ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ `ಅಮೌರ್', ಕಾಡುವ ಆ ಹುಡುಗ

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
 
ನೆದರ್‌ಲೆಂಡ್‌ನ ನಿರ್ದೇಶಕ ಬೌಡೆವಿನ್ ಕೂಲೆ ನಿರ್ದೇಶನದ `ಕೌಬಾಯ್' ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು. ತಾಯಿ ಕಳೆದುಕೊಂಡ ಹುಡುಗ ಮತ್ತು ತಂದೆಯ ನಡುವಿನ ಬಾಂಧವ್ಯದ ಕುರಿತು ಚಿತ್ರ ಹೇಳುತ್ತದೆ. ಆ ಹುಡುಗನ ತುಂಟಾಟ, ಕಡೆಯಲ್ಲಿ ತಾಯಿಯ ಸಾವಿನ ಕುರಿತು ಅರಿತಾಗ ಆತ ಅದನ್ನು ಎದುರಿಸುವ ರೀತಿಯನ್ನು ಮನೋಜ್ಞವಾಗಿ ಹಿಡಿದಿಡಲಾಗಿದೆ. ಇದೊಂದು ರೀತಿಯಲ್ಲಿ ಮಕ್ಕಳ ಸಿನಿಮಾ ಕೂಡ.
 
`ಅಮೌರ್' ಇಬ್ಬರು ವಯಸ್ಸಾದ ದಂಪತಿಗಳ ನಡುವಿನ ಪ್ರೇಮ ಕತೆ. ಹೆಂಡತಿಗೆ ಆರೋಗ್ಯ ಕೆಟ್ಟಿದೆ. ಆಕೆಯ ಸಂಕಟವನ್ನು ಗಂಡನ ಕೈಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ತುಂಬಾ ಸೂಕ್ಷ್ಮ ರೀತಿಯಲ್ಲಿ ಎರಡು ಜೀವಗಳ ತುಮುಲಗಳನ್ನು ನಿರ್ದೇಶಕ ಮೈಕೆಲ್ ಹನೇಕೆ ಚಿತ್ರಿಸುತ್ತ ಹೋಗುತ್ತಾರೆ. 
 
ಫಿನ್‌ಲೆಂಡ್‌ನ ಅಕಿ ಕೌರಿಸ್ಮಕಿ ನಿರ್ದೇಶಿಸಿರುವ `ಲೆ ಹೌರೆ' ಚಿತ್ರವನ್ನು ನೋಡಬೇಕೆಂದಿದ್ದೇನೆ. ಹಾಗೆಯೇ ಪಂಜಾಬಿ ಚಿತ್ರ `ಆನೇ ಘೋರೆ ದ ದಾನ್', ಸುಮಿತ್ರಾ ಭಾವೆ ಹಾಗೂ ಸುನೀಲ್ ಸುಕ್ತಾಂಕರ್ ನಿರ್ದೇಶಿಸಿರುವ `ಸಂಹಿತಾ' ಕೂಡ ನೋಡಲೇಬೇಕಾದ ಚಿತ್ರಗಳು.
ಗಿರೀಶ್ ಕಾಸರವಳ್ಳಿ  ಅಂತರರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT