ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಸಿದ್ಧೇಶ್ವರ ಜಾತ್ರೆ ಸಂಪನ್ನ

Last Updated 12 ಅಕ್ಟೋಬರ್ 2012, 9:40 IST
ಅಕ್ಷರ ಗಾತ್ರ

ಬನಹಟ್ಟಿ: ಕಳೆದ ಐದು ದಿವಸಗಳಿಂದ ಸಂಭ್ರಮ ಸಡಗರದೊಂದಿಗೆ ನಡೆಯುತ್ತಿದ್ದ ಕಾಡಸಿದ್ಧೇಶ್ವರ ಜಾತ್ರೆ ಗುರುವಾರ ಸಂಜೆ ಕಳಸೋತ್ಸವದೊಂದಿಗೆ ಮುಕ್ತಾಯಗೊಂಡಿತು.

ನಗರದ ಮಂಗಳವಾರ ಪೇಟೆಯಲ್ಲಿ ಶೃಂಗಾರಗೊಂಡ ಬೃಹತ್ ಕಳಸವನ್ನು ಮೊದಲು ರೈತರು ಹೊತ್ತುಕೊಂಡು ಊರಲ್ಲೆಲ್ಲಾ ಮೆರವಣಿಗೆ ಮಾಡಿದರು. ತಮ್ಮ ಮನೆಯ ಮುಂದೆ ಬರುವುದಕ್ಕಿಂತ ಪೂರ್ವದಲ್ಲಿ ಗಂಡು ಮಕ್ಕಳು ಪಟಾಕಿಗಳನ್ನು ಹಚ್ಚಿದರೆ ನಂತರ ಹೆಣ್ಣು ಮಕ್ಕಳು ರಂಗೋಲಿಯನ್ನು ಹಾಕಿ ಕಳಸ ಬಂದ ನಂತರ ನೀರು ಹಾಕಿ ನೈವೇದ್ಯ ಅರ್ಪಿಸಿದರು.

ಕಳಸಕ್ಕೆ ಈ ವರ್ಷ ಗಾಲಿಯನ್ನು ಕೂಡ್ರಿಸಿರುವುದರಿಂದ ಕಾಡಸಿದ್ಧೇಶ್ವರರ ದರ್ಶನ ಭಾಗ್ಯ ಪ್ರತಿಯೊಬ್ಬರಿಗೂ ಲಭಿಸಿತು.

ಕಳಸದ ವೈಶಿಷ್ಟ್ಯವೆಂದರೆ ಇಲ್ಲಿ ಕಲೆಗೆ ಹೆಚ್ಚಿನ ಮಹತ್ವ. ಕರಡಿ ಮಜಲು, ಸಂಭಾಳ ವಾದನ ಮತ್ತು ಹಲಗೆ ಮೇಳದವರು ಇಲ್ಲಿ ಭಾಗವಹಿಸಿದ್ದರು.

ಮಂಗಳವಾರ ಪೇಟೆಯಿಂದ ನಡೆಯುವ ಕಳಸೋತ್ಸವ ಸೋಮವಾರ ಪೇಟೆಯವರೆಗೆ ಹೋಗಿ ಅಲ್ಲಿ ಒಂದು ಗಂಟೆ ಕಾಲ ಇದ್ದು ಅಲ್ಲಿಯ ಎಲ್ಲ ಜನರಿಗೆ ದರ್ಶನದ ಅವಕಾಶ ಲಭಿಸಿದ ನಂತರ ತಿರುಗಿ ರಾತ್ರಿ ಹತ್ತು ಗಂಟೆಯ ಸುಮಾರಿಗೆ ದೇವಸ್ಥಾನವನ್ನು ತಲುಪಿತು.

ಐದು ದಿನಗಳ ಕಾಲ ನಡೆದ ಕಾಡಸಿದ್ಧೇಶ್ವರ ಜಾತ್ರೆಗೆ ಸಂಭ್ರಮದ ತೆರೆ ಬಿದ್ದಂತಾಗಿದೆ.

ಆದರೆ ವ್ಯಾಪಾರ ವಹಿವಾಟು ಇನ್ನೂ ಒಂದು ವಾರ ನಿರಂತರವಾಗಿ ನಡೆಯುತ್ತದೆ. ಈ ಬಾರಿ ಜಾತ್ರೆಗೆ ದಾಖಲೆಯ ಅಂಗಡಿಕಾರರು ಬೇರೆ ಬೇರೆ ಕಡೆಗಳಿಂದ ಬಂದಿರುವುದು ನಿಜಕ್ಕೂ ವಾಣಿಜ್ಯ ದೃಷ್ಟಿಯಿಂದ ಮಹತ್ವ ಪಡೆದಂತಾಗಿದೆ.

ಜಾತ್ರೆಯ ಈ ಸಂದರ್ಭದಲ್ಲಿ ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ಮೂರು ದಿನಗಳ ಕಾಲ ಶ್ರೀ ಕೃಷ್ಣ ಪಾರಿಜಾತ ನಡೆಯಿತು.ಒಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿವಾಗಿ, ಭಾವೈಕ್ಯ ಜಾತ್ರೆ ಇದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT