ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣೆಯಾದವರಿಗೆ ಶೋಧ: ಮೃತರ ಸಂಖ್ಯೆ 7ಕ್ಕೆ ಏರಿಕೆ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

 ಗಿಗ್ಲಿಯೊ ದ್ವೀಪ (ಇಟಲಿ): ಬಂಡೆಗೆ ಅಪ್ಪಳಿಸಿದ `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗು ದುರಂತದಲ್ಲಿ ನಾಪತ್ತೆಯಾಗಿರುವವರ ಶೋಧ ಕಾರ್ಯದಲ್ಲಿ ನಿರತವಾಗಿರುವ ರಕ್ಷಣಾ ಸಿಬ್ಬಂದಿ, ಮಂಗಳವಾರ ಸ್ಫೋಟಕ ಬಳಸಿ ಈ ವೈಭವೋಪೇತ ಹಡಗಿನ ಅವಶೇಷಗಳಲ್ಲಿ ತೂತು ಕೊರೆದರು.

ಈ ಸಂದರ್ಭದಲ್ಲಿ ಒಂದು ಮೃತದೇಹ ಪತ್ತೆಯಾಗಿದ್ದು, ಇದರಿಂದ ದುರಂತದಲ್ಲಿ ಸಾವಿ ಗೀಡಾದವರ ಸಂಖ್ಯೆ 7ಕ್ಕೆ ಏರಿದೆ.

ಈ ನಡುವೆ, ದುರಂತಕ್ಕೆ ಪ್ರಮುಖ ಕಾರಣ ಎನ್ನಲಾದ ಕ್ಯಾಪ್ಟನ್ ಫ್ರಾನ್ಸಿಸ್ಕೊ ಶೆಟ್ಟಿನೊ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.

`ಕಾಣೆಯಾದವರಿಗಾಗಿ ಹುಡುಕಾಟವನ್ನು ತೀವ್ರಗೊಳಿಸಲಾಗಿದ್ದು, ಇವರೆಲ್ಲ ಬದುಕುಳಿದಿರುವ ಸಾಧ್ಯತೆ ಕಡಿಮೆ~ ಎಂದು ಕಡಲು ಕಾವಲು ಪಡೆಯ ಮುಖ್ಯಸ್ಥರಾದ ಮಾರ್ಕೊ ಬ್ರುಸ್ಕೊ ಅವರು ತಿಳಿಸಿದ್ದಾರೆ.

`ಹಡಗಿನೊಳಗಿನ ಪರಿಸ್ಥಿತಿ ತುಂಬಾ ಹದಗೆಟ್ಟಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟಾಗಿದೆ~ ಎಂದು ಅವರು ಹೇಳಿದ್ದಾರೆ.

12 ಮಂದಿ ಜರ್ಮನ್ ಪ್ರಜೆಗಳು, ಇಟಲಿಯ 6, ಫ್ರಾನ್ಸ್‌ನ ನಾಲ್ವರು, ಇಬ್ಬರು ಅಮೆರಿಕನ್ನರು, ಹಂಗೇರಿ, ಭಾರತ ಮತ್ತು ಪೆರುವಿನ ತಲಾ ಒಬ್ಬ ಪ್ರಜೆ ಕಾಣೆಯಾದವರಲ್ಲಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT