ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಅರಿವು ಸರ್ವರಿಗೂ ಅಗತ್ಯ

Last Updated 25 ಜುಲೈ 2012, 8:25 IST
ಅಕ್ಷರ ಗಾತ್ರ

ಬಾದಾಮಿ: ದೇಶದ ಸಂವಿಧಾನದಲ್ಲಿ ಎಲ್ಲ ಪ್ರಜೆಗಳಿಗೆ ಅನ್ವಯವಾಗುವಂತೆ ಕಾನೂನನ್ನು ರಚಿಸಲಾಗಿದೆ. ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಕಾನೂನಿನ ಅಡಿಯಲ್ಲಿ ಬದುಕಬೇಕು. ಪ್ರತಿಯೊಬ್ಬರು ಅಕ್ಷರಸ್ಥರಾಗಿ ಕಾನೂನನ್ನು ಅರಿತುಕೊಳ್ಳಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ನಾರಾಯಣಪ್ಪ ಹೇಳಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಜರುಗಿದ ಸಮಾರಂಭವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

 ಶೇ70ರಷ್ಟು ಜನಸಂಖ್ಯೆ ಇರುವ ಭಾರತ ದೇಶದ ಹಳ್ಳಿಗಳಲ್ಲಿರುವ ಜನತೆಗೆ ಸಾಕ್ಷರತೆಯ ಕೊರತೆಯಿಂದ ಕಾನೂನಿನ ಅರಿವು ಇಲ್ಲ. ಹೀಗಾಗಿ ಸಾಕ್ಷರತೆಯೊಂದಿಗೆ ಕಾನೂನು ಅರಿವು ಕೂಡ ಪ್ರತಿಯೊಬ್ಬರಿಗೂ ಅವಶ್ಯ ಎಂದರು.

  ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದುಪಯೋಗ ಪಡೆದು ರಾಜೀ ಸಂಧಾನದ ಮೂಲಕ ನ್ಯಾಯಗಳನ್ನು ಇತ್ಯರ್ಥಪಡಿಸಿ ಕೊಳ್ಳಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧೀಶ ಜಿ.ಸಿ.ಹಡಪದ ಹೇಳಿದರು.

ತಹಶೀಲ್ದಾರ ಮಹೇಶ ಕರ್ಜಗಿ ಕಂದಾಯ ಇಲಾಖೆಯ ಸಕಾಲದ ಸೌಲಭ್ಯಗಳನ್ನು ಮತ್ತು ಸರ್ಕಲ್ ಇನಸ್ಪೆಕ್ಟರ್ ಆರ್.ಎಸ್.ಪಾಟೀಲ ಕಾನೂನಿನ ಅವಶ್ಯಕತೆ ಕುರಿತು ತಿಳಿಸಿದರು. ವಕೀಲ ಎಸ್.ಆರ್.ಭರಾಣಪುರ  ಕಾನೂನು ಸೇವಾ ಪ್ರಾಧಿಕಾರದ ಸೌಲಭ್ಯಗಳ ಬಗ್ಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ನಂದಕುಮಾರ, ವಕೀಲರ ಸಂಘದ ಅಧ್ಯಕ್ಷ ಎ.ಬಿ.ಉದ್ನೂರ  ವೇದಿಕೆ ಯಲ್ಲಿದ್ದರು. ಎಂ.ಎಂ.ಜಾತಗೇರ ಸ್ವಾಗತಿಸಿದರು. ಪ್ರಕಾಶ ಕಲಾಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT