ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಕೋಲತ್ ಜಲವೈಭವ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಾಕೋಲತ್ ಎಂದು ವಿಚಿತ್ರವಾಗಿ ಧ್ವನಿಸುವ ಈ ಜಲಪಾತದ ಸೊಗಸು ಅನುಪಮವಾದದ್ದು. ಪೌರಾಣಿಕ ಹಿನ್ನೆಲೆಯೂ ಈ ಜಲಪಾತಕ್ಕಿದೆ. ಸಮುದ್ರ ಮಟ್ಟದಿಂದ 160 ಅಡಿ ಎತ್ತರದಲ್ಲಿ ಇರುವ ಈ ಸುಂದರ ಜಲಪಾತ ಬಿಹಾರದ ನಾವಡಾ ಜಿಲ್ಲೆಯಲ್ಲಿದೆ. 150ರಿಂದ 160 ಅಡಿ ಎತ್ತರದಿಂದ ಬೀಳುವ ಈ ನೀರಧಾರೆಯ ಅಂದವನ್ನು ಸುತ್ತಲೂ ಹರಡಿರುವ ಹಸಿರು ಗಿರಿಶೃಂಗಗಳು ಹೆಚ್ಚಿಸಿವೆ.

ನಾವಡಾದಿಂದ 33 ಕಿ.ಮೀ ದೂರ ಇರುವ ಮತ್ತು ಗೋವಿಂದಪುರದ ಬಳಿ ಬರುವ ಕಾಕೋಲತ್ ಬೆಟ್ಟ ಸಾಲಿನಲ್ಲಿ ಈ ಜಲಧಾರೆ ಕಾಣಸಿಗುತ್ತದೆ. ಜಲಪಾತದ ಕೆಳಗೆ ದೊಡ್ಡ ನೈಸರ್ಗಿಕ ಜಲಾಶಯ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ಇದು ಪೌರಾಣಿಕವಾಗಿ ಬಹಳ ಮಹತ್ವ ಪಡೆದ ಸ್ಥಳ. ಈ ಸ್ಥಳಪುರಾಣ ಯುಗಯುಗಳಿಗೆ ಹರಡಿಕೊಂಡಿದೆ.

ತೇತ್ರಾಯುಗದಲ್ಲಿ ಶಾಪಗ್ರಸ್ತನಾದ ರಾಜನೊಬ್ಬ ಸರ್ಪದ ರೂಪದಲ್ಲಿ ಕಾಕೋಲತ್‌ನಲ್ಲಿ ನೆಲೆಸಿದ್ದನಂತೆ. ದ್ವಾಪರಯುಗದಲ್ಲಿನ ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಎದುರಾದ ಆ ರಾಜನಿಗೆ ಈ ಕಾಕೋಲತ್ ಜಲಪಾತದಲ್ಲಿ ಸ್ನಾನ ಮಾಡಲು ಹೇಳಿದರು. ನೀರಿನಲ್ಲಿ ಮುಳುಗೆದ್ದ ತಕ್ಷಣ ಅವನ ಶಾಪವಿಮೋಚನೆಯಾಯಿತು. ಇದು ಪುರಾಣದ ಕಥೆ. ಈಗಲೂ ಈ ನೀರಿನಲ್ಲಿ ಮುಳುಗೆದ್ದರೆ ಮುಂದೆಂದೂ ಸರ್ಪದ ಜನ್ಮ ಬರುವುದಿಲ್ಲ ಎಂಬ ನಂಬಿಕೆ ಇದೆ.

ಅಂದಹಾಗೆ, ಬೈಸಾಕಿ ಮತ್ತು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ.
    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT