ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾಂಟ್ರ್ಯಾಕ್ಟ್ ರಾಜಕೀಯ'

Last Updated 26 ಏಪ್ರಿಲ್ 2013, 6:09 IST
ಅಕ್ಷರ ಗಾತ್ರ

ಸಂಡೂರು: ಹತ್ತು ವರ್ಷಗಳಲ್ಲಿ ಸಂಡೂರು ತಾಲ್ಲೂಕಿನಲ್ಲಿ ಕಾಂಟ್ರ್ಯಾಕ್ಟ್ ರಾಜಕೀಯ ನಡೆದಿದೆಯೇ ಹೊರತು, ಜನಪರ ಕೆಲಸ ನಡೆದಿಲ್ಲ. ತಾಲ್ಲೂಕಿನ ಜನರ ಸಂಕಷ್ಟಗಳನ್ನು ಕೇಳುವವರಿಲ್ಲದೆ, ಜನತೆ ಒಂದು ರೀತಿಯಲ್ಲಿ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿದ್ದಾರೆ ಎಂದು ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಶಿರಾಜ್ ಶೇಖ್  ಆರೋಪಿಸಿದರು.

ಬಂಡ್ರಿ ಗ್ರಾಮದಲ್ಲಿ ಸಂಡೂರು ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಚಿನ್ನಬಸಪ್ಪನವರ ಪರವಾಗಿ ರೋಡ್ ಶೋ ನಡೆಸಿ, ಮತ ಯಾಚನೆ ಮಾಡಿ, ಅವರು ಮಾತನಾಡಿದರು.

ಜನತೆ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ. ಮತದಾರರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಚಿನ್ನಬಸಪ್ಪನವರಿಗೆ ಮತ ನೀಡಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನಂತರ ಶಿರಾಜ್ ಶೇಖ್ ಅವರು ತಾಲ್ಲೂಕಿನ ಸೋವೇನಹಳ್ಳಿ, ಎಚ್.ಕೆ. ಹಳ್ಳಿ, ಚೋರನೂರ್, ಬೊಮ್ಮಾಘಟ್ಟ ಮುಂತಾದೆಡೆಗಳಲ್ಲಿ ಅಭ್ಯರ್ಥಿ ಜಿ.ಚಿನ್ನ ಬಸಪ್ಪನವರ ಪರವಾಗಿ ಪ್ರಚಾರ  ನಡೆಸಿದರು.  ಅಭ್ಯರ್ಥಿ ಜಿ.ಚಿನ್ನಬಸಪ್ಪ, ಮುಖಂಡರಾದ ಓ.ಈ.ಚಂದ್ರಪ್ಪ, ರಾಮಣ್ಣ, ಕಾಸೀಂಪೀರ, ಯಾದಗಾರ್, ಮುನಾಫ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT