ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟೇಜ್‌ನಲ್ಲಿ ವಿನೂತನ ಬೇಸಿಗೆ ದಿರಿಸು

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ದಿ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ (ಸಿಸಿಐಇ) ಬೇಸಿಗೆ ದಿರಿಸುಗಳ ಹೊಸ ಸಂಗ್ರಹವನ್ನು ಎಂ.ಜಿ.ರಸ್ತೆಯ ಕೇಂದ್ರದಲ್ಲಿ ಈಚೆಗೆ ಅನಾವರಣಗೊಳಿಸಿತು. ಈ ದಿರಿಸುಗಳ ಪ್ರದರ್ಶನ ಮತ್ತು ಮಾರಾಟ ಜೂನ್ 3ರವರೆಗೆ ನಡೆಯಲಿದೆ. ಇಲ್ಲಿ ಪುರುಷ ಹಾಗೂ ಸ್ತ್ರೀಯರ ಉಡುಪುಗಳ ದೊಡ್ಡ ಸಂಗ್ರಹವಿದೆ. 

 ಈ ಪ್ರದರ್ಶನದಲ್ಲಿ ಬೇಸಿಗೆಗೆ ತಂಪು ನೀಡಬಲ್ಲ ಉಡುಪುಗಳನ್ನು ನೋಡಿ, ಕೊಳ್ಳಬಹುದಾಗಿದೆ. ದೇಶದ ಎಲ್ಲ ಮೂಲೆಗಳಿಂದ ತರಿಸಲಾದ ಹತ್ತಿ ಸೀರೆಗಳು ಮತ್ತು ಪುರುಷರ ಶರ್ಟ್‌ಗಳು ಈ ಶ್ರೇಣಿಯಲ್ಲಿ ಲಭ್ಯ. ಸೀರೆಗಳ ಸಂಗ್ರಹದಲ್ಲಿ ಆಂಧ್ರಪ್ರದೇಶದ ನಿಜಾಂ ಅಂಚಿನ ಮಂಗಳಗಿರಿ ಸೀರೆಗಳು, ರಾಜಸ್ತಾನದ ಬಗ್ರು, ಇಂಡಿಗೋ ಮತ್ತು ಬ್ಲಾಕ್ ಪ್ರಿಂಟೆಡ್ ಸೀರೆಗಳು, ಪಶ್ಚಿಮ ಬಂಗಾಳದ ತಂಗೈಲ್, ಕಂತಾ ಮತ್ತು ಧಕೈ ಸೀರೆಗಳು, ಮಧ್ಯಪ್ರದೇಶದ ಚಂದ್ರಿ, ಒಡಿಶಾದ ಹತ್ತಿ ಮತ್ತಿತರೆ ವಸ್ತ್ರಗಳು ಪ್ರದರ್ಶನದಲ್ಲಿವೆ.

`ಸಿಸಿಐಇ ವಿನ್ಯಾಸಕರ ಗುಂಪಿನೊಂದಿಗೆ ಚರ್ಚಿಸಿ ಕುಶಲ ನೇಕಾರರು ಈ ಎಲ್ಲ ಸೀರೆಗಳನ್ನೂ ನೇಯ್ದಿದ್ದಾರೆ. ಈ ಪ್ರದರ್ಶನಕ್ಕಾಗಿ ನಾವು ಮೂರು ತಿಂಗಳು ಸಿದ್ಧತೆ ಮಾಡಿಕೊಂಡೆವು~ ಎನ್ನುತ್ತಾರೆ ಸಿಸಿಐಇನ ಮುಖರ್ಜಿ.

ಸಿಸಿಐಇ ಆಯ್ದ ಉತ್ಪನ್ನಗಳ ಮೇಲೆ ಶೇ 15ರ ರಿಯಾಯಿತಿ ಪ್ರಕಟಿಸಿದೆ. ಬೇಸಿಗೆ ದಿರಿಸುಗಳೊಂದಿಗೆ ಸಿಸಿಐಇಯಲ್ಲಿ ಇತರೆ ಕರಕುಶಲ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಫ್ಯಾಷನ್ ಉತ್ಪನ್ನಗಳೂ ಪ್ರದರ್ಶನ ಮತ್ತು ಮಾರಾಟಕ್ಕಿವೆ. ಕಾಟೇಜ್ ಎಂಪೋರಿಯಂ ಭಾರತೀಯ ಕುಶಲ ಕಲಾವಿದರಿಂದ ಸೃಷ್ಟಿಸಲಾದ ಅಪರೂಪದ ಕರಕುಶಲ ಉತ್ಪನ್ನಗಳ ಭಂಡಾರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT