ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದ ಉಳಿಸುವ ಇ-ಬಿಲ್

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಈ ಭೂಮಿಯ ಉಳಿವಿಗೆ ಪರಿಸರ ಸಂರಕ್ಷಣೆ ಅತ್ಯಗತ್ಯ ಎಂಬುದು ಈಗ ಬಹುತೇಕರಿಗೆ ಅರಿವಾಗಿದೆ. ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಾಗಿ ಕಾಗದದ ಬ್ಯಾಗ್ ಬಳಕೆ ಇದಕ್ಕೊಂದು ನಿದರ್ಶನ.

ಆದರೆ ಈಗ ಕಾಡುತ್ತಿರುವ ಆತಂಕ ಎಂದರೆ ಕಾಗದದ ಬಳಕೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದು. ಏಕೆಂದರೆ ಕಾಗದ ತಯಾರಾಗುವುದು ಮರದ ತಿರುಳಿನಿಂದ. ಈ ಹಿನ್ನೆಲೆಯಲ್ಲಿ ಅನೇಕ ಕಾರ್ಪೊರೇಟ್ ಸಂಸ್ಥೆಗಳು ಕಾಗದದ ಉಪಯೋಗ ನಿಯಂತ್ರಿಸುವುದರ ಜತೆಗೆ ಗ್ರಾಹಕರ ಸಹಕಾರವನ್ನೂ ಕೋರುತ್ತಿವೆ.

ಮೊಬೈಲ್ ಸೇವಾ ಸಂಸ್ಥೆ ವೊಡಾಫೋನ್ ಕೆಲ ವರ್ಷಗಳ ಹಿಂದಿನಿಂದಲೇ ಕರ್ನಾಟಕದಲ್ಲಿ ಕಾಗದರಹಿತ ಬಿಲ್ಲಿಂಗ್ ಆಯ್ಕೆ, ಇ-ಬಿಲ್‌ಗಳನ್ನು (ಎಲೆಕ್ಟ್ರಾನಿಕ್ ಬಿಲ್ಲಿಂಗ್) ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಅದರ ಶೇ 62ರಷ್ಟು ಪೋಸ್ಟ್‌ಪೇಡ್ ಗ್ರಾಹಕರು ಇ-ಬಿಲ್ಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಪ್ರತಿ ತಿಂಗಳು 57 ಮರಗಳನ್ನು ಪ್ರತಿ ತಿಂಗಳು ಸಂರಕ್ಷಿಸುವುದಕ್ಕೆ  ಸಹಾಯ ಮಾಡಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಇ-ಬಿಲ್  ಮೂಲಕ ಯಥೇಚ್ಛ ಕಾಗದ ಉಳಿಸಬಹುದು. ಅದರಿಂದ ಮರಗಳನ್ನು ಸಂರಕ್ಷಿಸಿದಂತೆಯೂ ಆಗುತ್ತದೆ.

ಕಂಪೆನಿಗಳು ಕೂಡ ವೆಚ್ಚದಲ್ಲಿ ಸಾಕಷ್ಟು ಉಳಿತಾಯ ಮಾಡಬಹುದು. ಏಕೆಂದರೆ ಫೋನ್, ಮೊಬೈಲ್ ಬಿಲ್ ಮುದ್ರಣ ಮತ್ತು ಪೋಸ್ಟೇಜ್ ವೆಚ್ಚ ಇ-ಬಿಲ್‌ಗಿಂತ 5 ಪಟ್ಟು ಹೆಚ್ಚಿನದಾಗುತ್ತದೆ ಎಂದು ವೊಡಾಫೋನ್ ಕರ್ನಾಟಕದ ಮುಖ್ಯ ಕಾರ‌್ಯನಿರ್ವಾಹಕ ಅಧಿಕಾರಿ ಬಿ.ಪಿ ಸಿಂಗ್ ಹೇಳುತ್ತಾರೆ.

ಇ- ಬಿಲ್ಲಿಂಗನ್ನು ಇತರ ಕಾರ್ಪೊರೇಟ್ ಸಂಸ್ಥೆಗಳು, ಜಲಮಂಡಳಿ, ವಿದ್ಯುತ್ ನಿಗಮ, ಪಾಲಿಕೆ ಮತ್ತಿತರ ಸರ್ಕಾರಿ ಸೇವಾ ಸಂಸ್ಥೆಗಳು ಅಳವಡಿಸಿಕೊಂಡರೆ ಕಾಡನ್ನು, ಅಮೂಲ್ಯ ಪರಿಸರವನ್ನು ಉಳಿಸಬಹುದು.

ಕೆಲ ವಾಸ್ತವಾಂಶ
* ಕಾಗದದ 3000 ಹಾಳೆಗಳನ್ನು ಮುದ್ರಿಸುವು ದೆಂದರೆ ಒಂದು ಮರದ ಬಳಕೆಗೆ ಸಮಾನ.

* ಈ- ಬಿಲ್ ಹೆಚ್ಚು ಸುರಕ್ಷಿತ. ಅದು ಸುಲಭವಾಗಿ ದುಷ್ಕರ್ಮಿಗಳ ಕೈಗೆ ಸಿಗುವುದಿಲ್ಲ. ಪಾಸ್‌ವರ್ಡ್ ಇಲ್ಲದೆ ಅದನ್ನು  ಓದಲು ಸಾಧ್ಯವಿಲ್ಲ.

* ಕೊರಿಯರ್, ಅಂಚೆಗಿಂತ ತ್ವರಿತವಾಗಿ ತಲುಪುತ್ತದೆ.

* ನಿಮ್ಮ ಕಂಪ್ಯೂಟರ್‌ನಲ್ಲಿ ದೀರ್ಘಕಾಲ ಇದನ್ನು ದಾಸ್ತಾನು ಮಾಡಿಡಬಹುದು. ಫೈಲಿಂಗ್ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ದಾಖಲೆ ನಿರ್ವಹಿಸುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

* ಸರಾಸರಿಯಾಗಿ ಮೊಬೈಲ್ ಬಿಲ್ 5 ಪುಟಗಳವರೆಗೆ ಇರುತ್ತದೆ. ಜೊತೆಗೆ ಕರೆ, ಎಸ್‌ಎಂಎಸ್ ವಿವರಗಳನ್ನು ಪಟ್ಟಿ ಮಾಡಿದ್ದಲ್ಲಿ ಇದು ಮತ್ತಷ್ಟು ಉದ್ದವಾಗಬಹುದಾಗಿದೆ.

ಮರಗಳನ್ನು ಉಳಿಸುವುದು ಮತ್ತು ಕಾಡಿನ ನಾಶವನ್ನು ತಡೆಯುವುದು ಕೇವಲ ಪರಿಸರವಾದಿಗಳಿಗೆ ಈಗ ಮೀಸಲಾಗಿಲ್ಲ. ಪ್ರತಿಯೊಬ್ಬರೂ ತಮ್ಮದೇ ವಿಧಾನದಲ್ಲಿ ಕೊಡುಗೆ ನೀಡಬಹುದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT