ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನಿನಿಂದಲೇ ಭ್ರಷ್ಟಾಚಾರ ತಡೆ ಅಸಾಧ್ಯ: ತುಷಾರ ಗಾಂಧಿ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಅಣ್ಣಾ ಹಜಾರೆ ಅವರನ್ನು ಗಾಂಧೀಜಿ ತತ್ವಗಳ ಚೌಕಟ್ಟಿನಲ್ಲಿಟ್ಟು ಪರಾಮರ್ಶಿಸುವುದು ಸರಿಯಲ್ಲ ಎಂದು ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ಭವನದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, `ಅಣ್ಣಾ ಹಜಾರೆ ಇವತ್ತು ತಾವು ನಡೆಸುತ್ತಿರುವ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದಕ್ಕೆ ಗಾಂಧೀಜಿ ತತ್ವಗಳ ಲೇಪನ ಸೂಕ್ತವಲ್ಲ. ಆದಾಗ್ಯೂ ಅವರ ಚಳವಳಿ ದೇಶದಲ್ಲಿನ ಭ್ರಷ್ಟಾಚಾರವನ್ನು ಕೊನೆಯಾಗಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದು ತಮಗೆ ಅನುಮಾನದ ಸಂಗತಿ~ ಎಂದು ಹೇಳಿದರು.

`ಕೇವಲ ಕಾನೂನು ರೂಪಿಸಿದ ಮಾತ್ರಕ್ಕೆ ದೇಶದಲ್ಲಿನ ಭ್ರಷ್ಟಾಚಾರ ಕೊನೆಯಾಗುವುದಿಲ್ಲ~ ಎಂದ ಅವರು, `ಎಲ್ಲಿಯತನಕ ನಾವು ಲಂಚವನ್ನು ಕೊಡುವುದಿಲ್ಲ ಮತ್ತು ಪಡೆಯುವುದಿಲ್ಲ ಎಂದು ತೀರ್ಮಾನ ಮಾಡುತ್ತೇವೆಯೊ ಅಲ್ಲಿಯವರೆವಿಗೂ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಲೇ ಇರುತ್ತದೆ~ ಎಂದು ತಿಳಿಸಿದರು.

`ಪ್ರಪಂಚ ಬದಲಾಗಬೇಕು ಎಂದು ಬಯಸುವ ಪ್ರತಿಯೊಬ್ಬರೂ ಮೊದಲು ಸ್ವಯಂ ಬದಲಾವಣೆಗೆ ಒಳಪಡಬೇಕು ಎಂಬ ಬಾಪೂಜಿಯವರ ಆಶಯ ಇಂದು ಹೆಚ್ಚು ಪ್ರಸ್ತುತವಾಗಿದೆ. ನಾವೆಲ್ಲ ಇವತ್ತು ನೈತಿಕವಾಗಿ ಎಷ್ಟು ಭ್ರಷ್ಟರಾಗಿದ್ದೇವೆ ಎಂಬುದರತ್ತ  ಹಜಾರೆ ಕನ್ನಡಿ ಹಿಡಿಯುವ ಅವಶ್ಯಕತೆ ಇದೆ~ ಎಂದು ತುಷಾರ ಗಾಂಧಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT