ಪ್ರಶ್ನೆ: 1. ಸಾವಕಾಶವಾಗಿ ಕಾಗದ ಎಳೆದಾಗ ಲೋಟ ಹೇಗೆ ಸರಿಯುತ್ತಿತ್ತು? ಯಾಕೆ?
2. ಕಾಗದವನ್ನು ತ್ವರಿತವಾಗಿ ಎಳೆದಾಗ ಲೋಟ ಹೇಗೆ ಸರಿಯಿತು? ಯಾಕೆ?
ಉತ್ತರ:
1. ಕಾಗದವನ್ನು ಸಾವಕಾಶವಾಗಿ ಎಳೆದಾಗ ಅದರ ಜೊತೆಗೆ ಲೋಟ ಕೂಡಾ ಸರಿಯುತ್ತಿತ್ತು. ಯಾಕೆಂದರೆ ಕಾಗದ ಮತ್ತು ಲೋಟದ ಮಧ್ಯೆ ಘರ್ಷಣೆ (Friction) ಏರ್ಪಟ್ಟು ಅದು ಕಾಗದದ ಜೊತೆ ಸರಿಯುತ್ತಿತ್ತು.
2. ಕಾಗದವನ್ನು ಒಂದೇ ಹೊಡೆತಕ್ಕೆ ತೀವ್ರವಾಗಿ ಎಳೆದಿದ್ದರಿಂದ ಲೋಟವು ಟೇಬಲ್ ಮೇಲೇ ಉಳಿದು, ಕಾಗದ ಮಾತ್ರ ಹೊರಬಂತು. ಯಾಕೆಂದರೆ ಇಲ್ಲಿ ಕಾಗದಕ್ಕೆ ಮಾತ್ರ ಚಲನೆ ದೊರೆಯಿತು. ನಿಂತ ಬಸ್ಸು ಒಮ್ಮೆಲೇ ಮುಂದೆ ಚಲಿಸಿದರೆ ನಿಂತವರು ಹಿಂದಕ್ಕೆ ಬೀಳುವುದಿಲ್ಲವೇ ಹಾಗೆ.
ಸಾಮಗ್ರಿ
ಟೇಬಲ್, ಎ4 ಅಳತೆಯ ಕಾಗದ, ಲೋಟ, ನೀರು.