ್ದಾರೆ ಎಂದು ಸುದ್ದಿ­ಗಾರರಿಗೆ ತಿಳಿಸಿದರು. ನರೇಂದ್ರ ಮೋದಿ ಹಾಗೂ ಅವರ ಅಭಿವೃದ್ಧಿ ಮಾದರಿಯನ್ನು ಎದುರಿಸ­ಲಾಗದ ಕಾಂಗ್ರೆಸ್‌ ಮುಖಂಡರು, ಮೋದಿ ಅವರು ಜಯ­ಗಳಿಸಿದ ದಿನ ಪ್ರಜಾ­ಪ್ರಭುತ್ವ ಅಂತ್ಯ­ಗೊಳ್ಳಲಿದೆ, ಪ್ರಜಾ­ಪ್ರಭುತ್ವದ ಕೊಲೆ­ಯಾಗಿದೆ ಎಂಬ ಹತಾಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮುಖಂಡ ಎಲ್‌.ಕೆ.ಅಡ್ವಾಣಿ ಅವರ ನಿಲುವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನಾಯ್ಡು ಅವರು, ಅಡ್ವಾಣಿ ಅವರು ಪಕ್ಷದ ಹಿರಿಯ ನಾಯಕ. ಎಲ್ಲರನ್ನು ಪಕ್ಷಕ್ಕೆ ಕರೆ­ತಂದವರು. ಮೋದಿ ಅವರ ಆಯ್ಕೆ ವಿಚಾರಕ್ಕೆ ಅವರಿಗೆ ವಿರೋಧವಿಲ್ಲ. ಆದರೆ ಚುನಾವಣೆ ನಂತರ ಘೋಷಿಸ­ಬೇಕಿತ್ತು ಎಂಬ ಅಭಿಪ್ರಾಯವಿತ್ತು ಎಂದಷ್ಟೇ ಹೇಳಿದರು.

ಹಿಂದುತ್ವ ನಮಗೆ ಚುನಾವಣಾ ವಿಷಯವಲ್ಲ. ಅಭಿವೃದ್ಧಿಯೇ ಚುನಾ­ವಣೆಯ ಪ್ರಮುಖ ಕಾರ್ಯ­ಸೂಚಿ ಎಂದು ಈಗಾಗಲೇ ಸ್ಪಷ್ಟ­ಪಡಿಸಿದ್ದೇವೆ. ದೇಶದ ಜನತೆಯ ಹಿತ­ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳ­ಲಾಗಿದ್ದು, ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವ ಕಳೆದುಕೊಳ್ಳಲಿರುವ ಭೀತಿ ಎದು­ರಿಸುತ್ತಿದೆ. ಸಮೀಕ್ಷೆಯಿಂದಲೂ ಇದು ದೃಢಪಟ್ಟಿದೆ. ಒಮ್ಮೆ ನಾಲ್ಕು ರಾಜ್ಯ­ಗಳಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವ­ಕಳೆದುಕೊಂಡಲ್ಲಿ ಗೆಲುವು ಸಾಧಿಸು­ವುದು ಕಷ್ಟವಿದೆ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT