ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆಗಳ ಉಪಟಳಕ್ಕೆ ಬೀಳದ ಬೇಲಿ

Last Updated 27 ನವೆಂಬರ್ 2011, 9:55 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಕೆಯಿಂದ ಕಾಡಂಚಿನ ಗ್ರಾಮಗಳ ಜನರು ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದಾರೆ. ಆದರೆ ನಿರ್ವಹಣೆ ಕೊರತೆ, ಜನರ ಅಜ್ಞಾನದಿಂದ ಈ ಬೇಲಿ ನಾಶ ವಾಗುತ್ತಿದ್ದು, ಕಾಡಂಚಿನ ಊರುಗಳಲ್ಲಿ ಆನೆ ಹಾಗೂ ಇತರೇ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಲೇ ಇದೆ.

 ಸೋಲಾರ್ ಬೇಲಿ ಇಲ್ಲದ ಸಂದರ್ಭದಲ್ಲಿ ಈ ಭಾಗದಲ್ಲಿ ಕಾಡಾನೆಗಳು ಮತ್ತು ಕಾಡು ಮೃಗಗಳು  ಜಮೀನುಗಳಿಗೆ ನುಗ್ಗು ತ್ತಿದ್ದವು. ರೈತರು ಕಷ್ಟಪಟ್ಟು ಬೆಳೆದ ಬೆಳೆ ನಾಶ ಮಾಡುತ್ತಿದ್ದವು. ಬೇಲಿ ನಿರ್ಮಾಣದ ನಂತರ ಈ ಅವಾಂತರ ನಿಯಂತ್ರಣಕ್ಕೆ ಬಂದಿರುವುದು ನಿಜ. ಆದರೆ. ಸೋಲಾರ್ ವಿದ್ಯುತ್ ಬೇಲಿಯನ್ನು ಹಲವೆಡೆ ತೆಗೆದು ಹಾಕಲಾಗುತ್ತಿದೆ. ಕೆಲವು ರೈತರು ಕಾಡಿನೊಳಗೆ ಬರಲು ಈ ತಂತಿ ಬೇಲಿ ನಾಶ ಮಾಡುತ್ತಿದ್ದಾರೆ. ಇದರಿಂದ ಕಾಡುಮೃಗಗಳು ಸರಾಗವಾಗಿ ಹೊರಕ್ಕೆ ಬರುತ್ತಲಿವೆ.

ರೈತರು ಸೋಲಾರ್ ಬೇಲಿ ಸಂಪರ್ಕ ಕಡಿತ ಮಾಡಬಾರದು ಎಂದು ಅರಣ್ಯ ಇಲಾಖೆ ಮನವಿಗೆ ಅನೇಕ ಗ್ರಾಮಸ್ಥರು ಸೊಪ್ಪು ಹಾಕಿಲ್ಲ. ಓಂಕಾರ ಅರಣ್ಯ ಪ್ರದೇಶದಲ್ಲಿ ಸೋಲಾರ್ ಬೇಲಿ ಹಾಳಾದ ಅನೇಕ ನಿದರ್ಶನಗಳು ಕಾಣ ಸಿಗುತ್ತವೆ. ಇದರಿಂದ ವನ್ಯ ಪ್ರಾಣಿಗಳೊಂದಿಗೆ ಕಾಡಾನೆ ಸಂಘರ್ಷ ನಿರಂತರವಾಗಿದೆ.

`ಸೋಲಾರ್ ವಿದ್ಯುತ್ ಬೇಲಿ ಅಳವಡಿಕೆಯಿಂದ ಕಾಡು ಮೃಗಗಳ ಉಪಟಳ ತಪ್ಪಿಸ ಬಹುದು, ಆದರೆ ಇದರ ನಿರ್ವಹಣೆ ಸಮರ್ಪಕವಾಗಿರಬೇಕು. ಕಾಡಿನ ಸುತ್ತ ಈ ವ್ಯವಸ್ಥೆ ಇದ್ದರೆ ಮಾತ್ರ ಸೋಲಾರ್ ವಿದ್ಯುತ್ ಬೇಲಿ ಕೆಲಸ ನಿರ್ವಹಿಸುತ್ತದೆ. ಹಾಳಾದ ಬೇಲಿಯ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯದ ಕಡೆ ಜನರು ಜಾನುವಾರು ಬಿಡಬಾರದು~ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಒಟ್ಟಾರೆ ಕಾಡಿಗೆ ಸೋಲಾರ್ ವಿದ್ಯುತ್ ಬೇಲಿ ಅಳವಡಿಸಲು ಅಪಾರ ಪ್ರಮಾಣದ ಹಣ ಖರ್ಚಾಗುತ್ತದೆ.

ಸರ್ಕಾರದ ಅನುಮತಿ ಇಲ್ಲದೆ ಈ ಕಾರ್ಯ ಮಾಡಲು ಸಾಧ್ಯವಿಲ್ಲ. ಇದರ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗಿದೆ. ಮದ್ದೂರು ಅರಣ್ಯದಲ್ಲಿ ಅಳವಡಿದ ಸೋಲಾರ್ ಬೇಲಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಆ ಭಾಗದಲ್ಲಿ ಕಾಡುಮೃಗಗಳ ಉಪಟಳ ಕಡಿಮೆ ಯಾಗಿದೆ. ಕುಂದಕೆರೆ, ಬೊಮ್ಮನಹಳ್ಳಿ, ಚಿರಕನಹಳ್ಳಿ ಕಡೆಯೂ ಮದ್ದೂರು ಮಾದರಿಯ ತಂತಿ ಬೇಲಿ ಅಳವಡಿಕೆ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.

ರೈತರು ಸೋಲಾರ್ ಬೇಲಿಯ ನಿರ್ವಹಣೆಗೆ ಸಹಕರಿಸಬೇಕು. ಕಾಡಿನೊಳಗೆ ಅಕ್ರಮ ಪ್ರವೇಶ ಮಾಡಬಾರದು. ಬೇಲಿ ನಾಶ ಪಡಿಸುವ ಕಾರ್ಯಕ್ಕೆ ಮುಂದಾಗಬಾರದು. ತಮ್ಮ ಜಮೀನುಗಳಿಗೆ ಪರವಾನಗಿ ಇಲ್ಲದೇ ವಿದ್ಯುತ್ ತಂತಿ ಬೇಲಿ ಹಾಕ ಬಾರದು ಎಂಬ ಸಲಹೆ ನೀಡುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT