ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಕತಿ ಬಳಿ 60 ಲಕ್ಷ ಮೌಲ್ಯದ ಬೆಳ್ಳಿ, 17 ಲಕ್ಷ ನಗದು ವಶ

Last Updated 23 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ಬೆಳಗಾವಿ:  ತಾಲ್ಲೂಕಿನ ಕಾಕತಿ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 60 ಲಕ್ಷ ರೂಪಾಯಿ ಬೆಲೆ ಬಾಳುವ ಅಕ್ರಮ ಬೆಳ್ಳಿ ಹಾಗೂ 17 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಮಹಾರಾಷ್ಟ್ರದ ಹುಪರಿಯಿಂದ ತಮಿಳುನಾಡಿಗೆ ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 151 ಕೆಜಿ ಬೆಳ್ಳಿಯ ಗಟ್ಟಿ, ಬಿಸ್ಕಿಟ್ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ತಂಡಗಳನ್ನು ರಚಿಸಿ ತಪಾಸಣೆ ನಡೆಸಲಾಯಿತು. ಮಹಾರಾಷ್ಟ್ರ ಕೊಲ್ಲಾಪುರ ಕಡೆಯಿಂದ ಆಗಮಿಸಿದ ಬೊಲೆರೋ ವಾಹನದಲ್ಲಿದ್ದವರನ್ನು ಪ್ರಶ್ನಿಸಿದಾಗ ಸರಿಯಾಗಿ ಉತ್ತರಿಸಲಿಲ್ಲ. ಅನುಮಾನಗೊಂಡು ವಾಹನ ತಪಾಸಣೆ ನಡೆಸಿದಾಗ ವಾಹನದ ಹಿಂದಿದ್ದ ವಿಶೇಷ ಲಾಕರ್‌ನಲ್ಲಿ ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಯಿತು ಎಂದು ಅವರು ಹೇಳಿದರು.

ವಾಹನದಲ್ಲಿದ್ದ ತಮಿಳುನಾಡಿನ ಸೇಲಂನ ಎಂ. ಅಯುಬಖಾನ್, ಜಿ. ಸುರೇಶ, ಎಸ್.ಜಹೀರ್‌ಅಹ್ಮದ್, ಪಿ.ಜಿ. ಶ್ರೀನಿವಾಸನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
‘ಬಂಧಿತ ಆರೋಪಿಗಳು ಇನ್ನಿಬ್ಬರ ಹೆಸರನ್ನು ಬಹಿರಂಗಗೊಳಿಸಿದ್ದು, ಅವರ ಪತ್ತೆಗಾಗಿ ಜಾಲ ಬೀಸಲಾಗಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಇದು ಕದ್ದೆ ಮಾಲೇ ಅಥವಾ ಖರೀದಿಸಿ ಸಾಗಿಸಲಾಗುತ್ತಿತ್ತೇ ಎಂಬುದು ಗೊತ್ತಾಗಬೇಕಿದೆ’ ಎಂದು ಅವರು ಹೇಳಿದರು.

ಈ ಕಾರ್ಯಾಚರಣೆಯಲ್ಲಿ ಸಿಪಿಐ ವಿಶ್ವನಾಥ ಕುಲಕರ್ಣಿ, ಪಿಎಸ್‌ಐ ಸುನೀಲಕುಮಾರ, ಧೀರಜ್ ಶಿಂಧೆ, ಪ್ರಹ್ಲಾದ, ಕೊಪ್ಪದ, ಅಂಚಿ, ಚಚಡಿ, ಎಸ್.ಎಂ. ಚಿಕ್ಕನವನವರ, ಮೈಲಾಕೆ ಭಾಗವಹಿಸಿದ್ದರು. ಸದರಿ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT